ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಕ್ರೀಡಾ ಸಂಘದಿಂದ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿರುವ ಚಿಣ್ಣರು ಇಲ್ಲಿನ ಜಯನಗರದ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರಲ್ಲದೇ ತಮಟೆ ಕಲಾವಿದರ ತಮಟೆ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಕೋಲಾರ ಕ್ರೀಡಾ ಸಂಘವು ನಗರದ ಟೇಕಲ್ ರಸ್ತೆಯ ಅಂಬೇಡ್ಕರ್ ಮಕ್ಕಳ ಉದ್ಯಾವನದಲ್ಲಿ ದಿ. ಡಿ.ಸುಧಾಕರ್ ಸ್ಮರಣಾರ್ಥ ೩೮ನೇ ವರ್ಷದ ಬೇಸಿಗೆ ತರಬೇತಿ ಶಿಬಿರದಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಉದ್ಯಾನವನ ಸ್ವಚ್ಛತೆ ಮಾಡುವ ಕಾರ್ಯದಲ್ಲಿ ಮಕ್ಕಳು, ಸಂಘದ ಪದಾಧಿಕಾರಿಗಳು ಶ್ರಮಿಸಿದರು.ಮಕ್ಕಳಿಗೆ ಸ್ವಚ್ಛತೆ ಅರಿವು ಮೂಡಿಸಿ
ಸಂಘದ ಪದಾಧಿಕಾರಿ ಅಪ್ಪಿ ನಾರಾಯಣಸ್ವಾಮಿ ಮಾತನಾಡಿ, ಕೋಲಾರ ಕ್ರೀಡಾ ಸಂಘವು ಎಲ್ಲಾ ಸಂಘಗಳಿಗಿಂತಲೂ ಮುಂಚೂಣಿಯಲ್ಲಿದೆ. ಇಂದು ಹಣ ಗಳಿಕೆಯೇ ಮಹತ್ವ ಪಡೆದುಕೊಂಡಿರುವ ಸಂದರ್ಭದಲ್ಲಿ ಕೋಲಾರ ಕ್ರೀಡಾಸಂಘದ ನಿಸ್ವಾರ್ಥ ಪ್ರಯತ್ನ ಶ್ಲಾಘನೀಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಸೇರಿಸಬಹುದು. ಸಂಘದಿಂದ ಬಯಲು ಗ್ರಂಥಾಲಯ ವ್ಯವಸ್ಥೆ ಇದ್ದು, ಇದರ ಪ್ರಯೋಜನ ಪಡೆಯಲು ಕೋರಿದರು.ಶಿಬಿರದಲ್ಲಿ ಭಾಗವಹಿಸಿದ್ದ ತಮಟೆ ಕಲಾವಿದರು ಶಿಬಿರದ ಮಕ್ಕಳಿಗೆ ಖುಷಿ ನೀಡುವುದರ ಸಲುವಾಗಿ ತಮಟೆ ವಾದದೊಂದಿಗೆ ಮಕ್ಕಳು ಕುಣಿದು ಸಂತೋಷಟ್ಟರು. ಈ ಸಂದರ್ಭದಲ್ಲಿ ಜಯಪ್ರಕಾಶ್, ತರಬೇತುದಾರರಾದ ಸುರೇಶ್, ಕೃಷ್ಣಮೂರ್ತಿ, ಹರೀಶ್ ಇದ್ದರು.