ಗತವೈಭವದತ್ತ ಆಯುರ್ವೇದ ಚಿಕಿತ್ಸಾ ಪದ್ಧತಿ: ದಿನೇಶಕುಮಾರ ಮೀನಾ

KannadaprabhaNewsNetwork |  
Published : Sep 22, 2024, 01:46 AM IST
ಘಟಪ್ರಭಾದ ಬಿ.ಎ.ಪಾಟೀಲ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಜರುಗಿದ ಬಿ.ಎ.ಎಂ.ಎಸ್ ಪ್ರಮಾಣ ಪತ್ರ ವಿತರಣೆ ಸಮಾರಂಭದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಪುರಾತನ ಕಾಲದಿಂದಲೂ ಅಯುರ್ವೆದ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. ಈಗಿನ ಹಾಗೆ ಮೂದಲಿನ ಕಾಲದಲ್ಲಿ ಆಸ್ಪತ್ರೆಗಳು ಇರಲಿಲ್ಲ. ಜನರು ನಾಟಿ ವೈದ್ಯರನ್ನೇ ಅವಲಂಬಿಸಿದ್ದರು ಎಂದು ಐ.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭ

ಪುರಾತನ ಕಾಲದಿಂದಲೂ ಅಯುರ್ವೆದ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. ಈಗಿನ ಹಾಗೆ ಮೂದಲಿನ ಕಾಲದಲ್ಲಿ ಆಸ್ಪತ್ರೆಗಳು ಇರಲಿಲ್ಲ. ಜನರು ನಾಟಿ ವೈದ್ಯರನ್ನೇ ಅವಲಂಬಿಸಿದ್ದರು ಎಂದು ಐ.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ ಹೇಳಿದರು.

ಶುಕ್ರವಾರ ಇಲ್ಲಿನ ಜೆ.ಜಿ ಕೊ-ಆಫ್‌ ಆಸ್ಪತ್ರೆಯ ಅಂಗ ಸಂಸ್ಥೆ ಮಹರ್ಷಿ ಬಿ.ಎ.ಪಾಟೀಲ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಆಯುರ್ವೆದ ಮೇಡಿಕಲ್ ವಿದ್ಯಾರ್ಥಿಗಳಿಗೆ ಬಿ.ಎ.ಎಂ.ಎಸ್ ಪ್ರಮಾಣ ಪತ್ರ ವಿತರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಆಯುರ್ವೆದ ಈಗ ಹೆಚ್ಚಿನ ಮಾನ್ಯತೆ ಪಡೆದಿದೆ. ಇದೊಂದು ವ್ಯಯಕ್ತಿಕ ಉದ್ಯೋಗದ ಮಾರ್ಗವೂ ಆಗಿದೆ. ವೈದ್ಯರಾದ ತಾವು ಸರ್ಕಾರಿ ಕೆಲಸಕ್ಕೆ ಸೇರಲಿ ಅಥವಾ ಸ್ವಂತ ಆಸ್ಪತ್ರೆ ತೆರೆಯಲಿ ಇಲ್ಲಿ ತೆಗೆದುಕೊಂಡ ಪ್ರತಿಜ್ಞಾ ವಿಧಿ ಪ್ರಕಾರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಕಲಿತ ಸಂಸ್ಥೆ ಹಾಗೂ ತಂದೆ-ತಾಯಿಗೆ ಕೀರ್ತಿ ತರಬೇಕೆಂದರು.

ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ ಅಪ್ಪಯ್ಯ ಬಡಕುಂದ್ರಿ, ಸಂಸ್ಥೆಯ ಸಿ.ಇ,ಒ. ಡಾ ಬಿ.ಕೆ.ಎಚ್. ಪಾಟೀಲ. ನಿರ್ದೇಶಕರಾದ ಸಿ.ಎ. ಕಾಡದವರ, ಎ.ಎ. ಕರಲಿಂಗನವರ, ಎಂ.ಎ. ಪಾಟೀಲ, ಸಿ.ಬಿ. ಸನದಿ, ಎಸ್.ಎಸ್‌. ದಳವಾಯಿ, ಎ.ಬಿ. ತಳವಾರ, ಸಂಸ್ಥೆಯ ಅನೇಕ ಗಣ್ಯರು ಇದ್ದರು. ನೂರಾರು ಜನ ವಿದ್ಯಾರ್ಥಿಗಳ ಪಾಲಕರು ಆಗಮಿಸಿದ್ದರು.

ಸಂಸ್ಥೆಯ ಸಿಇಒ. ಡಾ.ಬಿ.ಕೆ.ಎಚ್ ಪಾಟೀಲ ಪರಿಚಯಸಿದರು. ಆಯುರ್ವೆದ ಮೇಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆ.ಕೆ. ಶರ್ಮಾ ಸಂಸ್ಥೆಯ ಕುರಿತು ಮಾತನಾಡಿದರು. ಪ್ರೊ.ಡಾ.ಎಸ್.ಬಿ. ಚೌಗಲೆ ಸ್ವಾಗತಿಸಿದರು. ಡಾ.ಶಶಿಕಲಾ ಹೊಸಮಠ ಪತಿಜ್ಞಾ ವಿಧಿ ಬೋಧಿಸಿದರು, ಪ್ರೊ.ಡಾ.ಜಿ.ಕೆ. ಶರ್ಮಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!