ಹೆಣ್ಣು ಮಕ್ಕಳು ಕುಟುಂಬದ ಅಭಿವೃದ್ಧಿಗೆ ಅಡಿಪಾಯ

KannadaprabhaNewsNetwork | Published : Jan 26, 2025 1:34 AM

ಸಾರಾಂಶ

Girls are the foundation for the development of the family.

-ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಟಿಹೆಚ್‍ಇಒ ಎನ್.ಎಸ್.ಮಂಜುನಾಥ್

-----

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹೆಣ್ಣು ಮಕ್ಕಳು ಕುಟುಂಬದ ಅಭಿವೃದ್ಧಿಯ ಅಡಿಪಾಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.

ನೆಹರುನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದ ಅವರು ಹೆಣ್ಣು ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಉತ್ತೇಜಿಸುವುದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಗುರಿಯಾಗಿದೆ ಎಂದರು.

ಹೆಣ್ಣು ಮಕ್ಕಳ ಉಳಿವು, ರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮುಖ್ಯವಾಗಿ ಚಿಕಿತ್ಸಾಲಯಗಳಲ್ಲಿ ಗರ್ಭಾವಸ್ಥೆಯಲ್ಲಿ ಲಿಂಗ ತಾರತಮ್ಯವನ್ನು ಸರ್ಕಾರವು ನಿಷೇಧಿಸಿದೆ. ಶಿಕ್ಷಣ ಮತ್ತು ಸಮಾನ ಅವಕಾಶ ಉತ್ತೇಜಿಸಲು 14 ವರ್ಷದವರೆಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಮತ್ತು ಅಗತ್ಯವಿರುವ ಶಿಕ್ಷಣ ನೀಡುತ್ತದೆ. ದೌರ್ಜನ್ಯ ಮತ್ತು ಶೋಷಣೆಗೆ ಬಲಿಯಾದ ಯುವತಿಯರನ್ನು ರಕ್ಷಿಸಲು ಈ ದಿನ ಮೀಸಲಿಡಲಾಗಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ ಬೇಟಿ ಪಡಾವೋ ಬೇಟಿ ಬಚಾವೋ , ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ಶಿಕ್ಷಣ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಣಾ ಅಧಿಕಾರಿ ಮಂಜುಳಾ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತ ಗೌಡ ಪೂಜಾರ್, ನೆಹರು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿಲಾಲ್, ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ, ಗೋಪಾಲಕೃಷ್ಣ, ಶ್ರೀನಿವಾಸ್ ಮೂರ್ತಿ, ಜ್ಞಾನವಿಕಾಸ ಶಾಲೆಯ ಕಾರ್ಯದರ್ಶಿ ಮನೋಜ್, ಮುಖ್ಯ ಶಿಕ್ಷಕ ಮಾರುತಿ, ದೈಹಿಕ ಶಿಕ್ಷಣ ಶಿಕ್ಷಕ ರುದ್ರಪ್ಪ, ಸಹ ಶಿಕ್ಷಕರಾದ ಮಂಜುನಾಥ್, ಅಶೋಕ್, ಸುಮಿತ್ರ, ಮಂಜುಳಾ, ನಾಜಿಮಾ, ಆರ್ಶಿಯ, ಗೀತಾ, ಪವಿತ್ರ ಮತ್ತು 200ಕ್ಕೆ ಹೆಚ್ಚು ವಿದ್ಯಾರ್ಥಿನಿಯರು ಇದ್ದರು.

--------

ಪೋಟೋ: ಚಿತ್ರದುರ್ಗದ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ವಿದ್ಯಾರ್ಥಿನಿಯರು ಭಿತ್ತಿ ಪತ್ರ ಪ್ರದರ್ಶಿಸಿದರು.

--------

ಫೋಟೋ: 25 ಸಿಟಿಡಿ4

Share this article