ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ
ಪ್ರತಿಯೊಬ್ಬರು ಕಾನೂನಿನ ಜ್ಞಾನ ಪಡೆದುಕೊಂಡು ಸಮಾಜದ ನೆರೆಹೊರೆಯವರ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೂ ಸಹಬಾಳ್ವೆ ನಡೆಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.
ಪಟ್ಟಣದ ವಕೀಲರ ಸಂಘದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ರಾಷ್ಟ್ರೀಯ ಕಾನೂನು ದಿನಾಚರಣೆ ನಿಮಿತ್ತ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾನೂನಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನವು ಪ್ರತಿಯೊಬ್ಬರಿಗೊ ವಿಶೇಷವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡುವ ದಿನವಾಗಿದೆ ಎಂದರು.ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ, ಬಡವರು, ದಿನ ದಲಿತರು ಕಾನೂನು ತಿಳುವಳಿಕೆಯಿಂದ ವಂಚಿತರಾಗಬಾರೆಂಬ ಉದ್ದೇಶದಿಂದ ೧೯೮೭ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಸಮಿತಿ ಪ್ರಾರಂಭಿಸಿ ೧೯೯೫ರಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಪ್ರಾಧಿಕಾರದ ಮುಖಾಂತರ ಬಡವರು, ದುರ್ಬಲರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಕಾರ್ಯವನ್ನು ಪ್ರಾಧಿಕಾರ ಮಾಡುತ್ತಿದೆ. ಲೋಕ ಅದಾಲತ್ ಮುಖಾಂತರ ರಾಜಿ ಸಂಧಾನ ಮಾಡಿ ಶೀಘ್ರದಲ್ಲಿ ನ್ಯಾಯದಾನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ವಕೀಲರು, ಕಕ್ಷಿದಾರರು ಸಹಕರಿಸಿ ಎಂದು ಹೇಳಿದರು.
ಸರ್ಕಾರಿ ಅಭಿಯೋಜಕ ರವಿ ಹುಣಿಸಿಮರದ ಹಾಗೂ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ವಕೀಲರಾದ ಬಿ.ಎಂ. ಶಿರೂರ, ಮಹಾಂತೇಶ ಬೂದಗುಂಪಿ ಮಾತನಾಡಿದರು.