ಶ್ರೀರಾಮರ ಆದರ್ಶ ಮೈಮನಗಳಲ್ಲಿ ರೂಢಿಸಿಕೊಳ್ಳಿ

KannadaprabhaNewsNetwork |  
Published : Jan 24, 2024, 02:01 AM IST
22ಎಂಬಿಎಲ್5 | Kannada Prabha

ಸಾರಾಂಶ

ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಯೋಧ್ಯೆ ಧರ್ಮಪ್ರಭು ಶ್ರೀರಾಮಲಲ್ಲಾ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶ್ರೀರಾಮ ಭಕ್ತಿ ಜಾಗರಣ ಕಾರ್ಯಕ್ರಮದಲ್ಲಿ ಮುಖ್ಯಗುರು ರಾಮಚಂದ್ರ ಹೆಗಡೆ ಪೂಜೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಮಾಯಣದ ಆದರ್ಶ ಪಾಲನೆ ನಮ್ಮ ಮೇಲಿದೆ ಎಂದು ಪ್ರೌಢಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.

ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಯೋಧ್ಯೆ ಧರ್ಮಪ್ರಭು ಶ್ರೀರಾಮಲಲ್ಲಾ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಶ್ರೀರಾಮ ಭಕ್ತಿ ಜಾಗರಣ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಮಾಯಣ ಆದರ್ಶಮಯ ಕಾವ್ಯವಾಗಿದೆ. ನಮ್ಮ ಪೂರ್ವಜರು ಈ ರಾಮಾಯಣದ ಆದರ್ಶದ ಸಂಕೇತವಾಗಿರುವ ರಾಮನನ್ನು ಬಿಂಬಿಸುವ ಸಲುವಾಗಿ ರಾಮಮಂದಿರದ ಕುರಿತಾಗಿ ಹೋರಾಟ ನಿರಂತರವಾಗಿ ನಡೆದು ಇವತ್ತು ನೂತನ ಮಂದಿರ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆದಿದೆ. ಇನ್ನು ನಾವು ಆದರ್ಶವನ್ನು ಮೈಮನಗಳಲ್ಲಿ ರೂಢಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಶಿಕ್ಷಕ ಮಂಜುನಾಥ ಪಡದಾಳಿ ರಾಮಮಂದಿರ ಕುರಿತಾಗಿ ಮಾತನಾಡಿದರು. ಶಿಕ್ಷಕಿ ರಂಜಿತಾ ಹೆಗಡೆ ಮತ್ತು ಅನ್ನಪೂರ್ಣ ನಾಗರಾಳ ಸೇರಿ ಭಜನೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಗುರು ಜಿ.ಜೆ.ಪಾದಗಟ್ಟಿ ಶಿಕ್ಷಕರಾದ ಬಿ.ಟಿ.ಭಜಂತ್ರಿ, ಕಿರಣ ಕಡಿ, ಬಿ.ಆರ್.ಬೆಳ್ಳಿಕಟ್ಟಿ, ಆರ್.ಕೆ.ಕುಲಕರ್ಣಿ, ಆರ್.ಎಸ್.ಮಡಿವಾಳರ್, ಸಂದೀಪ, ಬಸವರಾಜ ಸೋನಾರ್, ಸರಸ್ವತಿ ಮಡಿವಾಳರ್, ಮೀನಾಕ್ಷಿ ಸರಗಣಾಚಾರಿ, ಸುಮಾ ಬಳಗಾನೂರ, ಲಕ್ಷ್ಮೀ ಗೌಡರ್, ಭಾಗ್ಯ ಸಿದ್ದಾಪುರ, ಗುರುಬಾಯಿ ತಂಗಡಗಿ, ಇಂದು ನಾಯಕ, ತೇಜಸ್ವಿನಿ ಕಾಟಿ, ಕೀರ್ತಿ ತಳಗೇರಿ, ಪವಿತ್ರಾ ಸಜ್ಜನ, ರೂಪಾ ನಾಟೀಕರ್, ಮಂಜುಳಾ ದಶರಥ, ಶಬಾನ್‌ ನಾಲತವಾಡ, ಸುಖದೇವ ಹಂಜಗಿ, ಸುಮಾ ಚಿತ್ರಗಾರ, ಸುಮಂಗಲಾ ಎಸ್.ಬಿ.ಶಿವಸಿಂಪಿ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!