ಗಿಲ್ಲಿಗೆ ಬಿಗ್‌ಬಾಸ್ ಕಿರೀಟ: ಹರಿಹರದಲ್ಲಿ ಸಂಭ್ರಮ

KannadaprabhaNewsNetwork |  
Published : Jan 20, 2026, 02:00 AM IST
19 HRR. 02ಹರಿಹರದ ಹರಪನಹಳ್ಳಿ ವೃತ್ತದಲ್ಲಿ ಬಿಗ್‌ಬಾಸ್–12ರಲ್ಲಿ  ಗಿಲ್ಲಿ ವಿಜೇತರಾದ ಹಿನ್ನೆಲೆಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು. | Kannada Prabha

ಸಾರಾಂಶ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡು ಅಂತ್ಯಗೊಂಡ ಬಿಗ್‌ಬಾಸ್ ಸೀಸನ್–12 ಕಾರ್ಯಕ್ರಮದಲ್ಲಿ ವಿಜೇತರಾಗಿ ಹೊರಹೊಮ್ಮಿದ ರಾಜ್ಯದ ಹೆಮ್ಮೆಯ ಪ್ರತಿಭೆ ಗಿಲ್ಲಿ ಅವರ ಗೆಲುವನ್ನು ಅಭಿಮಾನಿಗಳು ಸೋಮವಾರ ನಗರದ ಹರಪನಹಳ್ಳಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ.

- ಹರಪನಹಳ್ಳಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದ ಅಭಿಮಾನಿಗಳು

- - -

ಕನ್ನಡಪ್ರಭ ವಾರ್ತೆ ಹರಿಹರ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡು ಅಂತ್ಯಗೊಂಡ ಬಿಗ್‌ಬಾಸ್ ಸೀಸನ್–12 ಕಾರ್ಯಕ್ರಮದಲ್ಲಿ ವಿಜೇತರಾಗಿ ಹೊರಹೊಮ್ಮಿದ ರಾಜ್ಯದ ಹೆಮ್ಮೆಯ ಪ್ರತಿಭೆ ಗಿಲ್ಲಿ ಅವರ ಗೆಲುವನ್ನು ಅಭಿಮಾನಿಗಳು ಸೋಮವಾರ ನಗರದ ಹರಪನಹಳ್ಳಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭ ಅಭಿಮಾನಿ ಅಣ್ಣಪ್ಪ ಅಯ್ಯರ್ ಮಾತನಾಡಿ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ಕುಟುಂಬದಲ್ಲಿ ಜನಿಸಿದ ಗಿಲ್ಲಿ, ಅನ್ನದಾತರ ಪುತ್ರನಾಗಿ ಬೆಳೆದವರು. ಅವರಲ್ಲಿರುವ ಅಪಾರ ಕಲಾ ಸಾಮರ್ಥ್ಯ ಮತ್ತು ಸಾಹಿತ್ಯ ಪ್ರೀತಿಯನ್ನು ಜನತೆಗೆ ಪರಿಚಯಿಸಲು ಅವಕಾಶ ಕಲ್ಪಿಸಿದ ಝೀ ಕನ್ನಡ ಹಾಗೂ ಕಲರ್ಸ್ ಕನ್ನಡ ವಾಹಿನಿಗಳಿಗೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.

ಕಳೆದ ಹತ್ತು ದಿನಗಳಿಂದ ಗಿಲ್ಲಿ ಗೆಲುವಿಗಾಗಿ ದಾವಣಗೆರೆ, ಹಾವೇರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮತಯಾಚನೆ ನಡೆಸಿದ್ದೇವೆ. ಮತ ನೀಡಿ ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಮತ್ತೊಬ್ಬ ಅಭಿಮಾನಿ ಸಿದ್ದಮ್ಮ ಮಾತನಾಡಿ, ಕಡಿಮೆ ಸಂಪನ್ಮೂಲಗಳ ನಡುವೆಯೂ ಹಠದಿಂದ ಬೆಳೆದು ಬಂದ ಗಿಲ್ಲಿಗೆ ತಮ್ಮಲ್ಲಿರುವ ಅಪಾರ ಪ್ರತಿಭೆ ಮತ್ತು ಸಾಹಿತ್ಯವನ್ನು ಹೊರಹಾಕಲು ಝೀ ಕನ್ನಡ ಹಾಗೂ ಕಲರ್ಸ್ ಕನ್ನಡ ಚಾನಲ್‌ಗಳು ಉತ್ತಮ ವೇದಿಕೆ ನೀಡಿದ್ದಕ್ಕೆ ಕೃತಜ್ಞತೆ ತಿಳಿಸುತ್ತೇವೆ ಎಂದರು.

ಸಂಭ್ರಮಾಚರಣೆಯಲ್ಲಿ ವಿದ್ಯಾ ಪಿ.ಎಂ., ಲಕ್ಷ್ಮೀ ಎನ್., ರೂಪಾ, ಪ್ರೇಮಾ, ರೂಪಾ ಗುಜ್ಜೇರ್, ಎಸ್.ಎಂ. ಜಾಕೀರ್, ಸುರೇಶ್, ಹರಿಹರದ ಅನೇಕ ಗಿಲ್ಲಿ ಅಭಿಮಾನಿಗಳು ಉಪಸ್ಥಿತರಿದ್ದರು.

- - -

-19HRR.02:

ಬಿಗ್‌ ಬಾಸ್–12ರಲ್ಲಿ ಗಿಲ್ಲಿ ವಿಜೇತರಾದ ಹಿನ್ನೆಲೆ ಹರಿಹರದ ಹರಪನಹಳ್ಳಿ ವೃತ್ತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ