ಕನ್ನಡಪ್ರಭ ವಾರ್ತೆ ಮೈಸೂರುನಗರದ ಹೂಟಗಳ್ಳಿ ಕೆಎಚ್.ಬಿ ಕಾಲೋನಿಯ ಗಾಯತ್ರಿ ವಿಪ್ರ ಸಂಘದ ವತಿಯಿಂದ ಶ್ರೀ ಅನಂತೆಶ್ವರ ಭವನದಲ್ಲಿ ಶ್ರೀ ಆಚಾರ್ಯತ್ರಯರ ಜಯಂತಿ, ಪೂಜೆ, ಭಕ್ತಿ, ಸಂಗೀತ, ಭಜನೆ, ವಿಷ್ಣು ಸಹಸ್ರನಾಮ, ಪ್ರವಚನ , ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಕುಟುಂಬ ಸಮೇತ ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ದೇವರ ಕೃಪೆಗೆ ಪಾತ್ರರಾದರು. ಹಲವಾರು ಪ್ರಶಸ್ತಿ ಪುರಸ್ಕೃತ ನಾಗರಾಜ್ ಬೈರಿ, ಎಕೆಬಿಎಂಎಸ್ ಪದಾಧಿಕಾರಿಗಳಾಗಿ ಆಯ್ಕೆಯಾದ ಶ್ರೀಕಂಠಕುಮಾರ್, ನವೀನಕುಮಾರ್, ಡಿ.ಟಿ. ಪ್ರಕಾಶ್, ಡಾ. ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.