ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಸಭಾಂಗಣದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಹಾಗೂ ವಸತಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಬೀಡಿ ಕಾಲೋನಿಯಲ್ಲಿ ನಿರ್ಮಾಣವಾಗಿರುವ ವಸತಿಗಳನ್ನು ವಸತಿ ರಹಿತರಿಗೆ ವಿತರಣೆ ಮಾಡುವ ಸದುದ್ದೇಶದಿಂದ ನ್ಯಾಯಾಲಯದಲ್ಲಿ ಅಫಿಡೇವಿಟ್ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಿ ಅನುಮತಿ ಪಡೆಯಲಾಯಿತು ಎಂದಿದ್ದಾರೆ.
ಹಾಲಹಳ್ಳಿ ಸ್ಲಂನಲ್ಲಿ ನೂತನವಾಗಿ ೮೦ ಮನೆ ನಿರ್ಮಾಣ ಮಾಡಲು ೨.೫ ಕೋಟಿ ಹಣವನ್ನು ಬಿಡುಗಡೆ ಮಾಡಿಸುವ ಮೂಲಕ ಇನ್ನುಳಿದ ಎರಡೂವರೆ ಎಕರೆ ಜಾಗದಲ್ಲಿ ನೂತನವಾಗಿ ೫೦೦ ಮನೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ಪಡೆಯಲಾಗಿದೆ ಎಂದರು.ಕಳೆದ ೭೫ ವರ್ಷಗಳಿಂದ ಹಕ್ಕು ಪತ್ರ ವಂಚಿತರಾಗಿರುವ ಆರ್‌ಟಿಓ ಸ್ಲಂ ಹಾಗೂ ಹಾಲಹಳ್ಳಿ ಮುಸ್ಲಿಂ ಬ್ಲಾಕ್ ನಿವಾಸಿಗಳಿಗೆ ಕೂಡಲೇ ಹಕ್ಕುಪತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದರು ಎಂದರು.
ಕೆ.ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಅಮಾನತು
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಕೆ.ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೧೮.೮೯ ಲಕ್ಷ ರು. ಹಣ ದುರುಪಯೋಗ ಆರೋಪದ ಮೇರೆಗೆ ಸಂಘದ ಸಿಇಒ ಕೆ.ರವಿ ಅವರನ್ನು ಆಡಳಿತಾಧಿಕಾರಿ ಸಿ.ಎ.ಸುಧಾಕರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಕೆ.ಹೆಚ್.ಹರ್ಷವರ್ಧನ್ ಅವರಿಗೆ ಸಂಘದ ಹುದ್ದೆಯ ಪ್ರಭಾರ ವಹಗಿಸಿಕೊಡುವಂತೆ ಸೂಚಿಸಲಾಗಿದೆ. ೨೦೨೧-೨೨, ೨೦೨೨-೨೩ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಿರುವ ದುರುಪಯೋಗದ ೧೮.೮೯ ಲಕ್ಷ ರು.ಗಳನ್ನು ಪಾವತಿಸಲು ವಿಫಲರಾಗಿದ್ದು, ನಿಯಮಾನುಸಾರ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಆಂತರಿಕ ವಿಚಾರಣೆಗೊಳಪಡಿಸಿ ಅಮಾನತುಗೊಳಿಸಲಾಗಿದೆ.