ಚನ್ನಪಟ್ಟಣ: ಪಟ್ಟಣದಲ್ಲಿ ಬೆಳ್ಳುಳ್ಳಿ ಕಳ್ಳತನ ಹೆಚ್ಚಾಗಿದ್ದು, ನಗರದ ಮಹದೇಶ್ವರ ಬಡಾವಣೆಯ ದಿನಸಿ ಅಂಗಡಿಯೊಂದರಿಂದ 50 ಕೆ.ಜಿ. ತೂಕದ ಬೆಳ್ಳುಳ್ಳಿ ಮೂಟೆಯನ್ನು ಕಳವು ಮಾಡಲಾಗಿದೆ.ಮಹದೇಶ್ವರ ನಗರದಲ್ಲಿ ನಂಜುಂಡಿ ಎಂಬುವವರು ಬನಶಂಕರಿ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದು, ಇವರ ಅಂಗಡಿಯ ಗೋದಾಮಿನಿಂದ ಕಳ್ಳನೊಬ್ಬ ಸುಮಾರು 50 ಕೆ.ಜಿ. ತೂಕದ ಬೆಳ್ಳಳ್ಳಿ ಮೂಟೆಯನ್ನು ಕಳವು ಮಾಡಿದ್ದಾನೆ. ಕಳ್ಳತನದ ಕೃತ್ಯ ಅಂಗಡಿಯ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ.ಬೆಳ್ಳಳ್ಳಿ ದರ ಏರಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಳ್ಳಿಗೆ ಸುಮಾರು 350 ರಿಂದ 400 ರು. ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಕಳ್ಳರ ಕಣ್ಣು ಬೆಳ್ಳುಳ್ಳಿ ಮೇಲೆ ಬಿದ್ದಿದೆ ಎಂದು ಅಂಗಡಿಯ ಮಾಲೀಕ ಅಳಲು ತೋಡಿಕೊಂಡಿದ್ದಾರೆ.