ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ17 ವರ್ಷ ವಯೋಮಿತಿಯ ಬಾಲಕಿಯರ 67ನೇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿ ಕೊಡಗಿನ ನಾಲ್ಕು ಕಡೆಗಳಲ್ಲಿ ನಡೆಯುತ್ತಿದ್ದು, ಕ್ವಾರ್ಟರ್ ಫೈನಲ್ ಹಂತಕ್ಕೆ ಪಂದ್ಯಾವಳಿ ತಲುಪಿದೆ. ಕರ್ನಾಟಕ ಸೇರಿದಂತೆ 8 ತಂಡಗಳ ನಡುವೆ ಶನಿವಾರ ಸೋಮವಾರಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ರೋಚಕ ಪಂದ್ಯ ನಡೆಯಲಿದೆ.ಕೊಡಗು ಜಿಲ್ಲೆಯ ಮಡಿಕೇರಿ ಸಾಯಿ ಹಾಕಿ ಟರ್ಫ್ ಮೈದಾನ, ಸೋಮವಾರಪೇಟೆ ಟರ್ಫ್ ಮೈದಾನ, ಪೊನ್ನಂಪೇಟೆ ಟರ್ಫ್ ಹಾಗೂ ಕೂಡಿಗೆಯ ಟರ್ಫ್ ಹಾಕಿ ಮೈದಾನದಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿಗಳು ನಡೆಯುತ್ತಿವೆ. ಜ.3ರಂದು ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಲಾಗಿತ್ತು. ಸೋಮವಾರ ಫೈನಲ್ ಪಂದ್ಯಾವಳಿ ನಡೆಯಲಿದೆ.ಶನಿವಾರ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ, ಪಂಜಾಬ್, ಮಣಿಪುರ, ಮಧ್ಯಪ್ರದೇಶ, ಚಂಡೀಗಡ್, ಕೇರಳ, ಜಾರ್ಖಂಡ್, ಒಡಿಸ್ಸಾ ತಂಡಗಳು ಪ್ರವೇಶ ಪಡೆದುಕೊಂಡಿದೆ.
ಲೀಗ್ ಮಾದರಿಯ 8 ಪೂಲ್‌ನಲ್ಲಿ ಪಂದ್ಯಗಳು ನಡೆದಿದ್ದು, ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಪ್ರಿ ಕ್ವಾರ್ಟರ್ ಪಂದ್ಯವನ್ನು ಆಡಿವೆ. ಫೈನಲ್ ಪಂದ್ಯಾವಳಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯಲಿದೆ.ಮಡಿಕೇರಿಯ ಟರ್ಫ್ ಮೈದಾನದಲ್ಲಿ ಶುಕ್ರವಾರ ನಡೆದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ 6-0 ಗೋಲಿನಿಂದ ಕರ್ನಾಟಕ ತಂಡ ಛತ್ತೀಸ್‌ಘಡ ತಂಡವನ್ನು ಸೋಲಿಸಿತು. ವಿಜಯಿ ತಂಡದ ಪರ ಪ್ರಿನ್ಸಿಯ 9ನೇ ನಿಮಿಷ, ಪ್ರಿತಿಕಾ 19, 20ನೇ ನಿಮಿಷ, ಅಕ್ಷರ 47ನೇ ನಿಮಿಷ, ಚೈತನ್ಯ 52 ನೇ ನಿಮಿಷ ಹಾಗೂ ದೇಚಕ್ಕ 54ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಂಬ್ ತಂಡ 6-1 ಗೋಲಿನಿಂದ ಛತ್ತೀಸ್ ಗಡ ತಂಡವನ್ನು ಸೋಲಿಸಿತು. ಪುದುಚೇರಿ ತಂಡ ನವೋದಯ ವಿದ್ಯಾಲಯ ತಂಡವನ್ನು 4-0 ಗೋಲಿನಿಂದ ಮಣಿಸಿತು. ಮಧ್ಯಪ್ರದೇಶ ತಂಡ 1-0 ಗೋಲಿನಿಂದ ಚಂಡೀಗಢ ತಂಡವನ್ನು ಸೋಲಿಸಿತು. ಹರಿಯಾಣ ತಂಡ 5-0 ಗೋಲಿನಿಂದ ದೆಹಲಿ ತಂಡದ ವಿರುದ್ಧ ಗೆಲುವು ಸಾಧಿಸಿತು.ತೆಲಂಗಾಣ ತಂಡವು ವಿದ್ಯಾಭಾರತಿ ತಂಡವನ್ನು 7-0 ಗೋಲಿನಿಂದ ಸೋಲಿಸಿತು. ಒಡಿಸ್ಸಾ ತಂಡವು 3-1 ಗೋಲಿನಿಂದ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿತು. ಮಣಿಪುರ ತಂಡ ಹರಿಯಾಣ ವಿರುದ್ಧ 3-1 ಗೋಲಿನಿಂದ ಗೆಲುವು ಸಾಧಿಸಿತು. ಮಧ್ಯಪ್ರದೇಶ ತಂಡ 8-0 ಗೋಲಿನಿಂದ ಹಿಮಾಚಲ್ ಪ್ರದೇಶ ತಂಡವನ್ನು ಸೋಲಿಸಿತು.ಪಂಜಾಬ್ ತಂಡ ಮಹಾರಾಷ್ಟ್ರ ತಂಡದ ವಿರುದ್ಧ 3-0 ಗೋಲಿನಿಂದ ಗೆಲುವು ಸಾಧಿಸಿತು. ಒಡಿಸ್ಸಾ ತಂಡ 5-0 ಗೋಲಿನಿಂದ ದೆಹಲಿ ತಂಡವನ್ನು ಸೋಲಿಸಿತು. ಚಂಡೀಗಢ ತಂಡವು 6-1 ಗೋಲಿನಿಂದ ಉತ್ತರ ಪ್ರದೇಶ ತಂಡವನ್ನು ಮಣಿಸಿತು. ಕೇರಳ ತಂಡ ರಾಜಸ್ಥಾನವನ್ನು 3-0 ಗೋಲಿನಿಂದ ಸೋಲಿಸಿತು. ಕರ್ನಾಟಕ ತಂಡದ ಅಕ್ಷರ ಸತತ 5 ಗೋಲು!ಕರ್ನಾಟಕ ತಂಡವು ಕೇಂದ್ರೀಯ ವಿದ್ಯಾಲಯ ತಂಡವನ್ನು 11-0 ಗೋಲುಗಳ ಭಾರಿ ಅಂತರದಿಂದ ಮಣಿಸಿತು. ಕರ್ನಾಟಕ ತಂಡದ ಆಟಗಾರ್ತಿ ಅಕ್ಷರ 17, 18, 24, 32, 33ನೇ ನಿಮಿಷದಲ್ಲಿ ಸತತವಾಗಿ 5 ಗೋಲು ದಾಖಲಿಸಿದರು. ಉಳಿದಂತೆ ತಂಡದ ಪ್ರೀತಿಕಾ 6, 25ನೇ ನಿಮಿಷ, ಚೈತನ್ಯ 19ನೇ ನಿಮಿಷ, ದೀಪಿಕಾ 20ನೇ ನಿಮಿಷ, ಪುಣ್ಯ 28ನೇ ನಿಮಿಷ ಹಾಗೂ ಪ್ರಿನ್ಸಿಯ 38ನೇ ನಿಮಿಷದಲ್ಲಿ ಗೋಲು ಬಾರಿಸಿದರು.ಕರ್ನಾಟಕ ತಂಡದಲ್ಲಿ ಕೊಡಗಿನವರು!ರಾಷ್ಟ್ರೀಯ ಹಾಕಿಯಲ್ಲಿ ಪಾಲ್ಗೊಂಡಿರುವ ಕರ್ನಾಟಕ ತಂಡದಲ್ಲಿ ಕೊಡಗಿನ ಸುಮಾರು 15 ಮಂದಿ ಇರುವುದು ವಿಶೇಷ. ರಾಜ್ಯ ಮಟ್ಟದ ಹಾಕಿಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದ 7 ಮಂದಿ ಹಾಗೂ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದ ಕೂಡಿಗೆ ಶಾಲೆಯ 7 ಮಂದಿ, ವಿಭಾಗಮಟ್ಟದ ಹಾಕಿಯಲ್ಲಿ ದ್ವಿತೀಯ ಸ್ಥಾನ ಪಡೆದ ಹಾಸನದ 3 ಹಾಗೂ ಗೋಣಿಕೊಪ್ಪ ಲಯನ್ಸ್ ಶಾಲೆಯ ಒಬ್ಬರು ಆಟಗಾರ್ತಿ ರಾಜ್ಯ ತಂಡದ ಪರ ಆಡುತ್ತಿದ್ದಾರೆ.27 ತಂಡಗಳು ಭಾಗಿ17 ವರ್ಷ ವಯೋಮಿತಿಯ ಬಾಲಕಿಯರ 67ನೇ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 27 ತಂಡಗಳು ಪಾಲ್ಗೊಂಡಿದ್ದವು. 24 ರಾಜ್ಯಗಳ ತಂಡ ಹಾಗೂ ಕೇಂದ್ರೀಯ ವಿದ್ಯಾಲಯ, ನವೋದಯ, ವಿದ್ಯಾಭಾರತಿ 3 ಈ ಹಾಕಿ ಕ್ರೀಡೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.ನಮ್ಮ ಶಾಲೆಯ ತಂಡ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದೆ. ಶಾಲೆ 7 ಮಂದಿ ರಾಷ್ಟ್ರಮಟ್ಟದ ಹಾಕಿಯಲ್ಲಿ ರಾಜ್ಯ ತಂಡದ ಪರ ಭಾಗವಹಿಸಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ರಾಜ್ಯ ತಂಡಕ್ಕೆ ಮಡಿಕೇರಿಯ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ 12 ದಿನಗಳ ಕಾಲ ಉತ್ತಮ ತರಬೇತಿ ನೀಡಲಾಗಿದ್ದು, ಕರ್ನಾಟಕ ತಂಡ ಗೆಲ್ಲುವ ವಿಶ್ವಾಸವಿದೆ. । ಶ್ರೀನಿವಾಸ್, ದೈಹಿಕ ಶಿಕ್ಷಣ ಶಿಕ್ಷಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ ಇಂದಿನ ಪಂದ್ಯಸ್ಥಳ - ಸೋಮವಾರಪೇಟೆ ಟರ್ಫ್ ಮೈದಾನಜಾರ್ಖಂಡ್ - ಒಡಿಸ್ಸಾ 10 ಗಂಟೆಗೆಕೇರಳ - ಮಣಿಪುರ - 11.30ಪಂಜಾಬ್ - ಮಧ್ಯಪ್ರದೇಶ್ 1.30ಕರ್ನಾಟಕ - ಚಂಡೀಗಢ - 3.00