ಬಾಲಕಿ ಆತ್ಮಹತ್ಯೆ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

KannadaprabhaNewsNetwork |  
Published : Jun 13, 2026, 02:00 AM IST
ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸಾವಿಗೆ ನ್ಯಾಯ ಹಾಗೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಹಿಂದೂಪರ ಸಂಘಟನಗಳು ಶುಕ್ರವಾರ ಗರಗ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

17 ವರ್ಷದ ದಲಿತ ಬಾಲಕಿಗೆ ಉಪ್ಪಿನಬೆಟಗೇರಿಯ ನಯಿಮ್‌ ಬೇಗ ಹಾಗೂ ಸೋಹಿಲ್‌ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಲವ್ ಜಿಹಾದ್‌ಗಾಗಿ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಘಟನೆಗಳು ಆರೋಪಿಸಿವೆ.

ಧಾರವಾಡ:

ತಾಲೂಕಿನ ಗರಗ ಗ್ರಾಮದಲ್ಲಿ ಆತ್ಮಹತ್ಯೆಗೆ ಒಳಗಾಗಿರುವ ಬಾಲಕಿ ಸಾವಿಗೆ ನ್ಯಾಯ ಕೊಡಬೇಕು. ಆಕೆಯ ಮೇಲೆ ಬರೀ ಲೈಂಗಿಕ ದೌರ್ಜನ್ಯವಾಗಿಲ್ಲ, ಅವಳು ಲವ್‌ ಜಿಹಾದ್‌ಗೆ ಬಲಿಯಾಗಿದ್ದಾಳೆ. ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಶುಕ್ರವಾರ ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆ ಹಾಗೂ ಬಜರಂಗದಳ ಕಾರ್ಯಕರ್ತರು ಗರಗ ಗ್ರಾಮದ ಗಾಂಧಿ ವೃತ್ತ ಬಂದ್‌ ಮಾಡಿ ಪ್ರತಿಭಟಿಸಿದರು.

ಗ್ರಾಮದ 17 ವರ್ಷದ ದಲಿತ ಬಾಲಕಿಗೆ ಉಪ್ಪಿನಬೆಟಗೇರಿಯ ನಯಿಮ್‌ ಬೇಗ ಹಾಗೂ ಸೋಹಿಲ್‌ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಲವ್ ಜಿಹಾದ್‌ಗಾಗಿ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಿಂಗಳು ಕಳೆದರೂ ಬಂಧಿಸದ ಪೊಲೀಸರು ತೀವ್ರ ಒತ್ತಡದ ಬಳಿಕ ಇದೀಗ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವೂ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಲವ್‌ ಜಿಹಾದ್‌ಗಾಗಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಸಿಪಿಐ ಶಿವಯೋಗಿ ಲೋಹಾರ, ಪಿಎಸ್‌ಐ ಹಾಗೂ ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಜಿಹಾದಿಗಳನ್ನು ಗಲ್ಲಿಗೇರಿಸಿ, ಎಚ್ಚರವಾಗಿ ಎಚ್ಚರವಾಗಿ ಹಿಂದೂ ಹೆಣ್ಣು ಮಕ್ಕಳೇ.. ಎಂದು ಘೋಷಣೆ ಕೂಗಿದರು. ಬಜರಂಗದಳದ ಶಿವಾನಂದ ಸತ್ತಿಗೇರಿ, ಮೃತ ಬಾಲಕಿ ತಂದೆ-ತಾಯಿ ಹಾಗೂ ಹೋರಾಟಗಾರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ, ಕ್ರಮಕ್ಕೆ ಆಗ್ರಹ
ವಿದ್ಯಾರ್ಥಿಗಳು ತಂತ್ರಜ್ಞಾನ ಅಭಿವೃದ್ಧಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಿ