ಚನ್ನಮ್ಮನ ತತ್ವಾದರ್ಶ ಜೀವನದಲ್ಲಿ ರೂಢಿಸಿಕೊಳ್ಳಿ

KannadaprabhaNewsNetwork |  
Published : Oct 24, 2024, 12:34 AM IST
೨೩ಎಸ್‌ಎನ್‌ಡಿ೧ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಭೌಗೋಳಿಕ ಹಿನ್ನಲೆಯನ್ನು ಪರಿಗಣಿಸಿ ಇಷ್ಟ ಇಂಡಿಯಾ ಕಂಪನಿಯ ತೆರೆದು ಅದರ ಮೂಲಕ ಆಡಳಿತ ನಡೆಸಿದ ಬ್ರಿಟಿಷರ ವಿರುದ್ದ ಬಂಡೆದ್ದು ನಿಂತ ರಾಣಿ ಚನ್ನಮ್ಮಳ ತತ್ವಾದರ್ಶಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಭಾರತದ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ಚಿತ್ತಾಪೂರ ತಾಲೂಕಿನ ಕರದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಪಂಡಿತ ನೆಲ್ಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಭೌಗೋಳಿಕ ಹಿನ್ನಲೆಯನ್ನು ಪರಿಗಣಿಸಿ ಇಷ್ಟ ಇಂಡಿಯಾ ಕಂಪನಿಯ ತೆರೆದು ಅದರ ಮೂಲಕ ಆಡಳಿತ ನಡೆಸಿದ ಬ್ರಿಟಿಷರ ವಿರುದ್ದ ಬಂಡೆದ್ದು ನಿಂತ ರಾಣಿ ಚನ್ನಮ್ಮಳ ತತ್ವಾದರ್ಶಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಭಾರತದ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ಚಿತ್ತಾಪೂರ ತಾಲೂಕಿನ ಕರದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಪಂಡಿತ ನೆಲ್ಲಗಿ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಎಲ್ಲೆಲ್ಲಿ ಹೋರಾಟಗಳು ನಡೆದಿದೆಯೋ ಅಲ್ಲಿ ಸೈನಿಕರು ಸತ್ತಿದ್ದು ಇತಿಹಾಸ. ಆದರೆ ಒಬ್ಬ ಐಎಎಸ್‌ ಅಧಿಕಾರಿ ಸತ್ತಿದ್ದು ಇತಿಹಾಸ ಸೃಷ್ಠಿಸಿದೆ. ಅಂತಹ ಮಹಾನ್ ತಾಯಿ ತ್ಯಾಗ, ಹೋರಾಟ, ತತ್ವಾದರ್ಶ, ಜೀವನ ಚರಿತ್ರೆಯನ್ನು ಇಂದಿನ ಯುವಕರಿಗೆ ತಿಳಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್‌ ಪ್ರದೀಪಕುಮಾರ ಹಿರೇಮಠ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಗ್ರೇಡ್ ೨ ತಹಸೀಲ್ದಾರ್‌ ಇಂದಿರಾಬಾಯಿ ಬಳಗಾನೂರ ವೇದಿಕೆ ಮೇಲಿದ್ದರು. ಅಪರ ಸರ್ಕಾರಿ ವಕೀಲರಾದ ಭೀಮಾಶಂಕರ ನೆಲ್ಲಗಿ, ಪ್ರತಿಭಾ ಚಳ್ಳಗಿ, ಶಿಕ್ಷಕ ಶೇವು ರಾಠೋಡ, ಸಮಾಜದ ಪ್ರ.ಕಾರ್ಯದರ್ಶಿ ಆನಂದ ಶಾಬಾದಿ, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ನಿಂಗನಗೌಡ ಪಾಟೀಲ, ಸಿ.ಎಂ.ದೇವರಡ್ಡಿ ವಿ.ಬಿ.ಕುರುಡೆ, ಡಾ.ಅರವಿಂದ ಮನಗೂಳಿ ಸೇರಿದಂತೆ ಸಮಾಜದ ಹಿರಿಯರು, ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ