ಓಬವ್ವನ ಶೌರ್ಯ ಮಹಿಳೆಯರಿಗೆ ಸ್ಪೂರ್ತಿ: ಬಸವರಾಜ ತೆನ್ನಳ್ಳಿ

KannadaprabhaNewsNetwork |  
Published : Nov 11, 2024, 11:47 PM IST
೧೧ವೈಎಲ್‌ಬಿ೧:ಯಲಬುರ್ಗಾದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ತಾಲೂಕಾಡಳಿತ ಹಾಗೂ ತಾಲೂಕಾ ಛಲವಾದಿ ಮಹಾಸಭಾ ಘಟಕದ ವತಿಯಿಂದ ನಡೆದ ಓಬವ್ವ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಹೈದರಾಲಿ ಸೈನ್ಯಕ್ಕೆ ತನ್ನ ಒನಕೆ ಮೂಲಕ ತಕ್ಕ ಉತ್ತರ ನೀಡಿ ಚಿತ್ರದುರ್ಗ ಕೋಟೆ ರಕ್ಷಣೆ ಮಾಡಿದ ಕೀರ್ತಿ ವೀರ ವನತೆ ಓಬವ್ವಳಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಹೈದರಾಲಿ ಸೈನ್ಯಕ್ಕೆ ತನ್ನ ಒನಕೆ ಮೂಲಕ ತಕ್ಕ ಉತ್ತರ ನೀಡಿ ಚಿತ್ರದುರ್ಗ ಕೋಟೆ ರಕ್ಷಣೆ ಮಾಡಿದ ಕೀರ್ತಿ ವೀರ ವನತೆ ಓಬವ್ವಳಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ತಾಲೂಕಾಡಳಿತ ಹಾಗೂ ತಾಲೂಕಾ ಛಲವಾದಿ ಮಹಾಸಭಾ ಘಟಕದ ವತಿಯಿಂದ ನಡೆದ ವೀರ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿರು. ವೀರ ಮಾತೆ ಒನಕೆ ಓಬವ್ವನ ದಿಟ್ಟವಾದ ಹೋರಾಟ, ಸಾಹಸ ಇತಿಹಾಸ ಪುಟದಲ್ಲಿ ಅಜರಾಮರವಾಗಿದೆ ಎಂದರು.

ಉಪನ್ಯಾಸಕ ಶಿವನಗೌಡ ಪೋಲಿಸ್ ಪಾಟೀಲ ಉಪನ್ಯಾಸ ನೀಡಿ, ವೀರ ಮಾತೆ ಒನಕೆ ಓಬವ್ವ ಅವರ ದಿಟ್ಟತನ, ಶೌರ್ಯ, ಸಾಹಸವನ್ನು ನಾಡಿನ ಪ್ರತಿಯೊಬ್ಬ ಮಹಿಳೆಯರು ಮೈಗೂಡಿಸಿಕೊಳ್ಳಬೇಕು. ಇಂತಹ ದಿಟ್ಟ ಆದರ್ಶ ಮಹಿಳೆಯರ ಜೀವನದ ಚರಿತ್ರೆಯನ್ನು ತಿಳಿದುಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಎಲ್ಲ ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ನಾಡಿನ ಒಳಿತಿಗಾಗಿ ಓಬವ್ವ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ್ದಾರೆ. ಇಂತವರ ಚರಿತ್ರೆಯ ಅಧ್ಯಯನವನ್ನು ಸಮಾಜದ ಪ್ರತಿಯೊಬ್ಬರು ಮಾಡಬೇಕು ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಶಂಕರ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ವೀರ ಒನಕೆ ಓಬವ್ವ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ತಹಸೀಲ್ದಾರ ಹಾಗೂ ಗಣ್ಯರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ಅಧಿಕಾರಿಗಳಾದ ಸೋಮಶೇಖರಗೌಡ ಪಾಟೀಲ, ಮಲ್ಲಿಕಾರ್ಜುನ, ಶಿವಶಂಕರ ಕರಡಕಲ್, ಶಶಿಧರ ಸಕ್ರಿ, ಶ್ರೀಧರ ತಳವಾರ, ನಿಂಗನಗೌಡ ಪಾಟೀಲ, ಸಂಜಯ ಚಿತ್ರಗಾರ, ಬಸವರಾಜ ಗೋಗೇರಿ, ಪಿಎಸ್‌ಐ ವಿಜಯಪ್ರತಾಪ, ಹನುಮಂತಗೌಡ ಪಾಟೀಲ, ಯಂಕಣ್ಣ ಜೋಷಿ, ಛಲವಾದಿ ಮಹಾಸಭಾದ ಅಧ್ಯಕ್ಷ ಅಂದಪ್ಪ ಹಾಲಕೇರಿ, ಸಿದ್ದಪ್ಪ ಕಟ್ಟಿಮನಿ, ಶಂಕರ ಜಕ್ಕಲಿ, ಈರಮ್ಮ ಛಲವಾದಿ, ಎಫ್. ನದಾಫ್, ಶಶಿಧರ ಹೊಸ್ಮನಿ, ಛತ್ರೆಪ್ಪ ಮುಧೋಳ, ಗಣೇಶಪ್ಪ ಕುಡಗುಂಟಿ, ಬಸಪ್ಪ ಬಿನ್ನಾಳ, ವಿಜಯ ಜಕ್ಕಲಿ, ಮಹಾಂತೇಶ, ಬಾಲರಾಜ ಮಂಗಳೂರ, ಕನಕೇಶ ಪೆಂಟರ್, ದೇವಪ್ಪ, ಗೂಳಪ್ಪ, ಛತ್ರೆಪ್ಪ ಬಾಂಡೆ, ಪ್ರಕಾಶ ಚಲವಾದಿ, ಮಂಜುಳಾ ಹಾಳಕೇರಿ, ಯಮನವ್ವ ಛಲವಾದಿ, ಸಾವಿತ್ರಿ, ಸರಸ್ವತಿ ಜಕ್ಕಲಿ, ಶರಣಮ್ಮ, ನೇತ್ರಾ, ಮಂಜುಳಾ, ಸರೋಜಾ, ಹನುಮವ್ವ ಸೇರಿದಂತೆ ಮತ್ತಿತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌