ಅಮ್ಮನಹಟ್ಟಿಯಲ್ಲಿ ಗಂಗಾಮಾಳಿಕಾ ದೇವಿ ಜಾತ್ರೆ

KannadaprabhaNewsNetwork |  
Published : Mar 23, 2026, 01:30 AM IST
ಶ್ರೀಕ್ಷೇತ್ರ ಅಮ್ಮನಹಟ್ಟಿ ಗ್ರಾಮದಲ್ಲಿ ಗಂಗಾಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವ | Kannada Prabha

ಸಾರಾಂಶ

ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯವರಿಗೆ ಕಳಸ, ಕನ್ನಡಿ ಹಾಗೂ ನಡೆಮುಡಿ ಸಮರ್ಪಣೆ ಮಾಡಿ ಸಿಂಗನಕೆರೆಯಲ್ಲಿ ಗಂಗಾಸ್ನಾನದೊಂದಿಗೆ ಪೂಜಾ ಕಾರ್ಯಗಳು ಪ್ರಾರಂಭಗೊಂಡವು. ನಂತರ ವೈಭವಯುತ ಮೆರವಣಿಗೆಯ ಮೂಲಕ ದೇವಿಯನ್ನು ಗ್ರಾಮ ಪ್ರವೇಶ ಮಾಡಿಸಲಾಯಿತು. ಗ್ರಾಮದ ಹೆಬ್ಬಾಗಿಲಿನಲ್ಲಿ ಓಕಳಿ ಸೇವೆ, ಹೂವಿನ ಮಂಟಪ ಸೇವೆ ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಗಂಗಾಮಾಳಿಕಾ ದೇವಿಯವರಿಗೆ ಬೇಟೆ ಮಣೇವು ಸೇರಿದಂತೆ ವಿವಿಧ ಉತ್ಸವಗಳು ನಡೆಯಿತು. ನಂತರ ದೇವಾಲಯ ಪ್ರವೇಶ, ಮಹಾಮಂಗಳಾರತಿ, ದೀಪೋತ್ಸವ ಹಾಗೂ ಗುಗ್ಗಳ ಸೇವೆಗಳು ಭಕ್ತಿಭಾವದಿಂದ ನೆರವೇರಿಸಲಾಯಿತು.

ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿಯ ಶ್ರೀಕ್ಷೇತ್ರ ಅಮ್ಮನಹಟ್ಟಿ ಗ್ರಾಮದಲ್ಲಿ ಗಂಗಾಮಾಳಿಕಾ ದೇವಿಯವರ ಜಾತ್ರಾ ಮಹೋತ್ಸವವು ಭಕ್ತಿಭಾವದ ವಾತಾವರಣದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯವರಿಗೆ ಕಳಸ, ಕನ್ನಡಿ ಹಾಗೂ ನಡೆಮುಡಿ ಸಮರ್ಪಣೆ ಮಾಡಿ ಸಿಂಗನಕೆರೆಯಲ್ಲಿ ಗಂಗಾಸ್ನಾನದೊಂದಿಗೆ ಪೂಜಾ ಕಾರ್ಯಗಳು ಪ್ರಾರಂಭಗೊಂಡವು. ನಂತರ ವೈಭವಯುತ ಮೆರವಣಿಗೆಯ ಮೂಲಕ ದೇವಿಯನ್ನು ಗ್ರಾಮ ಪ್ರವೇಶ ಮಾಡಿಸಲಾಯಿತು. ಗ್ರಾಮದ ಹೆಬ್ಬಾಗಿಲಿನಲ್ಲಿ ಓಕಳಿ ಸೇವೆ, ಹೂವಿನ ಮಂಟಪ ಸೇವೆ ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಗಂಗಾಮಾಳಿಕಾ ದೇವಿಯವರಿಗೆ ಬೇಟೆ ಮಣೇವು ಸೇರಿದಂತೆ ವಿವಿಧ ಉತ್ಸವಗಳು ನಡೆಯಿತು. ನಂತರ ದೇವಾಲಯ ಪ್ರವೇಶ, ಮಹಾಮಂಗಳಾರತಿ, ದೀಪೋತ್ಸವ ಹಾಗೂ ಗುಗ್ಗಳ ಸೇವೆಗಳು ಭಕ್ತಿಭಾವದಿಂದ ನೆರವೇರಿಸಲಾಯಿತು.ಈ ಜಾತ್ರೆಯ ವಿಶೇಷ ಆಕರ್ಷಣೆಯಾಗಿರುವ ದೊಡ್ಡಮ್ಮ ದೇವಿಯ ದರ್ಶನಕ್ಕಾಗಿ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ವರ್ಷಕ್ಕೆ ಒಂದೇ ಬಾರಿ ದೊರೆಯುವ ಈ ದರ್ಶನ ಭಕ್ತರಿಗೆ ಅಪರೂಪದ ಅನುಭವವಾಗಿದ್ದು, “ಬಂಗಾರದ ಒಡತಿ” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿರುವ ದೇವಿಯ ದರ್ಶನಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದರು.ಜಾತ್ರೆಗೆ ಆಗಮಿಸಿದ ಭಕ್ತರಿಗೆ ಗಂಗಾಮಾಳಿಕಾ ದೇವಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಶಿಸ್ತಿನಿಂದ ಪ್ರಸಾದ ಸ್ವೀಕರಿಸಿ ಧನ್ಯತೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ
ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳಿಂದ ಉತ್ತಮ ಸಮಾಜ ನಿರ್ಮಾಣ: ಹನುಮಂತಯ್ಯ