ಇಂದಿನಿಂದಲೇ ಜಿಬಿಎ ಆಡಳಿತ ಜಾರಿ

KannadaprabhaNewsNetwork |  
Published : Sep 02, 2025, 02:00 AM ISTUpdated : Sep 02, 2025, 10:43 AM IST
Greater Bengaluru

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಡಳಿತ ಮಂಗಳವಾರದಿಂದ ಚಾಲನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

 ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಡಳಿತ ಮಂಗಳವಾರದಿಂದ ಚಾಲನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಬಿಬಿಎಂಪಿ ಆಡಳಿತ ವ್ಯಾಪ್ತಿಯನ್ನು 5 ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಈ ನಗರ ಪಾಲಿಕೆಗಳ ಮೇಲೆ ನಿಗಾ ವಹಿಸಲು ಜಿಬಿಎ ರಚಿಸಲಾಗಿದ್ದು, ಮಂಗಳವಾರದಿಂದ ಬಿಬಿಎಂಪಿ ರದ್ದಾಗಿ ಜಿಬಿಎ ಆಡಳಿತ ಆರಂಭವಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳು ಮಂಗಳವಾರವೇ ಬದಲಾಗಲಿದೆ.

ಅದಕ್ಕೂ ಮುನ್ನ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಲ್ಲಿ ಕೈಗೊಳ್ಳಲಾಗುವ ಚುನಾವಣೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರ ವೆಚ್ಚದ ಮಿತಿಯನ್ನು 5 ಲಕ್ಷ ರು.ಗೆ ನಿಗದಿ, ಚುನಾವಣೆ ನಡೆಯುವ ಸಂದರ್ಭದಲ್ಲಿ ನಕಲಿ ಮತದಾರರ ಕುರಿತಂತೆ ದೂರು ಬಂದಾಗ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಮತ್ತಿತರ ಅಂಶಗಳು ಅಧಿಸೂಚನೆ ಒಳಗೊಂಡಿದೆ. ಅಲ್ಲದೆ, ಈ ಹಿಂದಿನ ಬಿಬಿಎಂಪಿ ಕಾಯ್ದೆಯಲ್ಲಿರುವ ಅಂಶಗಳನ್ನು ಗ್ರೇಟರ್‌ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳಲ್ಲಿ ಸೇರಿಸಲಾಗಿದೆ.

1949ರಿಂದ 2025ರವರೆಗೆ ಪಾಲಿಕೆಯ ಪಯಣ..

ಬೆಂಗಳೂರಿನಲ್ಲಿ 1949ರಲ್ಲಿ ನಗರಸಭೆ ರೂಪುಗೊಂಡಿತ್ತು. ಆಗಿನಿಂದ 1995ರವರೆಗೆ ನಗರಸಭೆ ಆಡಳಿತವಿತ್ತು. ಅದಾದ ನಂತರ 1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. ಅದರ ಆಡಳಿತ 2006ರವರೆಗೆ ನಡೆಸಲಾಯಿತು. ಆನಂತರ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಹಿರಿದಾಗಿಸಿ 2010ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚಿಸಲಾಯಿತು. ಆಗಿನಿಂದ 2025ರ ಸೆ.9ರವರೆಗೆ ಬೆಂಗಳೂರಿನಲ್ಲಿ ಬಿಬಿಎಂಪಿ ಆಡಳಿತ ನಡೆಸಲಾಯಿತ್ತು. ಇದೀಗ ಮಹಾನಗರ ಪಾಲಿಕೆಯನ್ನು 5 ನಗರಪಾಲಿಕೆಗಳನ್ನು ವಿಂಗಡಿಸಿ, ಜಿಬಿಎ ಆಡಳಿತ ಆರಂಭಿಸಲಾಗುತ್ತಿದೆ. 1949ರಲ್ಲಿ ಆರ್‌. ಸುಬ್ಬಣ್ಣ ಮೊದಲ ಮೇಯರ್‌ ಆಗಿದ್ದರೆ 2019-20ರಲ್ಲಿ ಮೇಯರ್‌ ಆದ ಎಂ. ಗೌತಮ್‌ಕುಮಾರ್‌ ಬೆಂಗಳೂರಿನ ಏಕೀಕೃತ ಆಡಳಿತದ ಕೊನೆಯ ಮೇಯರ್‌ ಆಗಿದ್ದಾರೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ