ಆಕರ್ಷಣಿಯ, ವಿಶಿಷ್ಟವಾಗಿ ಹೋಳಿ ಹಬ್ಬ ಆಚರಣೆ
ವಿಶಿಷ್ಟವಾಗಿ ಹೋಳಿ ಹಬ್ಬ ಆಚರಿಸುವ ಗೌಳಿ ಸಮುದಾಯ ತಮ್ಮ ಮಕ್ಕಳ ಮೂಲಕ ಸಂಪ್ರದಾಯವನ್ನ ಮುಂದಿನ ಜನಾಂಗಕ್ಕೆ ತಗೆದುಕೊಂಡು ಹೋಗುವ ಗೌರಿ ದಬಾಳ್ ಹಬ್ಬದ ಆಚರಣೆಯ ಆಕರ್ಷಣಿಯವಾಗಿತ್ತು.
ತಾಲೂಕಿನ ವಿಟ್ನಾಳ ಗೌಳಿವಾಡದ ಗೌಳಿಗರ ಸಮುದಾಯದಲ್ಲಿ ಆಚರಿಸಲ್ಪಡುವ ಹೋಳಿ ಹುಣ್ಣಿಮೆ ಪ್ರಯುಕ್ತ ಗೌರಿ ದಬಾಳ್ ಕಾರ್ಯಕ್ರಮದಲ್ಲಿ ಮಕ್ಕಳದ್ದೇ ಸಂಭ್ರಮ ಹಾಗೂ ಪ್ರಮುಖ ಆಕರ್ಷಣೆ.ಕುಂಭದ ಗೌರಿ. ಹೋಳಿ ಹುಣ್ಣಿಮೆಯ ಬಣ್ಣದ ದಿನ ಈ ಸಮುದಾಯದ ಮಕ್ಕಳು ವಿಳ್ಯದಲೆ, ಅರಿಸಿಣ, ಹೂವಿನ ಹಾರ, ಅಲಂಕಾರಿಕ ಆಭರಣಗಳು ಹಾಗೂ ಎರಡು ಮಾರು ಬಟ್ಟೆಯನ್ನು ತಾಮ್ರದ ಕುಂಭಕ್ಕೆ ಹಾಕಿ ಅದನ್ನು ಇಬ್ಬರು ಮಕ್ಕಳು ಕೈಯಲ್ಲಿ ಹಿಡಿದುಕೊಂಡು ಮನೆ ಮನೆಗೆ ಹೋಗಿ ಹಾಡು ಹೇಳುವ ಮೂಲಕ ಹಣ, ದವಸ ಧಾನ್ಯ ಕೊಡುವಂತೆ ವಿನಂತಿಸುತ್ತಾರೆ. ಹೀಗೆ ಬೇಡುವ ಸಮಯದಲ್ಲಿ ಮಕ್ಕಳ ಬಾಯಿಂದ ಬರುವ ಸಾಂಪ್ರದಾಯಿಕ ಹಾಡು ಹೇಳುವುದು ಎಲ್ಲರ ಗಮನಸೆಳೆಯುತ್ತದೆ. ಹೀಗೆ ಬೇಡಿ ತಂದಂತಹ ಹಣದಿಂದ ಅಗತ್ಯ ಪೂಜಾ ಸಾಮಗ್ರಿಗಳನ್ನು ಖರೀದಿಸಿದ ನದಿ, ಹಳ್ಳಗಳಿಗೆ ಹೋಗಿ ಆ ಕುಂಭದ ಗೌರಿಯನ್ನು ಅತೀ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಇನ್ನು ಬಾಕಿ ಉಳಿದ ಹಣ ದವಸ ಧಾನ್ಯವನ್ನು ಮಕ್ಕಳು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ಕುಂಭದಲ್ಲಿ ಸ್ಥಾಪಿತವಾದ ಗೌರಿಯನ್ನು ಮರಳಿ ತಂದು ದೇವಸ್ಥಾನದಲ್ಲಿ ಇಡುತ್ತಾರೆ. ಹೀಗೆ ಪರಸ್ಪರರ ಬಣ್ಣ ಎತ್ತಿಕೊಂಡು ಹೋಳಿ ಹಬ್ಬದ ಸಂಭ್ರಮ ಆಚರಿಸುತ್ತಾರೆ.
------
ಎಚ್04.03-ಡಿಎನ್‌ಡಿ1: ಗೌಳಿ ಸಮುದಾಯದ ಮಕ್ಕಳಿಂದ ಗೌರಿ ದಬಾಳ್ ಆಚರಣೆ ನಡೆಯಿತು.