ರಾಮಮೂರ್ತಿ ನವಲಿ
ಗಂಗಾವತಿ:ಸುಗಮ ಸಂಚಾರ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಅಮೃತ ಸಿಟಿ ಯೋಜನೆ ನಿರ್ಮಿಸಿರುವ ದಾರಿ ಈಗ ನರಕಯಾತನೆಯ ಮಾರ್ಗವಾಗಿದೆ.
10 ವರ್ಷಗಳ ಹಿಂದೆ ಗಂಗಾವತಿ ನಗರಸಭೆಯನ್ನು ಅಮೃತಸಿಟಿ ಯೋಜನೆಗೆ ಆಯ್ಕೆ ಮಾಡಿ ₹ 120 ಕೋಟಿ ಮಂಜೂರಿ ಮಾಡಿತ್ತು. ಈ ಕಾಮಗಾರಿ ಆಮೇಗತಿಯಲ್ಲಿ ಸಾಗಿದ್ದರು ಸಹ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಅದರಲ್ಲಿ ಪ್ರಮುಖವಾಗಿರುವ ರಸ್ತೆಯ ಎರಡು ಬದಿ ಚರಂಡಿ ನಿರ್ಮಾಣ ಮತ್ತು ಪಾದಚಾರಿಗಳು ಸಂಚರಿಸಲು ರಸ್ತೆ ಮತ್ತು ಸೇತುವೆ ಎಡ, ಬಲ ಬದಿಯಲ್ಲಿ ತಂತಿಯ ರಕ್ಷಣಾ ಗೋಡೆ ನಿರ್ಮಿಸಲಾಗಿತ್ತು. ಆದರೆ, ಈಗ ಈ ಮಾರ್ಗಗಳು ಜನರಿಗೆ ನರಕಯಾತನೆಯಾಗಿವೆ.ದುರಗಮ್ಮ ಹಳ್ಳದ ಪಕ್ಕದಲ್ಲಿಯೇ ಶ್ರೀಚೆನ್ನಬಸವಸ್ವಾಮಿ ಮಠ ಮತ್ತು ಮಲ್ಲಿಕಾರ್ಜುನ ದೇಗಲ, ಗ್ರಾಮ ದೇವೆತ ದುರಗಮ್ಮ ದೇಗುಲಗಳು ಇದೆ. ಇಲ್ಲಿ ಬರುವ ಭಕ್ತರು ಹೂ ಮಾಲೆ ಸಮರ್ಪಿಸುತ್ತಾರೆ. ನಂತರ ಈ ದೇಗಲುಗಳ ನಿರ್ಮಾಲ್ಯ ಪಾದಚಾರಿಗಳ ಮಾರ್ಗದಲ್ಲಿ ಬಿದ್ದಿವೆ. ಅದೇ ಸ್ಥಳದಲ್ಲಿ ಕೆಲವರು ಶೌಚ್ಯಕ್ಕೆ ಹೋಗುತ್ತಿದ್ದರಿಂದ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದೆ.ಅನೈತಿಕ ಚಟುವಟಿಕೆಗಳ ಮಾರ್ಗ:
ಕೋಟ್ಯಂತರ ರುಪಾಯಿ ಯೋಜನೆಯಾಗಿರುವ ಅಮೃತ ಸಿಟಿ ಯೋಜನೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ದುರಗಮ್ಮ ಹಳ್ಳದ ಎರಡು ಬದಿಗಳಲ್ಲಿ ಅ ವೈಜ್ಞಾನಿಕವಾಗಿ ಪಾದಚಾರಿಗಳ ಮಾರ್ಗ ನಿರ್ಮಿಸಿದ್ದಾರೆ. ಹಳ್ಳದ ಸೇತುವೆ ಕೆಳಗೆ ಅನೈತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ದೇವಸ್ಥಾನಕ್ಕೆ ಬರುವ ಭಕ್ತರ ಅರೋಪವಾಗಿದೆ.ಮದ್ಯಪಾನ, ಜೂಜಾಟ, ಅನೈತಿಕ ಚಟುವಟಿಕೆಗಳು ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ದೇಗುಲಗಳಿಗೆ ಮಹಿಳಾ ಭಕ್ತರು ಸೇರಿದಂತೆ ಮಕ್ಕಳು ಸಹ ಬರುತ್ತಿದ್ದಾರೆ. ಮಠದಲ್ಲಿ ವಿದ್ಯಾರ್ಥಿಗಳು ಇದ್ದಾರೆ. ನಗರ ಅಮೃತಸಿಟಿ ಯೋಜನೆಯಾಗುವ ಬದಲು, ನರಕಯಾತನೆ ಅನುಭವಿಸುವ ಸಿಟಿಯಾಗಿದೆ. ಇನ್ನಾದರು ಇದಕ್ಕೆ ಸಂಬಂಧಿಸಿದ ನಗರಸಭೆ, ಪೊಲೀಸ್ ಇಲಾಖೆ ನಿಗಾವಹಿಸಿದರೆ, ದೇಗುಲಗಳಿಗೆ ಬರುವ ಭಕ್ತರಿಗೆ ಅಮೃತ ನೀಡಿದಂತಾಗುತ್ತದೆ ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ.ನಗರಕ್ಕೆ ಮಂಜೂರಿಯಾಗಿರುವ ಅಮೃತ ಸಿಟಿ ಯೋಜನೆ ವ್ಯರ್ಥವಾಗಿದೆ. ದುರಗಮ್ಮ ಹಳ್ಳದ ಪಕ್ಕದಲ್ಲಿ ನಿರ್ಮಿಸಿರುವ ಪಾದಚಾರಿಗಳ ಮಾರ್ಗ ನರಕಯಾತನೆಯಾಗಿದೆ. ಮಾರ್ಗದಲ್ಲಿ ಕಸದ ರಾಶಿ, ದೇವಸ್ಥಾನಗಳ ನಿರ್ಮಾಲ್ಯ, ಮದ್ಯದ ಬಾಟಲಿ ಬಿದ್ದಿದ್ದದರಿಂದ ಮಾರ್ಗ ಬಂದ್ ಆಗಿದೆ. ಇನ್ನಾದರು ಸಂಬಂಧಿಸಿದ ಈ ಮಾರ್ಗ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ರುದ್ರೇಶಪ್ಪ ಹೇಳಿದ್ದಾರೆ.