ಕಾರು ಹರಿದು ಬಾಲಕಿ ಸಾವು

KannadaprabhaNewsNetwork |  
Published : Feb 26, 2024, 01:32 AM IST
25ಸಿಎಚ್‌ಎನ್‌53 ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ಕಾರ್ ಪಾರ್ಕಿಂಗ್ ನಲ್ಲಿ ಬಾಲಕಿ ಮೇಲೆ ಹರಿದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿರುವುವ ಕಾರು. | Kannada Prabha

ಸಾರಾಂಶ

ತಾತಾ- ಅಜ್ಜಿ ಜೊತೆ ಬಂದಿದ್ದ ಬಾಲಕಿಯು ಪಾಲಾರ್ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ಆಟವಾಡುವಾಗ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಡೈಸಿ ಎಂಬ ಮಹಿಳೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಬಾಲಕಿಯ ಎದೆಯ ಮೇಲೆ ಕಾರು ಹರಿದು, ಮುಂದೆ ನಿಂತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.

ಚಾಮರಾಜನಗರ: ಕಾರು ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಭಾನುವಾರ ನಡೆದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಉಳ್ಳಾಂಗ ಕೊಟ್ಟಾಯ ಗ್ರಾಮದ ಸುಶ್ಮಿತಾ (7) ಸಾವನ್ನಪ್ಪಿರುವ ಬಾಲಕಿ. ತಾತಾ- ಅಜ್ಜಿ ಜೊತೆ ಬಂದಿದ್ದ ಬಾಲಕಿಯು ಪಾಲಾರ್ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ಆಟವಾಡುವಾಗ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿಕೊಂಡಿದ್ದ ಡೈಸಿ ಎಂಬ ಮಹಿಳೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಬಾಲಕಿಯ ಎದೆಯ ಮೇಲೆ ಕಾರು ಹರಿದು, ಮುಂದೆ ನಿಂತಿದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಕಾರಿನ ಮುಂಭಾಗ ಹಾಗೂ ಹಿಂಭಾಗ ನಜ್ಜು ಗುಜ್ಜಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಪಾಲಿಗೆ ವೈದ್ಯರು ದೇವರಾಗಿ, ರಾಕ್ಷಸರಾಗಬೇಡಿ: ಡಿಸಿ ಸಂಗಪ್ಪ
ನಾಡಿದ್ದು ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ