ಗೌತಮ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Nov 18, 2024, 12:02 AM IST
ನಾಪೋಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಬಿಎ ವಿದ್ಯಾರ್ಥಿ ಗೌತಮ್ ಎಸ್ ಚಾಂಪಿಯನ್ಶಿಪ್ ಪಟ್ಟವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ.  | Kannada Prabha

ಸಾರಾಂಶ

10 ಕಿ.ಮೀ. ಗುಡ್ಡಗಾಡು ಓಟದಲ್ಲಿ ಗೌತಮ್‌ ಎಸ್. ಚಾಂಪಿಯನ್‌ ಪಟ್ಟ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಬಿ.ಎ. ವಿದ್ಯಾರ್ಥಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗು ವಿಶ್ವವಿದ್ಯಾಲಯ ಅಂತರ್ ಕಾಲೇಜು 10 ಕಿ.ಮೀ ಗುಡ್ಡ ಗಾಡು ಓಟದಲ್ಲಿ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಬಿಎ ವಿದ್ಯಾರ್ಥಿ ಗೌತಮ್ ಎಸ್ ಚಾಂಪಿಯನ್‌ ಪಟ್ಟ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯು ವಿರಾಜಪೇಟೆಯ ಶೇಖರ್ ಕೆ ಮತ್ತು ಶೋಭಾ ದಂಪತಿ ಪುತ್ರ. ವಿಕಾಸ್ ಶ್ರೀನಿವಾಸನ್ ತರಬೇತಿ ನೀಡಿದ್ದರು ಎಂದು ಕಾಲೇಜಿನ ಪ್ರಾಂಶುಪಾಲ ನಂದೀಶ್ ತಿಳಿಸಿದ್ದಾರೆ.

---------------------------------------------

9 ನೇ ವರ್ಷದ ವಾರ್ಷಿಕೋತ್ಸವ, ಪದಗ್ರಹಣ ಸಮಾರಂಭಮಡಿಕೇರಿ : ಅಜಿಲ ಯಾನೆ ನಲಿಕೆ ಸಮಾಜ ಸೇವಾ ಸಮಿತಿ ಇದರ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಆನ್ಯಾಳದ ದ್ವಾಕ್ರ ಭವನದ ಆವರಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಹಿರಿಯರು ಆಗಿರುವ ಚಂದಪ್ಪ ಕಾಂತುಬೈಲು ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ದೇವಪ್ಪ ಕೊಯನಾಡು, ಉಪಾಧ್ಯಕ್ಷರಾದ ಚಂದಪ್ಪ ಆನ್ಯಾಳ, ಅತಿಥಿಗಳಾಗಿ ಕೆನರಾ ಬ್ಯಾಂಕ್ ಉದ್ಯೋಗಿ ಕುಮಾರ ಕಲ್ಲುಗುಂಡಿ, ಹಿರಿಯರಾದ ಬಾಬು ಚಟ್ಟೆಕಲ್ಲು ವೇದಿಕೆಯಲ್ಲಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳಿಗೆ ಗಾಯನ ಮತ್ತು ಲಕ್ಕಿಗೇಮ್, ಮಹಿಳೆಯರಿಗೆ ಗಾಯನ ಮತ್ತು ಹಗ್ಗಜಗ್ಗಾಟ, ಪುರುಷರಿಗೆ ಲಕ್ಕಿಗೇಮ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪಾಣರ, ಅಜಿಲ ಯಾನೆ ನಲಿಕೆ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಸುಬ್ರಾಯ ಕಲ್ಮಂಜ, ಪುತ್ತೂರು ತಾಲೂಕು ನಲಿಕೆ ಸೇವಾ ಸಮಿತಿಯ ಅಧ್ಯಕ್ಷರಾದ ರವಿ ಎಂಡೆಸಾಗು ಇವರು ಅತಿಥಿಗಳಾಗಿ ಭಾಗವಹಿಸಿದ್ದರು.ಸಾಧಕರಿಗೆ ಗೌರವಾರ್ಪಣೆ: ಚಾಪೆ ಹೆಣೆದು ಜೀವನ ಕಂಡುಕೊಂಡ ಹಿರಿಯರಾದ ದೇವಕಿ ಆನ್ಯಾಳ ಮತ್ತು ತ್ರೋಬಾಲ್ ಪಂದ್ಯಾಟದಲ್ಲಿ ಸಾಧನೆ ಮಾಡಿದ ಗಗನ್ ಬಿ.ಜಿ. ಇವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.ಪದಾಧಿಕಾರಿಗಳ ಆಯ್ಕೆ: 2024-25ನೇ ಸಾಲಿನ ಪದಾಧಿಕಾರಿಗಳನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದೇವಪ್ಪ ಕೊಯನಾಡು, ಉಪಾಧ್ಯಕ್ಷರಾಗಿ ಚಂದಪ್ಪ ಆನ್ಯಾಳ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ಆನ್ಯಾಳ, ಕೋಶಾಧಿಕಾರಿಯಾಗಿ ರಾಮಕೃಷ್ಣ ಎ.ಪಿ ಆಯ್ಕೆಯಾದರು. ಅಧ್ಯಕ್ಷರ ಮಾತಿನೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಮಾಧವ ಜೋಡುಪಾಲ ಸ್ವಾಗತಿಸಿದರು. ಅರುಣ್ ಸಿ, ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ