ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಕೊನೇ ದಿನ ಬುಧವಾರ ಧರ್ಮ ಧ್ವಜಾವರೋಹಣ, ಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾ ಪೂಜೆ, ಮಹಾಭಿಷೇಕ, ಅವಭೃತ ಸ್ನಾನದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವ ಸಂಪನ್ನ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಕೊನೇ ದಿನ ಬುಧವಾರ ಧರ್ಮ ಧ್ವಜಾವರೋಹಣ, ಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾ ಪೂಜೆ, ಮಹಾಭಿಷೇಕ, ಅವಭೃತ ಸ್ನಾನದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಬುಧವಾರ ಕ್ಷೇತ್ರಾಧಿದೇವತೆಗಳಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾಪೂಜೆ, ಮಹಾಭಿಷೇಕ, ಅವಭೃತ ಸ್ನಾನ ಮಾಡಿ ಬಿಂದು ಸರೋವರದಲ್ಲಿರುವ ಮತ್ಸ್ಯಗಳಿಗೆ ಪ್ರಸಾದ ಅರ್ಪಿಸಿ ಜಾತ್ರಾ ಮಹೋತ್ಸವವನ್ನು ಮುಕ್ತಾಯಗೊಳಿಸಲಾಯಿತು.
ಅವಭೃತ ಸ್ನಾನ ಎಂದರೇನು:
ಕಳೆದ 9 ದಿನಗಳಿಂದ ನಡೆದ ಎಲ್ಲಾ ಕಾರ್ಯಕ್ರಮಗಳು ದೇವರ ಕರುಣೆಯಿಂದ ಪರಿಪೂರ್ಣಗೊಂಡಿವೆ. ದೇವರ ಸೇವಾ ಕೈಂಕರ್ಯಗಳನ್ನು ಮಾಡಲು ಸಿಕ್ಕ ಅವಕಾಶಗಳಿಗೆ ಪ್ರತೀಕವಾಗಿ ಎಲ್ಲವೂ ಮುಗಿದ ಮೇಲೆ ಅವಭೃತ ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಪ್ರಾರ್ಥಿಸುವ ಮೂಲಕ 9 ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಕಾಯಾ ವಾಚಾ ಮನಸಾ ಇಂದ್ರೀಯ ಬುದ್ದೇ ಇವುಗಳಲ್ಲಿ ಯಾವುದಾದರೂ ಸಮಸ್ಯೆ, ತಪ್ಪು ನಪ್ಪುಗಳು ನಡೆದಿದ್ದರೆ ನಮ್ಮನ್ನು ಕ್ಷಮಿಸು ಭಗವಂತ ಎಂದು ದೇವರಲ್ಲಿ ಮೊರೆಯಿಟ್ಟು ಪ್ರಾರ್ಥಿಸುವುದನ್ನೇ ಅವಭೃತ ಸ್ನಾನ ಎಂದು ಹೇಳಲಾಗುತ್ತದೆ.
ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀಕ್ಷೇತ್ರದ ಚೈತನ್ಯನಾಥಸ್ವಾಮೀಜಿ, ಸತ್ಕೀರ್ತಿನಾಥ ಸ್ವಾಮೀಜಿ, ಸಾಯಿಕೀರ್ತಿನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ರಾಮಚಂದ್ರು ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು. ಇಂದಿನಿಂದ ಕಾಳೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಹಲಗೂರು:ಸಮೀಪದ ಯತ್ತಂಬಾಡಿ ಕಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾ.5ರಿಂದ ಮಾ.7ರವರೆಗೆ ಮೂರು ದಿನಗಳ ಕಾಲ ಸಡಗರ, ಸಂಭ್ರಮದಿಂದ ನಡೆಯಲಿದೆ.
ಮಾ.7ರಂದು ರಾತ್ರಿ 8 ರಿಂದ 10 ಗಂಟೆವರೆಗೆ ವೀರ ಮಕ್ಕಳ ಕುಣಿತ, 10 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಶಿಂಷಾ ನದಿಯಲ್ಲಿ ಹೂ ಹೊಂಬಾಳೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮುಂಜಾನೆ 4 ಗಂಟೆಯಿಂದ ದೇವರ ಮೆರವಣಿಗೆ ನಡೆಯಲಿದೆ.ಮಾ.6 ರಂದು ಬೆಳಗ್ಗೆ 8 ರಿಂದ 10 ಗಂಟೆವರೆಗೆ ಒಲೆಬಂಡಿ ಕಾರ್ಯಕ್ರಮ, ಸಂಜೆ ಮರೆವಣಿಗೆ ಮತ್ತು ದೇವರ ಉತ್ಸವ, ರಾತ್ರಿ ದೇವರಿಗೆ ನೈವೇದ್ಯ ಕಾರ್ಯಕ್ರಮ ನಡೆಯಲಿದೆ. ಮಾ.7 ರಂದುದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ. ಸರ್ಕಾರದ ಆದೇಶದಂತೆ ದೇವಾಲಯದ ಆವರಣದಲ್ಲಿ ಪ್ರಾಣಿ ಬಲಿ ನಿಷೇಧ ಮಾಡಲಾಗಿದೆ. ಭಕ್ತಾದಿಗಳು ಸಹಕರಿಸಬೇಕೆಂದು ಮಳವಳ್ಳಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.