ಗರಿಕೆ ಖಂಡಿ- ರಾಮಾಪುರ ಹೆದ್ದಾರಿ ರಸ್ತೆಗೆ ಗುದ್ದಲಿ ಪೂಜೆ

KannadaprabhaNewsNetwork | Published : Mar 12, 2024 2:03 AM

ಸಾರಾಂಶ

ರಾಮಾಪರ ಹೋಬಳಿಯ ನಾಲ್‌ರೋಡ್ ಬಳಿ ಗರಿಕೆ ಖಂಡಿಯಿಂದ ರಾಮಾಪುರದವರೆಗೆ ತಮಿಳುನಾಡು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗೆ ಶಾಸಕ ಎಂಆರ್ ಮಂಜುನಾಥ್ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ರಾಮಾಪರ ಹೋಬಳಿಯ ನಾಲ್‌ರೋಡ್ ಬಳಿ ಗರಿಕೆ ಖಂಡಿಯಿಂದ ರಾಮಾಪುರದವರೆಗೆ ತಮಿಳುನಾಡು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗೆ ಶಾಸಕ ಎಂಆರ್ ಮಂಜುನಾಥ್ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದರು.

ಗರಿಕೆ ಖಂಡಿ ಹಂದಿಯೂರು ತುಳು ನಾಡಿಗೆ ಸಂಪರ್ಕ ಕಲ್ಪಿಸುವ 16 ಕಿಮೀ ರಸ್ತೆಗೆ 25 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು ಅಂತರ್ ರಾಜ್ಯ ರಸ್ತೆಯ ಬಹುದಿನಗಳ ಬೇಡಿಕೆಯ ಗರಿಕೆ ಖಂಡಿಯ ಮಾರ್ಗವಾಗಿ ತಮಿಳುನಾಡಿಗೆ ಹೋಗಲು ಅಲ್ಲಿಂದ ಹನೂರು ತಾಲೂಕು ಮೂಲಕ ರಾಜ್ಯಕ್ಕೆ ತೆರಳಲು ಸಂಪರ್ಕ ರಸ್ತೆ ಆಗಿತ್ತು. ಬಣ್ಣಾರಿ ರಸ್ತೆ ಮೂಲಕ ಹೋಗುತ್ತಿದ್ದ ಭಾರಿ ವಾಹನಗಳಿಗೆ ನಿಷೇಧಗೊಳಿಸಿರುವುದರಿಂದ ಈ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಾಗಿ, ರಸ್ತೆ ಗುಂಡಿಗಳಾಗಿ ವಾಹನ ಓಡಾಡುವುದಕ್ಕೆ ತುಂಬಾ ಕಷ್ಟಕರವಾಗಿತ್ತು. ಈ ರಸ್ತೆ ಮಾರ್ಟಳ್ಳಿ ಹೂಗ್ಯಾಂ ರಾಮಾಪುರ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು ಎಂದರು. ಶಾಸಕನಾಗಿ ಹತ್ತು ಹಲವಾರು ಬಾರಿ ಈ ಭಾಗಕ್ಕೆ ಭೇಟಿ ನೀಡಿ ನೆರೆಯ ತಮಿಳುನಾಡಿನ ರಾಜ್ಯದ ಶಾಸಕರ ಜೊತೆ ಸಹ ಮಾತನಾಡಿ ನಮ್ಮ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಹೆಚ್ಚಿನ ಅಂತರಾಜ್ಯ ರಸ್ತೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ರಾಜ್ಯ ಸರ್ಕಾರ ಬಜೆಟ್ ನಲ್ಲಿ 25 ಕೋಟಿ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗಬಹುದು. ಕಾಮಗಾರಿಗೆ ವಿಳಂಬವಾಗಬಾರದು ಎಂಬ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ, ಜಿಲ್ಲಾಧಿಕಾರಿ ಗಮನಕ್ಕೆ ತಂದು ಟೆಂಡರ್ ಪ್ರಕ್ರಿಯೆ ಇರುವುದರಿಂದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಮಾಹಿತಿ ನೀಡಿದ ಅಧಿಕಾರಿ ಲೋಕಪಯೋಗಿ ಇಲಾಖೆ ಎಇಇ ಚಿನ್ನಣ್ಣ ಶಾಸಕರ ಸಭೆಯಲ್ಲಿ ಮಾಹಿತಿ ನೀಡಿ ಟೆಂಡರ್ ಪ್ರಕ್ರಿಯೆಯಲ್ಲಿದ್ದು ಎರಡು ಮೂರು ದಿನದಲ್ಲಿ ಮುಗಿಯುವುದರಿಂದ ಕಾಮಗಾರಿಗೆ ಶಾಸಕರು ವಿಳಂಬವಾಗಬಾರದು ಎನ್ನುವ ದೃಷ್ಟಿಯಿಂದ ಇಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಚಾಮುಲ್ ಸದಸ್ಯರಾದ ಉದ್ದ ನೂರು ಪ್ರಸಾದ್, ಮಾಜಿ ಜಿಪಂ ಸದಸ್ಯ ನಾಗೇಂದ್ರಮೂರ್ತಿ, ಮಾಜಿ ತಾಪಂ ಸದಸ್ಯ ಮಣಿ, ಮುಖಂಡರಾದ ವಿಜಯಕುಮಾರ್, ಮಣಗಳ್ಳಿ ಶಿವಪ್ಪ, ಪುಟ್ಟಣ್ಣ ಇನ್ನಿತರರು ಉಪಸ್ಥಿತರಿದ್ದರು.

Share this article