ತಾಲೂಕಿನ ಮರಳಾಪುರ ಗ್ರಾಮದ ನಿವಾಸಿ ಸ್ವಾಮಿ ಮರಳಾಪುರ ಅವರನ್ನು ಮೈಸೂರು ವಿಭಾಗದ (4 ಜಿಲ್ಲೆ) ಬಿಜೆಪಿ ಪ್ರಭಾರಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇಮಿಸಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಆದೇಶ
ಹಳ್ಳಿ ವ್ಯಕ್ತಿಗೆ ಒಲಿದ ಬಿಜೆಪಿಯ ಜವಾಬ್ದಾರಿ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಮರಳಾಪುರ ಗ್ರಾಮದ ನಿವಾಸಿ ಸ್ವಾಮಿ ಮರಳಾಪುರ ಅವರನ್ನು ಮೈಸೂರು ವಿಭಾಗದ (4 ಜಿಲ್ಲೆ) ಬಿಜೆಪಿ ಪ್ರಭಾರಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇಮಿಸಿದ್ದಾರೆ.
ಬಿಜೆಪಿ ಸಂಘಟನೆಗೆ ಮಹತ್ತರವಾದ ಜವಾಬ್ದಾರಿ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆ ಸೇರಿ ಮೈಸೂರು ವಿಭಾಗದ ಪ್ರಭಾರಿಯಾಗಿ ನೇಮಕಗೊಳಿಸಿದ್ದಾರೆ.
ಸ್ವಾಮಿ ಹಿನ್ನಲೆ:ಸ್ವಾಮಿ ಮರಳಾಪುರ ಮೂಲತಃ ಬೇಗೂರು ಬಳಿಯ ಮರಳಾಪುರದಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ವಿದ್ಯಾರ್ಥಿ ಪರಿಷತ್‌ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಅಲ್ಲದೇ, ವಿದ್ಯಾರ್ಥಿ ಚಳವಳಿ ಮೂಲಕ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಪಕ್ಷ ಹಾಗೂ ಸಂಘಟನೆಯಲ್ಲಿ ಹೆಸರು ಗಳಿಸಿದ್ದಾರೆ.ಹಳ್ಳಿಗಾಡಿನ ಮರಳಾಪುರದ ಹೈದನೀಗ ವಿದ್ಯಾರ್ಥಿ ಪರಿಷತ್‌ನಲ್ಲಿ ಕೆಲಸ ಮಾಡುವ ಜೊತೆಗೆ ಒಳ್ಳೆಯ ಹೆಸರು ಪಡೆದ ಸ್ವಾಮಿ ಮರಳಾಪುರ ಇದೀಗ ಮೈಸೂರು ವಿಭಾಗದ ಬಿಜೆಪಿ ಪ್ರಭಾರಿಯಾಗಿ ಹೊಣೆ ಹೊತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.