ಗವಿಶ್ರೀಗಳಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರೀಕಾರ

KannadaprabhaNewsNetwork | Updated : May 24 2025, 12:34 AM IST
ಮಗುವಿಗೆ ಹೊಸ ಬಟ್ಟೆ ಹಾಕಿ, ನೂತನ ಬಳಪ, ಪೆನ್ನು, ಪಾಟಿ, ಪುಸ್ತಕ ತಂದು ಗವಿಶ್ರೀಗಳ ಹಸ್ತದಿಂದ ಮಗುವಿನ ಕೈ ಹಿಡಿಸಿ ಶ್ರೀಕಾರ ಬರೆಯಿಸಿದರು. ಇದು ಪಾಲಕರಿಗೆ ಚೈತನ್ಯ ಮೂಡಿಸಿತು. ಶ್ರದ್ಧಾ, ಭಕ್ತಿಯಿಂದ ಪಾಲಕರು ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ, ಶ್ರೀಗಳ ಆಶೀರ್ವಾದ ಲಭಿಸಲಿ ಎಂದು ಪ್ರಾರ್ಥಿಸಿದರು.
Follow Us

ಕೊಪ್ಪಳ:

ನಗರದ ಗವಿಮಠದ ಆವರಣದಲ್ಲಿ ಗವಿಸಿದ್ಧೇಶ್ವರ ಶ್ರೀಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಶುಕ್ರವಾರ ಜರುಗಿತು.

ಬೆಳಗ್ಗೆಯಿಂದಲೇ ಗವಿಮಠಕ್ಕೆ ನೂರಾರು ಪಾಲಕರು ತಮ್ಮ ಮಕ್ಕಳನ್ನು ಕರೆದು ತಂದು ಗವಿಸಿದ್ಧೇಶ್ವರ ಶ್ರೀಗಳ ಅಮೃತ ಹಸ್ತದಿಂದ ಮಗುವಿಗೆ ಅಕ್ಷರ ಬರೆಯಿಸಲು ನೂರಾರು ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಅಕ್ಷರಾಭ್ಯಾಸ ಮಾಡಿಸಿದರು.

ಮಗುವಿಗೆ ಹೊಸ ಬಟ್ಟೆ ಹಾಕಿ, ನೂತನ ಬಳಪ, ಪೆನ್ನು, ಪಾಟಿ, ಪುಸ್ತಕ ತಂದು ಗವಿಶ್ರೀಗಳ ಹಸ್ತದಿಂದ ಮಗುವಿನ ಕೈ ಹಿಡಿಸಿ ಶ್ರೀಕಾರ ಬರೆಯಿಸಿದರು. ಇದು ಪಾಲಕರಿಗೆ ಚೈತನ್ಯ ಮೂಡಿಸಿತು. ಶ್ರದ್ಧಾ, ಭಕ್ತಿಯಿಂದ ಪಾಲಕರು ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ, ಶ್ರೀಗಳ ಆಶೀರ್ವಾದ ಲಭಿಸಲಿ ಎಂದು ಪ್ರಾರ್ಥಿಸಿದರು.

ಮುಸ್ಲಿಂಮರು ಸಹ ಭಾಗಿ:

ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂಮರು ಸಹ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಶ್ರೀಗಳು ಸಹ ಎಲ್ಲ ಮಕ್ಕಳಿಗೆ ಅಕ್ಷರ ಬರೆಯಿಸಿ ಆಶೀರ್ವದಿಸಿದರು. ಪ್ರತಿ ಮಗುವಿಗೂ ಶ್ರೀಕಾರ, ಓಂಕಾರ, ಅ,ಆ, ಬರೆಯಿಸಿ ಅವರ ತಲೆ ಸವರಿದರು. ಶ್ರೀಗಳು ಮಕ್ಕಳೊಂದಿಗೆ ಬೆರೆತು ಅಕ್ಷರಭ್ಯಾಸ ಮಾಡಿಸಿದರು.

ಒಂದುವರೆ ವರ್ಷದಿಂದ ಆರು ವರ್ಷದ ಮಕ್ಕಳಿಗೂ ಅಕ್ಷರಾಭ್ಯಾಸ ಮಾಡಿಸಲಾಯಿತು. ಶ್ರೀಗಳಿಂದಲೇ ಅಕ್ಷರಾಭ್ಯಾಸ ಆರಂಭಿಸಿಬೇಕು ಎಂದು ಬಹಳ ದಿನಗಳಿಂದ ಅಪೇಕ್ಷೆ ಪಟ್ಟಿದ್ದೇವು ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.

ನೂರಾರು ಪಾಲಕರು ಭಾಗಿ:

ಬೆಳಗ್ಗೆ 9ರಿಂದ 11.30ರ ವರೆಗೆ ನಡೆದ ಅಕ್ಷರಾಭ್ಯಾಸದಲ್ಲಿ ಪಾಲ್ಗೊಳ್ಳಲು ಪಾಲಕರು ಬೆಳಂಬೆಳಗ್ಗೆ ಗವಿಮಠದತ್ತ ನೂರಾರು ಸಂಖ್ಯೆಯಲ್ಲಿ ಮಕ್ಕಳೊಂದಿಗೆ ಆಗಮಿಸಿದ್ದರು. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರಿಂದ ಅವರ ಭವಿಷ್ಯ ಉತ್ತಮ ಆಗುತ್ತದೆ. ಶ್ರೀಗಳ ಕೃಪೆ ಸಿಗಲಿ ಎಂದು ಅವರೊಂದಿಗೆ ಅಕ್ಷರ ಬರೆಯಿಸುತ್ತಿದ್ದೇವೆ. ಶ್ರೀಗಳು ಹಿಂದೂ-ಮುಸ್ಲಿಂ ಎನ್ನದೆ ಎಲ್ಲ ಮಕ್ಕಳನ್ನು ಸಮನಾಗಿ ಕಂಡು ಅಕ್ಷರಾಭ್ಯಾಸ ಮಾಡಿಸಿದ್ದಾರೆ

ಅಕ್ಷರಾಭ್ಯಾಸ ಮಾಡಿಸಿದ ಪಾಲಕರು