ವಿವಾಹ ಆಮಂತ್ರಣ ಜೊತೆ ಸಿಯಾರಾಮ್ ವಿಗ್ರಹ ಕಾಣಿಕೆ

KannadaprabhaNewsNetwork |  
Published : Feb 17, 2024, 01:18 AM IST
ಬನಹಟ್ಟಿ : ವಿವಾಹ ಆಮಂತ್ರಣ ಜೊತೆ ಸಿಯಾರಾಮ್ ವಿಗ್ರಹ ಕಾಣಿಕೆ.  | Kannada Prabha

ಸಾರಾಂಶ

ರಬಕವಿ-ಬನಹಟ್ಟಿ: ಮದುವೆ ಸಮಾರಂಭಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸವಿನೆನಪಿಗಾಗಿ ೨ ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪಂಚಲೋಹದ ರಾಮ, ಲಕ್ಷ್ಮಣ ಸೀತೆ ಹಾಗೂ ಹನುಮಂತನ ಮೂರ್ತಿ ನೀಡಿ ಮದುವೆಗೆ ಆಮಂತ್ರಣ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮದುವೆ ಸಮಾರಂಭಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸವಿನೆನಪಿಗಾಗಿ ೨ ಸಾವಿರಕ್ಕೂ ಅಧಿಕ ಆಮಂತ್ರಣ ಪತ್ರಿಕೆ ಜೊತೆಗೆ ಪಂಚಲೋಹದ ರಾಮ, ಲಕ್ಷ್ಮಣ ಸೀತೆ ಹಾಗೂ ಹನುಮಂತನ ಮೂರ್ತಿ ನೀಡಿ ಮದುವೆಗೆ ಆಮಂತ್ರಣ ನೀಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಆರ್‌ಎಸ್‌ಎಸ್ ಮುಖಂಡ ಸೋಮನಾಥ ಗೊಂಬಿ ಪುತ್ರಿ ಲಕ್ಷ್ಮೀ ಜೊತೆಗೆ ಯೋಧ ರಬಕವಿಯ ಕಿರಣ ಮಹಾಲಿಂಗಪ್ಪ ಕಳ್ಳಿಗುದ್ದಿ ವಿವಾಹ ಫೆ.19ರಂದು ನಿಶ್ಚಯವಾಗಿದೆ. ಮನೆ ಮನೆಗೆ ಮದುವೆಯ ಆಮಂತ್ರಣ ಜೊತೆ ೨೫೦ ಗ್ರಾಂ ತೂಕದ ಪಂಚಲೋಹದ `ಸಿಯಾ ರಾಮ್’ ಮೂರ್ತಿಯನ್ನು ನೀಡುವ ಮೂಲಕ ಮದುವೆ ಕಾರ್ಯಕ್ರಮ ಸ್ಮರಣೀಯವಾಗಿಸಲು ಹೊರಟಿದ್ದಾರೆ.

ಹಿಂದು ಧರ್ಮದ ಸಂಕೇತವಾಗಿರುವ `ಸಿಯಾ ರಾಮ್’ ಮೂರ್ತಿ ಎಲ್ಲರ ಮನೆಗಳಲ್ಲಿರಬೇಕು. ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣವಾಗಿದ್ದು, ಈ ಸುವರ್ಣ ಸಂದರ್ಭದಲ್ಲಿ ನಮ್ಮ ಪುತ್ರಿ ವಿವಾಹದ ಸವಿನೆನಪಿಗಾಗಿ ಸುಮಾರು ₹ ೧೫೦೦ ಮೌಲ್ಯದ ಮೂರ್ತಿ ನೀಡುತ್ತಿದ್ದೇನೆ. ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ನಿಷ್ಠ ಹಿರಿಯರಾದ ಸೋಮನಾಥ ಹೇಳಿದ್ದಾರೆ.

------

ಹಿಂದುಗಳ ಶತಮಾನಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಸಂಕೇತವಾಗಿ ಮಗಳ ಮದುವೆ ಆಮಂತ್ರಣದೊಂದಿಗೆ ಮೂರ್ತಿ ವಿತರಿಸಿ ವಿವಾಹ ಸಂಭ್ರಮ ಸ್ಮರಣೀಯವಾಗಿಸಬೇಕೆಂಬುದು ನನ್ನ ಬಯಕೆ.

-ಸೋಮನಾಥ ಗೊಂಬಿ, ಬನಹಟ್ಟಿಯ ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ಮತ್ತು ಅಧ್ಯಕ್ಷರು, ಬಾಗಲಕೋಟೆ ಜಿಲ್ಲಾ ಹಟಗಾರ ಸಮಾಜ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''