ಏ.4 ರಂದು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ

KannadaprabhaNewsNetwork |  
Published : Feb 24, 2026, 04:15 AM IST
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಹತ್ತಿರ ವಿರುವ ನಾಗರಬೆಟ್ಟ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯಯಲ್ಲಿ ಚಾಂಪಿಯನ್ ಅವಾರ್ಡ್‌ ಪರೀಕ್ಷೆ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಕ್ಕಳಿಗೆ ಪ್ರಾರಂಭದ ಹಂತದಿಂದಲೇ ಅತ್ಯಾಧುನಿಕ ತರಬೇತಿ ನೀಡುವ ಮೂಲಕ ಗುಣಮಟ್ಟ ಶಿಕ್ಷಣ ನೀಡುವುದೇ ನಮ್ಮ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ. ಈ ಹಿನ್ನೆಲೆ ಪ್ರತಿ ವರ್ಷ ಅತಿ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಆಯ್ಕೆಗೊಳ್ಳುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿಯೇ ನಾಗರಬೆಟ್ಟ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯು ವಿದ್ಯಾಕಾಶಿ ಎಂದೇ ಬಿಂಬಿತವಾಗಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಕ್ಕಳಿಗೆ ಪ್ರಾರಂಭದ ಹಂತದಿಂದಲೇ ಅತ್ಯಾಧುನಿಕ ತರಬೇತಿ ನೀಡುವ ಮೂಲಕ ಗುಣಮಟ್ಟ ಶಿಕ್ಷಣ ನೀಡುವುದೇ ನಮ್ಮ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ. ಈ ಹಿನ್ನೆಲೆ ಪ್ರತಿ ವರ್ಷ ಅತಿ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಆಯ್ಕೆಗೊಳ್ಳುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿಯೇ ನಾಗರಬೆಟ್ಟ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯು ವಿದ್ಯಾಕಾಶಿ ಎಂದೇ ಬಿಂಬಿತವಾಗಿದೆ ಎಂದು ಸಂಸ್ಥೆ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಹೇಳಿದರು.

ತಾಲೂಕಿನ ಬಿದರಕುಂದಿ ಹತ್ತಿರವಿರುವ ನಾಗರಬೆಟ್ಟ ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಚಾಂಪಿಯನ್ ಅವಾರ್ಡ್‌ ಪರೀಕ್ಷೆಯ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್‌ ಸೈನ್ಸ್ ಕಾಲೇಜಿನ ಆವರಣದಲ್ಲಿ ಏ.4ರಂದು ₹3 ಕೋಟಿ ವೆಚ್ಚದ ನಗದು ಬಹುಮಾನ ಸಹಿತ ಶಿಷ್ಯವೇತನ ನೀಡುವ ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ ನಡೆಸಲಾಗುತ್ತದೆ ಎಂದರು.ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಈ ವರ್ಷದ ಜೆಇಇ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ.90ಕ್ಕೂ ಅಧಿಕ ಪರ್ಸೆಂಟೈಲ್ ಅಂಕ ಬಂದಿವೆ. ಅದರಲ್ಲಿ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ 3 ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಪ್ರಸಕ್ತ ವರ್ಷದಿಂದ ಜೆಇಇ ತರಬೇತಿಯನ್ನು ಮುದ್ದೇಬಿಹಾಳ ಶಾಖೆಯಲ್ಲಿ ಆರಂಭಿಸಲಾಗಿದೆ. ಕಳೆದ 5 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳುತ್ತ ಬಂದಿದ್ದಾರೆ ಎಂದು ತಿಳಿಸಿದರು.ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಆದರೆ, ನಾಗರಬೆಟ್ಟ ಆಕ್ಸಪರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆ ಕಾರ್ಯ ಸಾಧನೆ ಅಪಾರವಾಗಿದೆ. ಬೆಂಗಳೂರು ಮಂಗಳೂರರಂತ ದೊಡ್ಡ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಯನ್ನೇ ಅವಲಂಬಿತರಾಗಿ ಕುಳಿತುಕೊಳ್ಳಬೇಕಿತ್ತು. ಇದರಿಂದ ನಿಜವಾದ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆದುಕೊಳ್ಳಲು ನೀಟ್‌ನಂತಹ ಸ್ಪಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಕಷ್ಟಪಡೆಬೇಕಾಗಿತ್ತು. ಆದರೆ, ಸಂಸ್ಥೆ ಮುಖ್ಯಸ್ಥರಾದ ಎಂ.ಎಸ್.ಪಾಟೀಲರ ಶಿಕ್ಷಣ ಪ್ರೇಮದ ಪರಿಶ್ರಮದಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನಿಯ ಎಂದರು.ಈ ವೇಳೆ ಬಿ.ಎಚ್.ತಿಳಗೂಳ, ಸಂಗಮೇಶ ಹೂಗಾರ, ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿದರು. ಢವಳಗಿ ಸ್ವತಂತ್ರ್ಯ ಪಪೂ ಕಾಲೇಜಿನ ಪ್ರಾಚಾರ್ಯ ಎನ್.ಎ.ಬಿರಾಜದಾರ, ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ, ಶಿಕ್ಷಕರಾದ ರಾಜಶೇಖರ ಹಿರೇಮಠ, ಆನಂದ ನಾವಿ, ಸಿದ್ದನಗೌಡ ಕಾಶಿನಕುಂಟಿ ಮೊದಲಾದವರಿದ್ದರು. ಪರಶುರಾಮ ಹೂಗಾರ ಸ್ವಾಗತಿಸಿ, ಇಸ್ಮಾಯಿಲ್ ಮನಿಯಾರ್ ನಿರೂಪಿಸಿ ವಂದಿಸಿದರು.55 ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಆಯ್ಕೆ

5 ರಿಂದ 10ನೇ ತರಗತಿಯವರೆಗೆ ಆಕ್ಸಫರ್ಡ್ ಪಾಟೀಲ್ಸ್ ಚಾಂಪಿಯನ್ಸ್ ಪರೀಕ್ಷೆಯಲ್ಲಿ 912 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಎಲ್ಲ ತರಗತಿಗೆ 11 ವಿದ್ಯಾರ್ಥಿಗಳಂತೆ ಒಟ್ಟು 55 ವಿದ್ಯಾರ್ಥಿಗಳನ್ನು ₹10 ಲಕ್ಷ ವೆಚ್ಚದ ಶಿಷ್ಯವೇತನಕ್ಕೆ ಆಯ್ಕೆ ಮಾಡಲಾಯಿತು. ವಿಶೇಷವೆಂದರೆ ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.2025ರಲ್ಲಿ ನಮ್ಮ ಸಂಸ್ಥೆ 187 ಮೆಡಿಕಲ್ ಸೀಟ್‌ ಪಡೆದುಕೊಂಡ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದಾಗಿದೆ. ಜೊತೆಗೆ ಬಾಗಲಕೋಟೆಯಲ್ಲಿಯೂ ಕೂಡ ನಮ್ಮ ಶಿಕ್ಷಣ ಸಂಸ್ಥೆ ಶಾಖೆ ಪ್ರಾರಂಭಿಸಲಾಗಿದೆ. ಅದರಂತೆ ಜೆಇಇ ನೀಟ್‌ ಪರೀಕ್ಷೆ ಕುರಿತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ ಟ್ಯಾಲೆಂಟ್ ಅವಾರ್ಡ್‌ ಮೂಲಕ ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಯಸುವಲ್ಲಿ ನಡೆಸಿದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲ ಶಿಕ್ಷಕರ ಹಾಗೂ ಉಪನ್ಯಾಸಕರ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯ ನಿಜಕ್ಕೂ ಶ್ಲಾಘನೀಯ.

-ಅಮೀತಗೌಡ ಪಾಟೀಲ,

ಆಕ್ಸಫರ್ಡ್‌ ಪಾಟೀಲ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ