ಕೊಪ್ಪಳ:ನಗರದಲ್ಲಿ ಎರಡು ಭಕ್ತಿ ಭಾವೈಕ್ಯತೆಯ ಕೇಂದ್ರಗಳಿವೆ. ಒಂದು ಗವಿಮಠ,ಮತ್ತೊಂದು ಮರ್ದಾನೆ ಗೈಬ್ ದರ್ಗಾ ಇವು ಕೊಪ್ಪಳದ ಎರಡು ಕಣ್ಣುಗಳಾಗಿವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಹಜರತ್ ಮರ್ದಾನ ದರ್ಗಾ ಧಾರ್ಮಿಕ ಕೇಂದ್ರವಾಗಿದೆ. ಗವಿಮಠ ಹಾಗೂ ಮರ್ದಾನೆ ದರ್ಗಾವೂ ಕೊಪ್ಪಳಕ್ಕೆ ಎರಡು ಕಣ್ಣುಗಳಿದ್ದಂತೆ, ಇಲ್ಲಿ ಭಕ್ತಿ ಭಾವೈಕ್ಯತೆ ಕಾಣುತ್ತದೆ. ದರ್ಗಾ ಉರೂಸ್ ಪ್ರತಿ ವರ್ಷವೂ ಬೆಳೆಯುತ್ತಿದೆ. ಹೆಚ್ಚಿನ ಜನರು ಉರೂಸಿಗೆ ಬರುತ್ತಿದ್ದು, ಇಲ್ಲೂ ಸಹ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇದೊಂದು ಮೈಸೂರು ದಸರಾದಂತೆ ನಡೆಯುತ್ತದೆ. ಮರ್ದಾನೆ ದರ್ಗಾದಲ್ಲಿ ಇನ್ನೂ ಅಭಿವೃದ್ಧಿ ಆಗಬೇಕಿದೆ. ನಾವೂ ಅನುದಾನ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ಕೊಡುವ ಕೆಲಸ ಮಾಡಲಿದ್ದೇವೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೊಪ್ಪಳದ ನೆಲವು ಭಾವೈಕ್ಯತೆಯ ತಾಣವಾಗಿದೆ. ಇಂತ ಉರೂಸ್ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತರಿಸಿದೆ. ಮರ್ದಾನೆ ಗೈಬ್ ಅವರು ೪೦೦ವರ್ಷಗಳ ಹಿಂದೆ ದೊಡ್ಡ ಪವಾಡ ಮಾಡಿದ್ದರು ಎನ್ನುವುದನ್ನು ಕೇಳಿದ್ದೇನೆ. ಇಲ್ಲಿನ ಉರೂಸ್ ನೋಡಿದರೆ ಮೈಸೂರು ದಸರಾಗೆ ಬಂದಿದ್ದೇನೆ ಎಂದೆನಿಸುತ್ತದೆ. ಇಲ್ಲಿ ಜಾತಿ, ಧರ್ಮದ ಬೇಧ-ಭಾವ ಇಲ್ಲ.ಎಲ್ಲರೂ ಭಕ್ತಿ ಭಾವೈಕ್ಯತೆಯಿಂದ ಪಾಲ್ಗೊಂಡಿದ್ದಾರೆ. ಹಜರತ್ ಮರ್ದಾನೆ ಗೈಬ್ ಅವರಿಗೆ ಪ್ರಾರ್ಥನೆ ಮಾಡುತ್ತಿರುವುದು ನೋಡಿದರೆ ಇಲ್ಲೊಂದು ಶಕ್ತಿಯಿದೆ ಎಂದೆನಿಸುತ್ತದೆ. ಭಾರತವು ಎಲ್ಲ ಜಾತಿ ಧರ್ಮ ಮೀರಿ ಮಾನವ ಧರ್ಮ ಎತ್ತಿ ಹಿಡಿಯುವುದಾಗಿದೆ. ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಜೀವನ ನಡೆಸುತ್ತಿದ್ದೇವೆ. ಇದಲ್ಲವೂ ಸೂಫಿ ಸಂತರ ಮಾರ್ಗದಿಂದ ನಡೆಯುತ್ತಿದೆ ಎಂದರು.ಮರ್ದಾನೆ ದರ್ಗಾ ಕಮೀಟಿ ಅಧ್ಯಕ್ಷ ಕಾಟನ್ ಪಾಷಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಪ್ಪಳ ನೆಲ ಶಾಂತಿಪ್ರಿಯವಾಗಿದೆ. ಗವಿಮಠ ಹಾಗೂ ಮರ್ದಾನೆ ಗೈಬ್ ಎರಡು ಭಕ್ತಿಯ ಕೇಂದ್ರಗಳಾಗಿವೆ. ಇಲ್ಲಿ ಎಲ್ಲ ಜಿಲ್ಲೆಯ ಜನರು ಜಾತಿ, ಧರ್ಮ ಮರೆತು ಬರುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಸಮಾರಂಭದಲ್ಲಿ ಧರ್ಮಗುರು ಮೌಲಾನಾ ನಜೀರ್ ಅಹ್ಮದ್ ಮುಪ್ತಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ, ಅಮರೇಶ ಕರಡಿ, ಮಹೇಂದ್ರ ಛೋಪ್ರಾ ಸೇರಿದಂತೆ ಹಲವರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಪ್ರಸನ್ನ ಗಡಾದ, ಮುತ್ತುರಾಜ ಕುಷ್ಟಗಿ, ರಾಜಶೇಖರಗೌಡ ಆಡೂರು, ಅಮ್ಜದ್ ಪಟೇಲ್, ಡಿ. ಮಲ್ಲಣ್ಣ, ಅಮರೇಶ ಕರಡಿ, ಕೆ.ಎಂ.ಸೈಯದ್, ಸಾದಿಕ್ ಅತ್ತಾರ, ಮಾನ್ವಿ ಪಾಷಾ, ಫಕುರುದ್ದೀನ್,ಸಾದಿಕ್ ಅಲಿ, ಮೌಲಾ ಹುಸೇನ್, ಫೀರಾ ಹುಸೇನ್ ಹೊಸಳ್ಳಿ, ರವಿ ಕುರಗೋಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.