ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೆಣ್ಣೆ ದೋಸೆ ಹಾಕಿದ ಗವಿಮಠ ಶ್ರೀ

KannadaprabhaNewsNetwork |  
Published : Nov 07, 2024, 11:52 PM IST
7ಕೆಪಿಎಲ್27,28 ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬೆಣ್ಣೆ ದೋಸೆ ಹಾಕುತ್ತಿರುವುದು. | Kannada Prabha

ಸಾರಾಂಶ

ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನ ಸಾವಿರಾರು ವಿದ್ಯಾರ್ಥಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ, ಮೋಹನತಾಲ್ (ಸಿಹಿ ತಿನಿಸು) ವೆಜ್ ಫ್ರೈಡ್ ರೈಸ್ ಹಾಗೂ ಐಸ್ ಕ್ರೀಂ ಉಣಬಡಿಸಲಾಯಿತು.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಗೆ ಬಗೆಯ ಭೋಜನ

ಕನ್ನಡಪ್ರಭ ವಾರ್ತೆ ಕೊಪ್ಪಳ

ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನ ಸಾವಿರಾರು ವಿದ್ಯಾರ್ಥಿಗಳಿಗೆ ದಾವಣಗೆರೆ ಬೆಣ್ಣೆ ದೋಸೆ, ಮೋಹನತಾಲ್ (ಸಿಹಿ ತಿನಿಸು) ವೆಜ್ ಫ್ರೈಡ್ ರೈಸ್ ಹಾಗೂ ಐಸ್ ಕ್ರೀಂ ಉಣಬಡಿಸಲಾಯಿತು.

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಶಾಂತಣ್ಣ ಮುದಗಲ್, ಪುತ್ರ ಉದ್ಯಮಿ ಮಹೇಶ ಮುದಗಲ್ ಪ್ರತಿ ವರ್ಷವೂ ಒಂದು ದಿನ ಒಂದಿಲ್ಲೊಂದು ವಿಶೇಷ ಖಾದ್ಯ ಮಾಡಿಸಿ, ಗವಿಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಣಬಡಿಸುತ್ತಾರೆ.

ಈ ವರ್ಷ ದಾವಣಗೆರೆಯಿಂದಲೇ ಬಾಣಸಿಗರನ್ನು ಕರೆಯಿಸಿ, ಬೆಣ್ಣೆ ದೋಸೆ ಹಾಗೂ ಇತರ ಖಾದ್ಯಗಳನ್ನು ಹಾಸ್ಟೆಲ್‌ನಲ್ಲಿಯೇ ಸಿದ್ಧ ಮಾಡಿಸಿ, ಉಣಬಡಿಸಿದ್ದು, ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ದೋಸೆ ಹಾಕಿದ ಶ್ರೀಗಳು:

ದಾವಣಗೆರೆ ಬೆಣ್ಣೆ ದೋಸೆಯನ್ನು ಖುದ್ದು ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೆಲಹೊತ್ತು ಮಾಡಿದ್ದು ವಿಶೇಷವಾಗಿತ್ತು. ಬಾಣಿಸಿಗರಂತೆಯೇ ಇವರು ಸಹ ದೋಸೆ ಹಾಕಿದರು.

ನೀವು ಮಾಡಿಸಬಹುದು:

ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಮತ್ತು ವಸತಿ ನಿಲಯದಲ್ಲಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹೀಗೆ ಹತ್ತಾರು ದಿನಗಳಿಗೊಮ್ಮೆ ಯಾರಾದರೂ ತಮ್ಮ ಮನೆಯಲ್ಲಿ ವಿಶೇಷತೆ ಇದ್ದವರು ಮಕ್ಕಳಿಗೆ ವಿಶೇಷ ಖಾದ್ಯ ಮಾಡಿಸಿ ಉಣಬಡಿಸುತ್ತಾರೆ. ಮಕ್ಕಳ ಜನ್ಮದಿನಾಚರಣೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಅಂದು ನೀವೇ ಎಲ್ಲವನ್ನು ತರಿಸಿಕೊಡಬಹುದು, ಮಾಡಿಸಿಕೊಡಬಹುದು, ಇಲ್ಲವೇ ನೀವೇ ಹೇಳಿದ ಖಾದ್ಯವನ್ನು ಮಾಡುವಂತೆ ಮಠದಲ್ಲಿರುವ ಬಾಣಸಿಗರಿಗೆ ಹೇಳಿದರೆ ಮಾಡಿ ಉಣಬಡಿಸುತ್ತಾರೆ.

ಇದಕ್ಕಾಗಿ ನೀವು ಮೊದಲೇ ಹಾಸ್ಟೆಲ್ ಉಸ್ತುವಾರಿಯೊಂದಿಗೆ ದಿನಾಂಕ ನಿಗದಿ ಮಾಡಿಕೊಳ್ಳಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ