ಕೊಪ್ಪಳ:
ಶ್ರೀಗಳು ಸೇರಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರ ಮಹಾಂತೇಶ ದರಗದ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರಂತೆ ಪ್ರತಿ ಚದರ್ ಮೀಟರ್‌ಗೆ ಸಸಿ ನೆಟ್ಟು, ದಟ್ಟವಾಗಿ ಅರಣ್ಯ ಬೆಳೆಸಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಗವಿಮಠ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಇದರಿಂದ ಸಂಪ್ರದಾಯಿಕ ಕಾಡುಗಳಿಂದ ಹತ್ತು ಪಟ್ಟು ವೇಗವಾಗಿ ಗಿಡಗಳು ಬೆಳೆಯುತ್ತವೆ ಎನ್ನುವುದು ಇದರ ವಿಶೇಷತೆಯಾಗಿದೆ
ಏಪ್ರಿಲ್ ಕೂಲ್:ಏಪ್ರಿಲ್ 1 ಮೂರ್ಖರ ದಿನವನ್ನಾಗಿ ಆಚರಿಸುವುದಕ್ಕಿಂತ ಜೂನ್ ತಿಂಗಳಲ್ಲಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟರೇ ಏಪ್ರಿಲ್ ಕೂಲ್ ದಿನವಾಗಿ ಆಚರಿಸಬಹುದು ಎನ್ನುವ ಕಲ್ಪನೆಯೊಂದಿಗೆ 45 ಎಕರೆ ವಿಸ್ತಾರದಲ್ಲಿ 2 ಕಿಲೋ ಮೀಟರ್ ಉದ್ದ ಹಾಗೂ 12 ಅಡಿ ಅಗಲದಲ್ಲಿ ವಿಯಾವಾಕಿ ಮಾದರಿ ಅನುಸರಿಸಿ ಕಾಯಾ, ಬೇವು, ಬನ್ನಿ, ಹಲಸು, ಆಲ, ಅರಳಿ, ಬಿದಿರು, ತೆಂಗು, ಹೊಂಗೆ, ನೆರಳೆ, ಪಾರಿಜಾತ, ತೇಗ, ಹೂಳೆಮತ್ತಿ, ಗುಲಮೋಹರ, ಕದಂಬ, ಮಾವು ಸೇರಿದಂತೆ 60 ಬಗೆಯ 25 ಸಾವಿರ ಸಸಿ ನೆಡಲಾಗುತ್ತದೆ.