27.17 ಲಕ್ಷ ಲಾಭದಲ್ಲಿ ಮಲ್ಲಾಪುರ ಅರ್ಬನ್ ಬ್ಯಾಂಕ

KannadaprabhaNewsNetwork |  
Published : Sep 22, 2024, 01:46 AM IST
ಮಲ್ಲಾಪುರ ಅರ್ಬನ್ ಕೊ-ಆಫ್‌ ಬ್ಯಾಂಕಿನ ವಾರ್ಷಿಕ ಸರ್ವ ಸಾಧಾರಣಸಭೆಯಲ್ಲಿ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ದಿ.ಮಲ್ಲಾಪುರ ಅರ್ಬನ್‌ ಕೋ-ಆಪರೇಟಿವ್ ಬ್ಯಾಂಕ 2023-24ನೇ ಸಾಲಿನ ವರ್ಷಾಂತ್ಯದಲ್ಲಿ ₹27,17,849 ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿದೆ. ಗ್ರಾಹಕರು ಪಡೆದ ಸಾಲವನ್ನು ಮರುಪಾವತಿಸಿದರೆ ಮತ್ತಷ್ಟು ಉನ್ನತಿ ಹೊಂದಲಿದೆ ಎಂದು ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ದಿ.ಮಲ್ಲಾಪುರ ಅರ್ಬನ್‌ ಕೋ-ಆಪರೇಟಿವ್ ಬ್ಯಾಂಕ 2023-24ನೇ ಸಾಲಿನ ವರ್ಷಾಂತ್ಯದಲ್ಲಿ ₹27,17,849 ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿದೆ. ಗ್ರಾಹಕರು ಪಡೆದ ಸಾಲವನ್ನು ಮರುಪಾವತಿಸಿದರೆ ಮತ್ತಷ್ಟು ಉನ್ನತಿ ಹೊಂದಲಿದೆ ಎಂದು ಬ್ಯಾಂಕ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಹೇಳಿದರು.

ಮಲ್ಲಾಪುರ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕು 4917 ಜನ ಸದಸ್ಯರನ್ನು ಹೊಂದಿದ್ದು, ₹96,93,925 ಷೇರು ಬಂಡವಾಳ ಹೊಂದಿದೆ ಎಂದರು.

ವರದಿ ವಾಚನ ಮಾಡಿದ ಬ್ಯಾಂಕಿನ ವ್ಯವಸ್ಥಾಪಕ ರಮೇಶ ಮುರಗೋಡ, ವರ್ಷಾಂತ್ಯಕ್ಕೆ₹15,23,38,508 ಸಾಲ ವಿತರಿಸಲಾಗಿದ್ದು, ₹28,54,54,142 ದುಡಿಯುವ ಬಂಡವಾಳ ಇದೆ ಎಂದರು.

ಸಂಘದ ಅಧ್ಯಕ್ಷ ರಮೇಶ ತುಕ್ಕಾನಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮ್ಯಾನೇಜರ್‌ ಗೋವಿಂದ ತುಕ್ಕಾನಾಟ್ಟಿ, ತಿಪ್ಪಣ್ಣ ಹರಗಾಪೂರೆ, ಸದಾಶಿವ ಹಿರೇಮಠ, ಹಿರಿಯರಾದ ಅಲ್ಲಪ್ಪ ಹುಕ್ಕೇರಿ, ಸಿಬ್ಬಂದಿ, ಸಂಸ್ಥೆಯ ಸದಸ್ಯರು ಇದ್ದರು.

ಬ್ಯಾಂಕಿನ ಸಿಬ್ಬಂದಿ ರಾಜುಜಂಬ್ರಿ ಸ್ವಾಗತಿಸಿದರು. ಮುತ್ತಣ್ಣ ಹತ್ತರವಾಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕುರಿತು ರಾವಳು ನಿವಗಿರೆ ಹಾಗೂ ಶ್ರೀಕಾಂತ ಮಹಾಜನ ಮಾತನಾಡಿದರು. ಕಿರಣಕ ಬಾಡಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ