ತಗ್ಗಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಪುರ ಸುರೇಶ್ ಆಯ್ಕೆ

KannadaprabhaNewsNetwork |  
Published : Mar 05, 2026, 01:45 AM IST
4ಕೆಎಂಎನ್ ಡಿ18 | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ತಗ್ಗಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪುರ ಗ್ರಾಮದ ಸುರೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮಂಡ್ಯ:

ತಾಲೂಕಿನ ತಗ್ಗಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪುರ ಗ್ರಾಮದ ಸುರೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹಿಂದಿನ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಸೊಸೈಟಿ ನಿರ್ದೇಶಕ ಸುರೇಶ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರನ್ನು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ನೂತನ ಉಪಾಧ್ಯಕ್ಷ ಪುಟ್ಟರಾಜು ಸೇರಿದಂತೆ ಎಲ್ಲಾ ನಿರ್ದೇಶಕರು ಅಭಿನಂದಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿದ್ದರಾಜು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಸಂಘವು ತಗ್ಗಹಳ್ಳಿ, ಹಳುವಾಡಿ, ಟಿ.ಮಲ್ಲಿಗೆರೆ, ಪುರ ಹಾಗೂ ಕಮ್ಮನಾಯಕನಹಳ್ಳಿ ಗ್ರಾಮಗಳ ಜನರ ಷೇರುದಾರರನ್ನು ಹೊಂದಿದೆ.ಇಂದು ಮಂಡ್ಯಕ್ಕೆ ಚಿನ್ಮಯ ಅಮೃತ ಯಾತ್ರೆ

ಕನ್ನಡಪ್ರಭ ವಾರ್ತೆ ಮಂಡ್ಯಚಿನ್ಮಯ ಮಿಷನ್ ಸ್ಥಾಪನೆಯಾಗಿ ೭೫ ವರ್ಷಗಳು ಪೂರೈಸಿರುವ ಸವಿನೆನಪಿಗಾಗಿ ಚಿನ್ಮಯ ಅಮೃತ ಯಾತ್ರೆ ನಾಳೆ (ಮಾ.೫)ರಂದು ಸಂಜೆ ೫ ಗಂಟೆಗೆ ನಗರಕ್ಕೆ ಆಗಮಿಸಲಿದೆ ಎಂದು ಚಿನ್ಮಯ ಮಿಷನ್ ಜಿಲ್ಲಾ ಪ್ರಚಾರಕ ಆದಿತ್ಯಾನಂದ ಅವರು ತಿಳಿಸಿದರು.

ಅಮೃತ ಯಾತ್ರೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿದೆ. ಚಿನ್ಮಯ ಮಿಷನ್ ಆವರಣದಿಂದ ಆರಂಭವಾಗಲಿರುವ ಮೆರವಣಿಗೆಯು ಕೆ.ಆರ್.ರಸ್ತೆ ಮುಖಾಂತರ ಸಂಚರಿಸಿ ಕಲಾಮಂದಿರವನ್ನು ತಲುಪಲಿದೆ. ಮೆರವಣಿಗೆಯಲ್ಲಿ ಕಲಾತಂಡಗಳು, ಭಜನಾಮಂಡಳಿಗಳು, ಭಕ್ತರು ಪಾಲ್ಗೊಳ್ಳುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಂಜೆ ೬ ಇಂದ ೮ ಗಂಟೆಯವರೆಗೆ ಜ್ಞಾನ ಮತ್ತು ಭಕ್ತಿಯ ಸಂಗಮವಾಗಲಿರುವ ವಿಶೇಷ ಸಭಾ ಕಾರ್ಯಕ್ರಮ ನಡೆಯಲಿದೆ. ದಿವ್ಯಸಾನ್ನಿಧ್ಯವನ್ನು ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹುಬ್ಬಳ್ಳಿ ಚಿನ್ಮಯ ಮಿಷನ್ ಸ್ವಾಮಿ ಕೃತಾತ್ಮನಂದ, ಚಿನ್ಮಯ ಮಿಷನ್ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರು ಭಾಗವಹಿಸುವರು. ಇದರಲ್ಲಿ ಚಿನ್ಮಯಾನಂದರ ಗೀತಾ ಪ್ರವಚನವನ್ನು ಕೃತಕ ಬುದ್ಧಿಮತ್ತೆ ಮೂಲಕ ಕನ್ನಡ ಭಾಷೆಯಲ್ಲಿ ರೂಪಿಸಿ ಪ್ರದರ್ಶಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಡಾ.ನಾರಾಯಣ್, ಯೋಗಾನಂದ, ಜಗದೀಶ್, ರಾಜನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಾಂತಿಕಾರಿ ಪುರುಷರ ಆದರ್ಶ ರೂಢಿಸಿಕೊಳ್ಳಿ: ವಿನಯಕುಮಾರ್‌
ಆದಿಚುಂಚನಗಿರಿ ಜಾತ್ರೆ ಮಹೋತ್ಸವದ ಕೊನೇ ದಿನ ಗಂಗಾಪೂಜೆ