ಚನ್ನಪಟ್ಟಣ: ಕಾರ್ಮಿಕ ಇಲಾಖೆ ಅಸಂಘಟಿತ ವಲಯದ ಪತ್ರಿಕಾ ವಿತರಕರಿಗೆ ಕೊಡ ಮಾಡುವ ಇ-ಶ್ರಮ್ ಕಾರ್ಡ್‌ಗಳನ್ನು ಜಿಲ್ಲೆಯ ಎಲ್ಲಾ ಪತ್ರಿಕಾ ವಿತರಕರು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಎಂ.ಶಿವಮಾದು ಸಲಹೆ ನೀಡಿದರು.
ಈಗಾಗಲೇ ರಾಮನಗರ ಹಾಗೂ ಚನ್ನಪಟ್ಟಣ ತಾಲೂಕಿನ ಪತ್ರಿಕಾ ವಿತರಕರ ಕಾರ್ಡ್‌ಗಳ ನೋಂದಣಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಇನ್ನುಳಿದ ತಾಲೂಕುಗಳ ವಿತರಕರನ್ನು ನೋಂದಣಿ ಮಾಡಿಕೊಂಡು ಇ-ಶ್ರಮ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗುವುದು ಎಂದರು.
ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕರ ಸೊಸೈಟಿಯ ಬಿ.ಆರ್.ದಿನೇಶ್, ಅರ್ಪಿತಾ ಬಿ.ಎಸ್, ಧರ್ಮಸ್ಥಳ ಸಂಸ್ಥೆಯ ಶ್ವೇತಾ ಎನ್, ಮನೋಜ್ ಇತರರಿದ್ದರು. ಈ ಸಂದರ್ಭದಲ್ಲಿ ತಾಲೂಕಿನ 30ಕ್ಕೂ ಹೆಚ್ಚು ಪತ್ರಿಕಾ ವಿತರಕರ ನೋಂದಣಿ ಮಾಡಿಕೊಂಡರು.ಪೊಟೋ೨೧ಸಿಪಿಟಿ೮:
ಚನ್ನಪಟ್ಟಣದಲ್ಲಿ ತಾಲೂಕಿನ ಪತ್ರಿಕಾ ವಿತರಕರಿಗೆ ಇ-ಶ್ರಮ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳ ನೋಂದಣಿ ಕಾರ್ಯ ನಡೆಯಿತು.