ಹಕ್ಕುಗಳಿಗಾಗಿ ಮಹಿಳೆಯರ ಸಂಘಟಿತ ಹೋರಾಟಕ್ಕೆ ಸಿದ್ಧರಾಗಿ: ಶ್ರೀದೇವಿ

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ಸಿಂಧನೂರಿನಲ್ಲಿ ರಾಜ್ಯ ಮಟ್ಟದ ಮಹಿಳಾ ವಿಚಾರ ಸಂಕಿರಣ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಯಕ ಮಾತನಾಡಿದರು

ಕನ್ನಡಪ್ರಭ ವಾರ್ತೆ ಸಿಂಧನೂರು

ಹಕ್ಕುಗಳಿಗಾಗಿ ಮಹಿಳೆಯರು ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಯಕ ಕರೆ ನೀಡಿದರು.

ನಗರದ ಟೌನ್‌ಹಾಲ್‌ನಲ್ಲಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಹಿಳಾ ವಿಚಾರ ಸಂಕಿರಣ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಸಂವಿಧಾನದ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ನಾಲ್ಕ ಗೋಡೆಗಳಿಗೆ ಸೀಮಿತವಾಗಬಾರದು. ಪುರಷರಷ್ಟೇ ಸಮಾನವೆಂಬದನ್ನು ಸಾಧನೆ ಮಾಡಿ ತೋರಿಸಬೇಕು. ಮಹಿಳಾ ಮೀಸಲಾತಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಛಲವಾದಿ ಮಹಾಸಭಾ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಈರಮ್ಮ ಕುಷ್ಟಗಿ ಮಹಿಳಾ ದಿನಾಚರಣೆ ಇತಿಹಾಸ ಮತ್ತು ಮಹತ್ವ ಕುರಿತು ಮಾತನಾಡಿದರು. ದಲಿತ ಮುಖಂಡರಾದ ಎಚ್.ಎನ್.ಬಡಿಗೇರ್, ಆರ್.ಬೋನ್ವೆಂಚರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವಿಜಯರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೋರಾಟಗಾರ ಕರಿಯಪ್ಪ ತೋರಣದಿನ್ನಿ, ಕೆ.ಮರಿಯಪ್ಪ, ಮಸ್ಕಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಜ್ಯೋತಿ ಕೊಪ್ಪಳ, ಪತ್ರಕರ್ತ ಡಿ.ಎಚ್.ಕಂಬಳಿ, ಲೋಯಲಾ ಸಂಸ್ಥೆಯ ಅಧ್ಯಕ್ಷೆ ಅಂಚಲಾ, ಆರ್ಸಿಎಫ್ ರಾಜ್ಯ ಘಟಕದ ಸಂಯೋಜಕ ಎಂ.ಗಂಗಾಧರ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಸೇನಪ್ಪ ಅಮರಾಪುರ, ರಾಯಪ್ಪ ಬೂದಿವಾಳ, ಶಿವಮ್ಮ ವೀರಾಪುರ, ಹನುಮಂತಪ್ಪ ಹಂಪನಾಳ, ಕಮಲಾಕ್ಷಿ ಲಿಂಗಸುಗೂರು, ಹನುಮಂತ ಮನ್ನಾಪುರಿ, ಕಮಲಮ್ಮ ಎಂಎಂಎಸ್, ಬಾಲಸ್ವಾಮಿ ಜಿನ್ನಾಪುರ, ಭೀಮೇಶ ಕವಿತಾಳ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಅಮರೇಶ ವೆಂಕಟಾಪೂರ ನಿರೂಪಿಸಿದರು. ಮೌನೇಶ ಜಾಲವಾಡಿಗಿ ವಂದಿಸಿದರು.

Share this article