ನಿವೃತ್ತಿಯಲ್ಲೂ ಒಂದೆಡೆ ಸೇರಿ ಹಳೆಯ ನೆನಪುಗಳ ಮೆಲುಕು

KannadaprabhaNewsNetwork |  
Published : Aug 11, 2026, 01:30 AM IST
ಚಿತ್ರ 10ಬಿಡಿಆರ್52 | Kannada Prabha

ಸಾರಾಂಶ

The town's Basava Function Hall bore witness to a rare moment where individuals, who had dedicated years of hard work to the growth of a single organization, gathered together after retirement with the same warmth to reminisce about the past.

- ನಿವೃತ್ತರ ಪುನರ್ ಸಂಗಮ, ಸನ್ಮಾನ ಸಮಾರಂಭಕನ್ನಡಪ್ರಭ ವಾರ್ತೆ ಕಮಲನಗರ

ವರ್ಷಗಳ ಕಾಲ ಒಂದೇ ಸಂಸ್ಥೆಯ ಏಳಿಗೆಗಾಗಿ ದುಡಿದವರು, ನಿವೃತ್ತಿಯ ನಂತರವೂ ಅದೇ ಆತ್ಮೀಯತೆಯೊಂದಿಗೆ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅಪರೂಪದ ಕ್ಷಣಕ್ಕೆ ಪಟ್ಟಣದ ಬಸವ ಫಂಕ್ಷನ್ ಹಾಲ್ ಸಾಕ್ಷಿಯಾಯಿತು.

ಪಟ್ಟಣದ ಬಸವ ಫಂಕ್ಷನ್ ಹಾಲ್‌ನಲ್ಲಿ ಶಾಂತಿವರ್ಧಕ ಪದವಿ ಪೂರ್ವ ಕಾಲೇಜು ಹಾಗೂ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದ ವಯೋನಿವೃತ್ತ ಸಿಬ್ಬಂದಿ ಗಾಗಿ ಭಾನುವಾರ ಆಯೋಜಿಸಿದ್ದ ಪುನರ್ ಸಂಗಮ ಹಾಗೂ ಸನ್ಮಾನ ಸಮಾರಂಭದಲ್ಲಿ ನಿವೃತ್ತ ಸಿಬ್ಬಂದಿ ಮಲ್ಲಿಕಾರ್ಜುನ ಮಠ ಮಾತನಾಡಿ, ಶಿಕ್ಷಣ ಸಂಸ್ಥೆಯ ಯಶಸ್ಸಿನ ಹಿಂದೆ ಕೇವಲ ಕಟ್ಟಡಗಳು ಅಥವಾ ಸೌಲಭ್ಯಗಳಿರುವುದಿಲ್ಲ. ಅದರ ಹಿಂದೆ ವರ್ಷಗಳ ಕಾಲ ಪ್ರಾಮಾಣಿಕವಾಗಿ ದುಡಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪರಿಶ್ರಮವಿರುತ್ತದೆ ಎಂದರು.

ನಿವೃತ್ತ ಡಿಡಿಪಿಐ ಶಿವಕುಮಾರ ಸ್ವಾಮಿ ಮಾತನಾಡಿ, ಶಿಕ್ಷಕರ ಸೇವೆ ನಿವೃತ್ತಿಯೊಂದಿಗೆ ಕೊನೆಗೊಳ್ಳುವುದಿಲ್ಲ. ವಿದ್ಯಾರ್ಥಿಗಳ ಜೀವನ ರೂಪಿಸುವ ಸಂದರ್ಭದಲ್ಲಿ ಅವರು ನೀಡಿದ ಜ್ಞಾನ, ಮಾರ್ಗದರ್ಶನ ಹಾಗೂ ಮೌಲ್ಯಗಳು ಸದಾ ಜೀವಂತವಾಗಿರುತ್ತವೆ ಎಂದರು.

ಈ ಸಂದರ್ಭದಲ್ಲಿ 80ಕ್ಕೂ ಹೆಚ್ಚು ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಸಹೋದ್ಯೋಗಿಗಳೊಂದಿಗೆ ಹಲವು ವರ್ಷಗಳ ನಂತರ ಮತ್ತೆ ಒಂದೆಡೆ ಸೇರಿದ ನಿವೃತ್ತ ಸಿಬ್ಬಂದಿಯಲ್ಲಿ ಸಂತಸ ಮನೆ ಮಾಡಿತ್ತು. ನಿವೃತ್ತ ಶಿಕ್ಷಕ ಎಸ್.ಎ.ಹೂಗಾರ ಅಧ್ಯಕ್ಷತೆ ವಹಿಸಿದರು. ಕಮಲನಗರ ವೈದ್ಯಾಧಿಕಾರಿ ಡಾ.ವಿಶ್ವನಾಥ ಚಿಕ್ಕಮುರ್ಗೆ, ಉದಗೀರದ ವೈದ್ಯ ಡಾ.ಮಲ್ಲಿಕಾರ್ಜುನ ಭಂಡೆ, ಬೀದರ್‌ನ ನಿವೃತ್ತ ಅಧೀಕ್ಷಕ ಎಂಜಿನಿಯರ್ ಚಂದ್ರಕಾಂತ ಮಿರ್ಚೆ, ಬೆಂಗಳೂರಿನ ನಿವೃತ್ತ ಅಧೀಕ್ಷಕ ಎಂಜಿನಿಯರ್ ಪ್ರಕಾಶ ಕೆ.ಎಚ್.ಬಾಬುರಾವ್‌ ಪವಾರ, ಎಸ್.ಎನ್.ಶಿವಣಕರ, ವಿಜಯಕುಮಾರ, ಬಸವರಾಜ ಪಾಟೀಲ್, ದೇವೆಂದ್ರ ಪಾಟೀಲ್, ಎಸ್.ಎಸ್.ರಾಂಪುರೆ, ಪ್ರಕಾಶ ಮಾನಕರಿ, ಧನರಾಜ ಘಾಳೆ ಸೇರಿದಂತೆ ಗಣ್ಯರು, ನಿವೃತ್ತ ಸಿಬ್ಬಂದಿ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

--

ಚಿತ್ರ 10ಬಿಡಿಆರ್52:

ಕಮಲನಗರ ಶಾಂತಿವರ್ಧಕ ಪದವಿ ಪೂರ್ವ ಕಾಲೇಜು ಹಾಗೂ ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದ ವಯೋನಿವೃತ್ತ ಸಿಬ್ಬಂದಿಗಾಗಿ ಭಾನುವಾರ ಪುನರ್ ಸಂಗಮ ಹಾಗೂ ಸನ್ಮಾನ ಸಮಾರಂಭ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಾಸನದ ಕ್ರೀಡಾಪಟುಗಳ ಸಾಧನೆ
ಕನಿಷ್ಠ ವೇತನ ಪರಿಷ್ಕರಣೆ ಆದೇಶ ತಕ್ಷಣ ಜಾರಿಯಾಗಲಿ