ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳಿ: ಸಾಹಿತಿ ವಿದ್ಯಾ ಕಂದ

KannadaprabhaNewsNetwork |  
Published : Dec 19, 2025, 02:30 AM IST
18ಡಿಡಬ್ಲೂಡಿ4ಉಪಾಧ್ಯೆ ನೃತ್ಯ ವಿಹಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ 71ನೇ ಸಂಗೀತ ನೃತ್ಯೋತ್ಸವ. | Kannada Prabha

ಸಾರಾಂಶ

ಸ್ಪರ್ಧೆ ನಿಮಿತ್ತ ಮಾತ್ರ. ಅದರಿಂದ ಮಕ್ಕಳು ಮುಂದೆ ಭವಿಷ್ಯ ರೂಪಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದ ಅವರು, ಮಕ್ಕಳ ಮಾನಸಿಕ ಹಾಗೂ ಭೌದ್ಧಿಕ ಬೆಳವಣಿಗಾಗಿ ಪಠ್ಯ ಚಟುವಟಿಕೆಗಳೊಂದಿಗೆ ಇಂಥಹ ಸೃಜನಾತ್ಮಕ ಕಲಾ ಚಟುವಟಿಕೆಗಳಲ್ಲಿ ಪರಿಪೂರ್ಣವಾಗಿ ಭಾಗವಹಿಸಿದಾಗ ಮಾತ್ರ ಪಠ್ಯೇತರ ವಿಷಯಗಳಲ್ಲಿ ಹೆಚ್ಚು ಯಶ್ಸಸ್ವಿಗಳಿಸಲು ಸಾಧ್ಯ.

ಧಾರವಾಡ:

ಯುವ ಪೀಳಿಗೆಯು ಉತ್ತಮ ನಾಗರಿಕರಾಗಲು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಾಹಿತಿ ವಿದ್ಯಾ ಕಂದ ಹೇಳಿದರು.

ಇಲ್ಲಿಯ ಉಪಾಧ್ಯೆ ನೃತ್ಯ ವಿಹಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ 71ನೇ ಸಂಗೀತ ನೃತ್ಯೋತ್ಸವ, ಪುರಂದರ ವೈಭವ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಭರತ ನಾಟ್ಯ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠವಾಗಿದೆ. ಪ್ರತಿ ಮಗು ಸ್ಪರ್ಧಾತ್ಮಕವಾಗಿ ತಮ್ಮನ್ನು ತಾವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಕಲೆ ಸಹಕಾರಿ ಎಂದರು.

ಸ್ಪರ್ಧೆ ನಿಮಿತ್ತ ಮಾತ್ರ. ಅದರಿಂದ ಮಕ್ಕಳು ಮುಂದೆ ಭವಿಷ್ಯ ರೂಪಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದ ಅವರು, ಮಕ್ಕಳ ಮಾನಸಿಕ ಹಾಗೂ ಭೌದ್ಧಿಕ ಬೆಳವಣಿಗಾಗಿ ಪಠ್ಯ ಚಟುವಟಿಕೆಗಳೊಂದಿಗೆ ಇಂಥಹ ಸೃಜನಾತ್ಮಕ ಕಲಾ ಚಟುವಟಿಕೆಗಳಲ್ಲಿ ಪರಿಪೂರ್ಣವಾಗಿ ಭಾಗವಹಿಸಿದಾಗ ಮಾತ್ರ ಪಠ್ಯೇತರ ವಿಷಯಗಳಲ್ಲಿ ಹೆಚ್ಚು ಯಶ್ಸಸ್ವಿಗಳಿಸಲು ಸಾಧ್ಯ ಎಂದು ಹೇಳಿದರು.

ಹಿರಿಯ ವೈದ್ಯರಾದ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿ, ಉಪಾಧ್ಯೆ ನೃತ್ಯ ಸಂಸ್ಥೆ ನಿರಂತರ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿ ಮಕ್ಕಳಿಗೆ ಸ್ಫೂರ್ತಿ ನೀಡುವ ವಿವಿಧ ಕಲಾಪ್ರಕಾರಗಳನ್ನು ಏರ್ಪಡಿಸುತ್ತಿದೆ ಎಂದರು.

ಸಂಜಯಕುಮಾರ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಸುಜಾತಾ ಕಡಕೋಳ ನಿರೂಪಿಸಿದರು. ಉಪಾಧ್ಯಾಯ ನೃತ್ಯವಿಹಾರದ ಅಧ್ಯಕ್ಷ ನಟರಾಜ ಉಪಾಧ್ಯಾಯ, ನೃತ್ಯ ನಿರ್ದೇಶಕಿ ಪ್ರಮೋದಾ ಉಪಾಧ್ಯಾಯ, ಡಾ. ನವಮಿ ಮಹಾವೀರ, ಶಂಕರ ಕಬಾಡಿ, ಸಂತೋಷ ಮಹಾಲೆ ಇದ್ದರು. ನಂತರ ನೃತ್ಯ ಸಂಸ್ಥೆಯ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಂಗೀತ ಹಾಗೂ ಪುರಂದರ ದಾಸರ ಹಾಡುಗಳಿಗೆ ಪುರಂದರ ವೈಭವ ಭರತನಾಟ್ಯ ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು