ಕನಕಪುರ: ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಶಾಂತಿ ನೆಲೆಸಲು ಸಾಧ್ಯ. 2500 ವರ್ಷಗಳ ಹಿಂದಿನ ಗೌತಮ ಬುದ್ಧರ ಜೀವನ ಶೈಲಿ ಹಾಗೂ ಅಹಿಂಸಾ ಮಾರ್ಗ ಇಂದಿನ ಜಗತ್ತಿಗೆ ಮಹತ್ವದ ಸಂದೇಶವಾಗಿದೆ ಎಂದು ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.
ದಮ್ಮದೀವೀಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಬುದ್ಧನ ತತ್ವಾದರ್ಶಗಳ ಜೊತೆಗೆ ಅವರು ಅನುಸರಿಸಿದ ಅಹಿಂಸಾ ಮಾರ್ಗ ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಬಾಳ್ವೆ ಹಾಗೂ ಸಹೋದರತೆ ಬಿತ್ತಿದರು ಎಂದು ಹೇಳಿದರು. ನೂರಾರು ಬುದ್ಧ ಅನುಯಾಯಿಗಳು ಮೇಣದ ಬತ್ತಿ ಹಿಡಿದು ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿ ಬುದ್ಧನ ಮೂರ್ತಿಗೆ ಗೌರವ ಸಲ್ಲಿಸಿದರು. ಸಮಾರಂಭದಲ್ಲಿ ಡಾ.ಪದ್ಮಾವತಿ, ಶ್ರೀಕಂಠ ಡಾ.ಕೃಷ್ಣಯ್ಯ, ಶಿವರಾಮ್ ಅವರನ್ನು ಸನ್ಮಾನಿಸಲಾಯಿತು, ಮುಖ್ಯ ಅತಿಥಿಗಳಾಗಿ ಡಾ. ಎಂ.ಸಿ.ಬೊಮ್ಮಯ್ಯ, ಡಾ.ತೇಜೋವತಿ, ಮುಖಂಡರಾದ ಕೋಟೆ ಕುಮಾರ್, ಎಸ್ ಎಸ್ ಡಿ ಸಂಘಟನೆ ಜಿ.ಗೋವಿಂದಯ್ಯ, ಶಿವಮಾದಯ್ಯ, ಅಪ್ಪಾಜಿ ಸೇರಿದಂತೆ ಟ್ರಸ್ಟ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01(1) :ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ದಮ್ಮದೀವೀಗೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಭಗವಾನ್ ಗೌತಮ ಬುದ್ಧರ ಜಯಂತಿ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಸಲಾಯಿತು.