ಹೊಸಪೇಟೆಯಲ್ಲಿ ಗೌತಮ ಬುದ್ಧ ವೃತ್ತ ಅನಾವರಣ

KannadaprabhaNewsNetwork |  
Published : May 13, 2025, 01:32 AM IST
13ಎಚ್‌ಪಿಟಿ1- ಹೊಸಪೇಟೆಯಲ್ಲಿ ಸೋಮವಾರ ಗುರು ಪಿಯು ಕಾಲೇಜು ಹತ್ತಿರ ನಾಲ್ಕು ರಸ್ತೆಗಳು ಸಂಧಿಸುವ  ವೃತ್ತಕ್ಕೆ ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಉದ್ಘಾಟನಾ ಸಮಾರಂಭ ನಡೆಸಲಾಯಿತು. | Kannada Prabha

ಸಾರಾಂಶ

ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಉದ್ಘಾಟನಾ ಸಮಾರಂಭ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಬುದ್ಧ ಪೂರ್ಣಿಮೆಯ ಹಿನ್ನೆಲೆ ಹಂಪಿ ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ವತಿಯಿಂದ ಸೋಮವಾರ ನಗರದ ಗುರು ಪಿಯು ಕಾಲೇಜು ಹತ್ತಿರ ನಾಲ್ಕು ರಸ್ತೆಗಳು ಸಂಧಿಸುವ ವೃತ್ತಕ್ಕೆ ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಎಂದು ನಾಮಕರಣ ಮಾಡಿ ನಾಮಫಲಕ ಉದ್ಘಾಟನಾ ಸಮಾರಂಭ ನಡೆಸಲಾಯಿತು. ಮುಖಂಡ ಸೋಮಶೇಖರ್ ಬಣ್ಣದಮನೆ ಮಾತನಾಡಿ, ಹೊಸಪೇಟೆ ನಗರ ಶಾಂತಿಗೆ ಹೆಸರಾದ ನಗರವಾಗಿದೆ. ಇಡೀ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧ ಅವರ ಹೆಸರಿನ ವೃತ್ತ ನಗರ ಪ್ರವೇಶಕ್ಕೆ ಮೊದಲಿಗೆ ಇದ್ದರೆ ಈ ನಗರಕ್ಕೆ ಶೋಭೆ ಎಂದರು.

ಬಳಿಕ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ, ಶಾಸಕ ಎಚ್.ಆರ್ ಗವಿಯಪ್ಪ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ ಮಹದೇವಪ್ಪ ಅವರಿಗೆ ಅಂಚೆ ಪತ್ರದ ಮೂಲಕ ಅಧಿಕೃತವಾಗಿ ಸಿದ್ದಾರ್ಥ ಗೌತಮ ಬುದ್ಧ ವೃತ್ತವನ್ನು ಘೋಷಣೆ ಮಾಡಲು ಮನವಿ ರವಾನಿಸಲಾಯಿತು.ಈ ಸಂದರ್ಭ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎನ್.ಚಿನ್ನಸ್ವಾಮಿ ಸೋಸಲೆ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಸಣ್ಣಮಾರೆಪ್ಪ ಎನ್‌. ವೆಂಕಟೇಶ, ಶಿವಕುಮಾರ್, ಕೊಳಗಲ್ ಸೂರ್ಯನಾರಾಯಣ, ರಾಮಚಂದ್ರ ಬಾಬು, ಸಣ್ಣ ಈರಪ್ಪ, ವೀರಭದ್ರ ನಾಯಕ, ಬಿಸಾಟಿ ಮಹೇಶ್, ವಡ್ಡಿನ ರಮೇಶ್, ಗಿರೀಶ್, ವಿನಾಯಕ್ ಶೆಟ್ಟರ್, ಯರಿಸ್ವಾಮಿ, ಜಯಪ್ಪ ಪಟ್ಟಿ, ಇಂತಿಯಾಜ್, ಮಾರುತಿ, ಎಚ್.ಬಿ. ಹಳ್ಳಿ ವಿರುಪಾಕ್ಷಿ, ಪಿಡಿಒ ಉಮೇಶ್, ಹಮಾಲಿ ಕಾರ್ಮಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!