ಕಲಗದ್ದೆಯಲ್ಲಿ ಗಾಯತ್ರಿ ಮಹಾಸತ್ರ ಆರಂಭ

KannadaprabhaNewsNetwork |  
Published : Nov 05, 2024, 12:42 AM IST
ಸಿದ್ದಾಪುರ ತಾಲೂಕಿನ ಕಲಗದ್ದೆಯ ನಾಟ್ಯವಿನಾಯಕ ದೇವಸ್ಥಾನದಲ್ಲಿ ನಿರ್ಮಿಸಿದ ಸಾವಿತ್ರಂ ಯಾಗ ಶಾಲೆಯನ್ನು ರಾಘವೇಶ್ವರ ಭಾರತೀ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ದೇಗುಲದಲ್ಲಿ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಗಣೇಶ ಪೂಜೆ, ರುದ್ರ ಹೋಮ, ಗಾಯತ್ರಿ ಹವನ, ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಿತು.

ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಕಳೆದ ೩೭೨ ದಿನಗಳ ಕಾಲ ನಿರಂತರವಾಗಿ ನಡೆದಿದ್ದ ಗಾಯತ್ರಿ ಮಹಾಸತ್ರದ ಸಮಾರೋಪ ಸಮಾರಂಭದ ಹಿನ್ನೆಲೆ ರಾಮಚಂದ್ರಾಪುರದ ರಾಘವೇಶ್ವರ ಭಾರತೀ ಸ್ವಾಮೀಜಿ ಸೋಮವಾರ ಕಲಗದ್ದೆಗೆ ಆಗಮಿಸಿದರು.ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ದಂಪತಿಗಳು ಶ್ರೀಗಳನ್ನು ಬರಮಾಡಿಕೊಂಡರು.ದೇವರ ದರ್ಶನದ ಬಳಿಕ ನೂತನವಾಗಿ ನಿರ್ಮಾಣಗೊಂಡ ಸಾವಿತ್ರಂ ಯಾಗ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು. ಮುಂಜಾನೆಯಿಂದ ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಗಣೇಶ ಪೂಜೆ, ರುದ್ರ ಹೋಮ, ಗಾಯತ್ರಿ ಹವನ, ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಿತು.ಸಂಜೆ ಡಾ. ಬಂದಗದ್ದೆ ನಾಗರಾಜ ಅವರಿಂದ ವೇದ ಮಾತಾ ಗಾಯತ್ರಿ ಉಪನ್ಯಾಸ ನಡೆಯಿತು. ಈ ವೇಳೆ ವಿದ್ವಾಂಸ ಗೋಪಾಲಕೃಷ್ಣ ಶರ್ಮಾ, ವಿಷ್ಣುಗುಪ್ತ ವಿವಿಯ ಆಡಳಿತ ಮಂಡಳಿ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಹವ್ಯಕ ಮಹಾ ಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಸಮಿತಿ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ, ಸಿದ್ದಾಪುರ ಮಂಡಲದ ಅಧ್ಯಕ್ಷ ಮಹೇಶ ಚಟ್ನಳ್ಳಿ, ಗುರಿಕಾರ ನವೀನ ಹೆಗಡೆ ಕಲಗದ್ದೆ, ಸುವರ್ಣ ಪಾದುಕಾ ವಿಭಾಗದ ಸಂಚಾಲಕ ಭಾಸ್ಕರ ಹೆಗಡೆ ಕೊಡಗಿಬೈಲ್, ವಿ. ಚಂದ್ರಶೇಖರ ಭಟ್ಟ ಗಾಳಿಮನೆ ಇತರರು ಇದ್ದರು.

ಮಂಗಳವಾರ ನಡೆಯಲಿರುವ ಮಹಾ ಸತ್ರದ ಸಂಪನ್ನ ಸಮಾರಂಭದಲ್ಲಿ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ. ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಹವನಗಳು, ೧೧ಕ್ಕೆ ಯಜ್ಞದ ಮಹಾ ಪೂರ್ಣಾಹುತಿ, ೧೨ಕ್ಕೆ ಧರ್ಮಸಭೆ ನಡೆಯಲಿದೆ. ಇದೇ ವೇಳೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರಿಗೆ ರಾಜಮಾನ್ಯ, ವಿದ್ವಾನ್ ಡಾ. ಗೋಪಾಲಕೃಷ್ಣ ಶರ್ಮಾ ಬಾಲಿಕೊಪ್ಪ ಅವರಿಗೆ ಸಿಂಧೂರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ೧೨ ಸಾಧಕರಿಗೆ ಗಾಯತ್ರಿ ಪುರಸ್ಕಾರ ಹಾಗೂ ಕೊಳಗಿ ಕೇಶವ ಹೆಗಡೆ ಭಾಗವತರಿಗೆ ಗಾನಶ್ರೀ ಪ್ರದಾನವಾಗಲಿದೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ದಿಢೀರ್‌ ಪ್ರತಿಭಟನೆ

ಕಾರವಾರ: ನಗರದ ಹಬ್ಬುವಾಡಾ ರಸ್ತೆ ಸಂಪೂರ್ಣ ಕೆಟ್ಟಿದ್ದು, ರಸ್ತೆಯ ಗುಂಡಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಆಟೋ ಸಂಘಗಳ ಚಾಲಕರು ಮತ್ತು ಮಾಲೀಕರು ಸೋಮವಾರ ನಗರದ ಹಬ್ಬುವಾಡಾ ರಸ್ತೆಯ ಕೆಎಚ್‌ಬಿ ಕಾಲನಿ ಕ್ರಾಸ್ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು. ಹಬ್ಬುವಾಡಾ ರಸ್ತೆಯಲ್ಲಿ ಕೆಎಚ್‌ಬಿ ಕಾಲನಿ ಕ್ರಾಸ್‌ನಿಂದ ಬಾಂಡಿಶಿಟ್ಟಾದ ವರೆಗೆ ರಸ್ತೆ ಗುಂಡಿಮಯವಾಗಿದೆ. ಭಾನುವಾರ ಸ್ಕೂಟರ್ ಚಲಾಯಿಸತ್ತಿದ್ದ ಸಂದರ್ಭದಲ್ಲಿ ಮಹಿಳಾ ಬೈಕ್ ಸವಾರೆ ಗುಂಡಿಯಲ್ಲಿ ಆಯ ತಪ್ಪಿ ಬಿದ್ದು, ಗಾಯ ಮಾಡಿಕೊಂಡಿದ್ದರು. ಇದೇ ರೀತಿಯಾಗಿ ನಿತ್ಯವೂ ಸಣ್ಣಪುಟ್ಟ ಅಪಘಾತಗಳು ಇಲ್ಲಿ ಸಂಭವಿಸುತ್ತಲೇ ಇದ್ದು, ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ನಗರಸಭೆ ಆಯುಕ್ತರು, ಅಧ್ಯಕ್ಷರು ಪಟ್ಟು ಹಿಡಿದರು. ಸ್ಥಳಕ್ಕೆ ಸಂಚಾರ ಠಾಣೆಯ ಪಿಎಸ್‌ಐ ಸ್ಥಳಕ್ಕೆ ಬಂದು ಪ್ರತಿಭಟನೆಯನ್ನು ಹಿಂಪಡೆಯುವಂತೆ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

ಆದರೆ, ಅವರು ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಕಾರವಾರ ವೃತ್ತದ ಸಿಪಿಐ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿದರು.

ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಮಂಗಳವಾರ ಸಾರ್ವಜನಿಕರು ಮತ್ತು ಆಟೋ ಚಾಲಕರು ಮತ್ತು ಮಾಲೀಕರು, ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರೊಂದಿಗೆ ರಸ್ತೆ ದುರಸ್ತಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಸಿಪಿಐ ಅವರ ಮಾತು ಒಪ್ಪಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ಆಟೋ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ಉದಯ ನಾಯ್ಕ, ಭಗತ್ ಸಿಂಗ್ ಆಟೋ ಚಾಲಕರ ಸಂಘದ ಕಾಶೀನಾಥ ಬಂಟ್, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಸಂಜು ಹರಿಕಂತ್ರ, ಅಶೋಕ ಗುನಗಿ, ರಮಾಕಾಂತ ಗುನಗಿ, ಗುರು, ನಿಸಾರ್, ವಿನಾಯಕ ಪೆಡ್ನೆಕರ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!
ಶಿರಸಿ ಮಾರಿಕಾಂಬಾ ಜಾತ್ರೆಗಾಗಿ ತಾಳಗುಪ್ಪದವರೆಗೆ ರೈಲು ವಿಸ್ತರಣೆ-ವಿಶೇಷ ಟ್ರಿಪ್