ಕಾಲ ಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ

KannadaprabhaNewsNetwork |  
Published : Jun 04, 2025, 01:14 AM IST
ಎಚ್‌03.6-ಡಿಎನ್‌ಡಿ3: ಕಾಗದ ಕಾರ್ಖಾನೆಯ ಆಸ್ಪತ್ರೆಯಲ್ಲಿ  ಉಚಿತ ಮೋಳೆ ಸಾಂದ್ರತೆ ಪರೀಕ್ಷಾ ಶಿಬಿರ ಉದ್ಘಾಟನೆಗೊಂಡು ಪರೀಕ್ಷೆ ಮಾಡುತ್ತಿರುವ ಚಿತ್ರ | Kannada Prabha

ಸಾರಾಂಶ

ವಯಸ್ಸು ಹೆಚ್ಚಿದಂತೆಲ್ಲ ದೇಹದ ಅಂಗಾಂಗಗಳ ಶಕ್ತಿ ಕಳೆದುಕೊಳ್ಳುತ್ತವೆ. ಇವುಗಳನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು

ದಾಂಡೇಲಿ: ವಯಸ್ಸು ಹೆಚ್ಚಿದಂತೆಲ್ಲ ದೇಹದ ಅಂಗಾಂಗಗಳ ಶಕ್ತಿ ಕಳೆದುಕೊಳ್ಳುತ್ತವೆ. ಇವುಗಳನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಂದ್ರ ಜೈನ್ ಹೇಳಿದರು.

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಹುಬ್ಬಳ್ಳಿಯ ಇಶಾ ಹೆಲ್ತ್‌ ಕೇರ್ ಸಹಯೋಗದೊಂದಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಈ ಭಾಗದ ಜನತೆಗೆ ಅನುಕೂಲವಾಗಲೆಂದು ಈ ಶಿಬಿರ ಆಯೋಜಿಸಲಾಗಿದ್ದು, ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.

ಕಾಗದ ಕಾರ್ಖಾನೆಯ ಆಸ್ಪತ್ರೆಯ ವೈದ್ಯಾಧಿಕಾರಿ ಜ್ಞಾನದೀಪ ಗಾಂವ್ಕರ್ ಮಾತನಾಡಿ, ಆಸ್ಟಿಯೊಪೊರೊಸಿಸ್‌ ಅಂದರೆ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಿ ಮೂಳೆ ಮುರಿತಕ್ಕೆ ಕಾರಣವಾಗುವ ಒಂದು ಸದ್ದಿಲ್ಲದ ಸ್ಥಿತಿ. ದೇಹವು ಹೊಸ ಮೂಳೆಗಳ ರಚನೆ ರೂಪಿಸಲು ವಿಫಲವಾದರೆ ಅಥವಾ ಹಳೆಯ ಮೂಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಶವಾದರೆ ಈ ರೊಗವು ಸಂಭವಿಸುತ್ತದೆ. ದೇಹದ ಮೇಲೆ ಯಾವುದೇ ಗಾಯವಿಲ್ಲದೇ ಅತ್ಯಂತ ಸುಲಭದಲ್ಲಿ ಕಂಡು ಹಿಡಿಯುವ ವಿಧಾನವೇ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷೆಯಾಗಿದೆ ಎಂದರು.

ಕಾಗದ ಕಾರ್ಖಾನೆಯ ಸಾರ್ವಜನಿಕ ರಾಘವೇಂದ್ರ ಜೆ.ಆರ್. ಮತ್ತು ರಾಜೇಶ ತಿವಾರಿ ಶಿಬಿರದ ಉದ್ದೇಶ ವಿವರಿಸಿ, ಜನರಿಗೆ ಅತಿ ಅವಶ್ಯವಾಗಿ ಬೇಕಾಗಿರುವ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಿಕೊಂಡ ಬರುತ್ತಿದೆ ಎಂದರು. 345 ಜನರು ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭದಲ್ಲಿ ತಾಂತ್ರಿಕ ವಿಭಾಗದ ಅಧ್ಯಕ್ಷ ಅನೂಜ್ ತಾಯಾಲ್, ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷ ಅಶೋಕ್ ಶರ್ಮ, ಮಾನವ ಸಂಪನ್ಮೂಲ ವಿಭಾಗದ‌ ಉಪ ಪ್ರಧಾನ ವ್ಯವಸ್ಥಾಪಕ ವಿಜಯ ಮಹಾಂತೇಶ, ಡಾ.ಜಿ.ಡಿ. ಭಂಡಾರಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮೋಹನ ಹಲವಾಯಿ, ನಗರಸಭಾ ಸದಸ್ಯ ಅನಿಲ ನಾಯ್ಕರ, ಇಶಾ ಹೆಲ್ತ್‌ ಕೇರ್ ತಜ್ಞ ವೈದ್ಯರಾದ ಸುಮೀತ ಅಗ್ನಿಹೋತ್ರಿ ಪ್ರಿಯಾಂಕಾ,‌ ನಿತೇಶ್, ಸಾರ್ವಜನಿಕ ಸಂಪರ್ಕ ವಿಭಾಗದ ಖಲೀಲ ಕುಲಕರ್ಣಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ