ಗಂಗಾಧರೇಶ್ವರ ಸ್ವಾಮಿ ವಿಜೃಂಭಣೆಯ ತೆಪ್ಪೋತ್ಸವ

KannadaprabhaNewsNetwork |  
Published : Apr 20, 2025, 01:53 AM IST
ಪೋಟೋ 5 : ಶಿವಗಂಗೆಯಲ್ಲಿ ನಡೆದ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿಯ ತೆಪ್ಪೋತ್ಸವಕ್ಕೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಶಿವಗಂಗೆಯಲ್ಲಿ ನಡೆದ ಹೊನ್ನಾದೇವಿ ಗಂಗಾಧರೇಶ್ವರಸ್ವಾಮಿ ತೆಪ್ಪೋತ್ಸವಕ್ಕೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ದಾಬಸ್‍ಪೇಟೆ: ಶಿವಗಂಗೆಯಲ್ಲಿ ನಡೆದ ಹೊನ್ನಾದೇವಿ ಗಂಗಾಧರೇಶ್ವರಸ್ವಾಮಿ ತೆಪ್ಪೋತ್ಸವಕ್ಕೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಕಲ್ಯಾಣಿಯಲ್ಲಿ ವಿದ್ಯುತ್ ದೀಪಗಳಲ್ಲಿ ಅಲಂಕಾರಗೊಂಡ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿಯ ಮೂರ್ತಿಯೂ ವಿರಾಜಮಾನವಾಗಿ ಪುಷ್ಪಗಳೊಂದಿಗೆ ಅಲಂಕಾರಗೊಂಡ ತೆಪ್ಪವನ್ನು ಅಂಬಿಗರು ಭಕ್ತಿ, ಶ್ರದ್ಧೆಯಿಂದ ಕಲ್ಯಾಣಿ ಸುತ್ತಲೂ ಸಾಗಿಸಿದರು. ವಿದ್ವಾನ್ ತೊರೆಕೆಂಪೋಹಳ್ಳಿ ನವೀನ್ ಕುಮಾರ್ ನೇತೃತ್ವದ ಅರ್ಚಕರ ವೃಂದ ತೆಪ್ಪೋತ್ಸವಕ್ಕೆ ಧಾರ್ಮಿಕ ಪೂಜೆ ಸಲ್ಲಿಸಿತು. ಅಪಾರ ಭಕ್ತರು ತೆಪ್ಪೋತ್ಸವವನ್ನು ಕಣ್ಣುಂಬಿಕೊಂಡರು. ತೆಪ್ಪೋತ್ಸವ ನಡೆದು ಕೆಲವೇ ಕ್ಷಣಗಳಲ್ಲಿ ವರುಣನ ಸಿಂಚನವಾಯಿತು. ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರು ಖುಷಿಯಿಂದಲೇ ವರುಣರಾಯನನ್ನು ಸ್ವಾಗತಿಸಿ ದೇವರಿಗೆ ಜಯಘೋಷ ಹಾಕಿದರು. ಈ ವೇಳೆ ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ತಣ್ಣಿರುಹಳ್ಳಿ ಮಠದ ವಿಜಯಕುಮಾರ ಶ್ರೀ, ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀ, ಬಂಡೆಮಠದ ಮಹಾಲಿಂಗ ಶ್ರೀ, ವಿಜಯಪುರ ಮಠದ ಮಹಾದೇವ ಶ್ರೀ ಉಪಸ್ಥಿತರಿದ್ದರು.(ಪ್ಯಾನಲ್‌ ಫೋಟೋ)

ಶಿವಗಂಗೆಯಲ್ಲಿ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ತೆಪ್ಪೋತ್ಸವಕ್ಕೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ತಣ್ಣಿರುಹಳ್ಳಿ ಮಠದ ವಿಜಯಕುಮಾರ ಶ್ರೀ, ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ