2.5 ಕೆ.ಜಿ ತೂಕದ ದೈತ್ಯ ಫೈಬ್ರಾಯ್ಡ್‌ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : Jul 26, 2026, 03:15 AM IST
ಜಮಖಂಡಿ ನಗರದ ಸಿದ್ದಿವಿನಾಯಕ ಆಸ್ಪತ್ರೆಯ ವೈದ್ಯರು ಮಹಿಳೆ ಯೊಬ್ಬರ ಗರ್ಭದಲ್ಲಿದ್ದ 2.5 ಕೆಜಿ ತೂಕದ ಫೈಬ್ರಾಯ್ಡ್‌ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗಿದು ಸಾಧನೆ ಮಾಡಿದ್ದಾರೆ,  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ ಸುಮಾರು 2.5 ಕೆಜಿ ತೂಕದ ದೈತ್ಯ ಫೈಬ್ರಾಯ್ಡ್‌ (ಗಡ್ಡೆ)ಯನ್ನು ನಗರದ ಸಿದ್ದಿವಿನಾಯಕ ಆಸ್ಪತ್ರೆ (ಮೇತ್ರಿ ಆಸ್ಪತ್ರೆ)ಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ತೆರವುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ ಸುಮಾರು 2.5 ಕೆಜಿ ತೂಕದ ದೈತ್ಯ ಫೈಬ್ರಾಯ್ಡ್‌ (ಗಡ್ಡೆ)ಯನ್ನು ನಗರದ ಸಿದ್ದಿವಿನಾಯಕ ಆಸ್ಪತ್ರೆ (ಮೇತ್ರಿ ಆಸ್ಪತ್ರೆ)ಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ತೆರವುಗೊಳಿಸಿದ್ದಾರೆ.

ಗರ್ಭಾಶಯದ ಫೈಬ್ರಾಯ್ಡ್‌ಗಳ ಗಾತ್ರ ಅತಿದೊಡ್ಡದಾಗಿದ್ದರಿಂದ ಶಸ್ತ್ರಚಿಕಿತ್ಸೆ ವೈದ್ಯಕೀಯವಾಗಿ ಅತ್ಯಂತ ಸವಾಲಿನದ್ದಾಗಿತ್ತು. ಆದರೆ, ಡಾ.ಪ್ರೇಮಾ ತುಂಗಳ ಅವರ ನೇತೃತ್ವದಲ್ಲಿ ಡಾ.ವಿಜಯ ಮೇತ್ರಿ ಹಾಗೂ ವೈದ್ಯಕೀಯ ತಂಡದ ಸಮನ್ವಯದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿತು.

ರೋಗಿಯ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯ ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಹಾಗೂ ಶಸ್ತ್ರಚಿಕಿತ್ಸಾ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಬಳಿಕ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. ಶಸ್ತ್ರಚಿಕಿತ್ಸೆಯ ವೇಳೆ ಸುಮಾರು 2.5 ಕೆ.ಜಿ. ತೂಕದ ಫೈಬ್ರಾಯ್ಡ್‌ ಅನ್ನು ಯಾವುದೇ ಪ್ರಮುಖ ತೊಂದರೆಗಳಿಲ್ಲದೆ ಸುರಕ್ಷಿತವಾಗಿ ಹೊರತೆಗೆದು, ರೋಗಿಯ ಜೀವಕ್ಕೆ ಅಪಾಯವಾಗದಂತೆ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿದರು.

ಗರ್ಭಾಶಯದ ಫೈಬ್ರಾಯ್ಡ್‌ಗಳು ಸಾಮಾನ್ಯವಾಗಿ ಕ್ಯಾನ್ಸರ್ ಅಲ್ಲದ ಗಡ್ಡೆಗಳಾಗಿದ್ದು, ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದಿರಬಹುದು. ಆದರೆ ಅವು ದೊಡ್ಡ ಗಾತ್ರಕ್ಕೆ ಬೆಳೆಯುತ್ತಿದ್ದಂತೆ ತೀವ್ರ ಶ್ರೋಣಿಯ ನೋವು, ಮುಟ್ಟಿನ ವೇಳೆ ಅಧಿಕ ರಕ್ತಸ್ರಾವ, ಹೊಟ್ಟೆ ಗರ್ಭಿಣಿಯಂತೆಯೇ ಉಬ್ಬಿಕೊಳ್ಳುವುದು, ಮೂತ್ರ ವಿಸರ್ಜನೆಗೆ ತೊಂದರೆ, ದೌರ್ಬಲ್ಯ ಸೇರಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವೈದ್ಯಕೀಯವಾಗಿ 10 ಸೆಂ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರದ ಫೈಬ್ರಾಯ್ಡ್‌ಗಳನ್ನು ದೈತ್ಯ ಫೈಬ್ರಾಯ್ಡ್‌ಗಳು ಎಂದು ಕರೆಯಲಾಗುತ್ತದೆ. ಸದ್ಯ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಅವರು ವೈದ್ಯರ ನಿಗಾದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಸಿದ್ಧಿ ವಿನಾಯಕ ಆಸ್ಪತ್ರೆಯಲ್ಲಿರುವ ಆಧುನಿಕ ವೈದ್ಯಕೀಯ ಸೌಲಭ್ಯ, ತಜ್ಞ ವೈದ್ಯರ ಅನುಭವ ಹಾಗೂ ಡಾ.ಪ್ರೇಮಾ ತುಂಗಳ ಅವರ ನೇತೃತ್ವದ ತಂಡದ ಕಾರ್ಯಕ್ಷಮತೆಗೆ ಮತ್ತೊಂದು ಸಾಕ್ಷಿಯಾಗಿದೆ. ಇಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಆಸ್ಪತ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವುದಾಗಿ ಆಸ್ಪತ್ರೆ ಆಡಳಿತ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್‌ಸಿಸಿ ಕೆಡೆಟ್‌ಗಳಿಗೆ ತಿಂಗಳ ಕಾಲ ನಗರದಲ್ಲಿ ತರಬೇತಿ
ರಸ್ತೆ, ಸೇತುವೆಗಳ ದುರಸ್ತಿಗೆ ₹131 ಕೋಟಿ ಅನುದಾನ