ಸಮಾಜ ಅಭಿವೃದ್ಧಿಗೆ ಧರ್ಮಸ್ಥಳ ಮಾದರಿ: ಡಾ. ಪುಂಡಿಕಾಯ್

KannadaprabhaNewsNetwork |  
Published : Nov 18, 2024, 12:02 AM IST
ಪುಂಡಿಕಾಯ್ ಗಣಪಯ್ಯ ಭಟ್ ಚಿತ್ರ ವರದಿ ರವಾನಿಸಿದೆ. | Kannada Prabha

ಸಾರಾಂಶ

ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಮೂಡುಬಿದಿರೆ ವ್ಯಾಪ್ತಿಯ ೩೦ ಕಿರಿಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆರ್ಥಿಕ ಕೊಡುಗೆ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಗಣ್ಯರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಸಹಕಾರ ಸಂಸ್ಥೆಯೊಂದು ಆರ್ಥಿಕವಾಗಿ ಸಮಾಜವನ್ನು ಬೆಳೆಸುವುದು ಎಂದರೆ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸಹಿತ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವುದು. ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಹೀಗೆ ಧಾರ್ಮಿಕ ಹಿನ್ನೆಲೆಯಲ್ಲಿ ಸಹಕಾರಿ ಮನೋಭಾವದಿಂದ ಸಮಾಜವನ್ನು ಬೆಳೆಸುವುದು, ಬೆಳಗುವುದು ಹೇಗೆ ಎನ್ನುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಅತ್ಯುತ್ತಮ ಮಾದರಿ ಎಂದು ಹಿರಿಯ ಇತಿಹಾಸ ತಜ್ಞ ಡಾ. ಪುಂಡಿಕಾಯ್‌ ಗಣಪಯ್ಯ ಭಟ್ ಹೇಳಿದರು.

ಅವರು ಶನಿವಾರ ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮ ಚಿಂತನ ಸರಣಿಯ ಮೂರನೇ ದಿನ ‘ತುಳುನಾಡಿನ ದೇವಾಲಯಗಳು ಮತ್ತು ಸಹಕಾರ ಸಂಸ್ಕೃತಿ’ ಕುರಿತು ಮಾತನಾಡಿದರು.ತುಳುನಾಡನ್ನು ಶ್ರದ್ಧಾ ಭಕ್ತಿಯ ಕೇಂದ್ರವನ್ನಾಗಿಸುವಲ್ಲಿ ಸಮೃದ್ಧವಾಗಿಸುವಲ್ಲಿ ಇಲ್ಲಿನ ದೇವಳಗಳ ಪಾತ್ರ ಗಮನಾರ್ಹವಾಗಿದೆ ಎಂದವರು ಹೇಳಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್, ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಮಾತನಾಡಿದರು. ಪೆರಿಂಜೆ ಪಡ್ಯಾರ ಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಧರ್ಮದರ್ಶಿ ಜೀವಂಧರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಮೂಡುಬಿದಿರೆ ವ್ಯಾಪ್ತಿಯ ೩೦ ಕಿರಿಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆರ್ಥಿಕ ಕೊಡುಗೆ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಗಣ್ಯರನ್ನು ಅಭಿನಂದಿಸಲಾಯಿತು. ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ್ ಕಾಮತ್ ಇದ್ದರು. ನಿಕಟಪೂರ್ವ ಸಿಇಒ ಧರಣೇಂದ್ರ ಕುಮಾರ್ ವಂದಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು. ಬಳಿಕ ಸಪ್ತ ವರ್ಣ ನೃತ್ಯ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ