ಹೆಣ್ಣು ಮಕ್ಕಳಿಗೆ ದೃಢ ಮನಸ್ಸು ಅಗತ್ಯ: ಹೇಮಲತಾ

KannadaprabhaNewsNetwork |  
Published : Feb 08, 2025, 12:30 AM IST
೭ಬಿಹೆಚ್‌ಆರ್ ೩: ಬಾಳೆಹೊನ್ನೂರು ಜೇಸಿಐ ಸಂಸ್ಥೆ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಹೆಚ್ಚಿಸುವ ತರಬೇತಿ ಕಾರ್ಯಾಗಾರವನ್ನು ಆಯುರ್ವೇದಿಕ್ ವೈದ್ಯೆ ಅನುಷ್ಕಾ ಸುಧಾಕರ್ ಉದ್ಘಾಟಿಸಿದರು. ಇಬ್ರಾಹಿಂ ಶಾಫಿ, ಹೇಮಲತಾ, ಶಶಿಕಲಾ, ಅಶೋಕ್ ಹಾಜರಿದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಹೆಣ್ಣು ಮಕ್ಕಳು ಶಾಲಾ ಕಾಲೇಜು ದಿನಗಳಲ್ಲಿ ಯಾವುದೇ ವಿಷಯಗಳಲ್ಲಿ ದೃಢ ಮನಸ್ಸನ್ನು ಹೊಂದಿರುವುದು ಅಗತ್ಯ ಎಂದು ಎನ್.ಆರ್.ಪುರ ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯೆ ಹೇಮಲತಾ ಪ್ರಭಾಕರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಹೆಣ್ಣು ಮಕ್ಕಳು ಶಾಲಾ ಕಾಲೇಜು ದಿನಗಳಲ್ಲಿ ಯಾವುದೇ ವಿಷಯಗಳಲ್ಲಿ ದೃಢ ಮನಸ್ಸನ್ನು ಹೊಂದಿರುವುದು ಅಗತ್ಯ ಎಂದು ಎನ್.ಆರ್.ಪುರ ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯೆ ಹೇಮಲತಾ ಪ್ರಭಾಕರ್ ಹೇಳಿದರು.

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಹದಿ ಹರೆ ಯದ ಸಮಸ್ಯೆ, ಮಾಹಿತಿ ಹಾಗೂ ಹೆಣ್ಣು ಮಕ್ಕಳ ಆತ್ಮವಿಶ್ವಾಸ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳು ಯಾವುದೇ ವಿಚಾರಗಳಲ್ಲಿ ಅಂಜಿಕೆ ಬಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆದಲ್ಲಿ ಎಲ್ಲಾ ವಿಚಾರಗಳಲ್ಲೂ ಯಶಸ್ಸು ಸಾಧಿಸಲು ಸಾಧ್ಯವಿದೆ. ಕಿರಿಯ ವಯಸ್ಸಿನಲ್ಲಿ ಹಲವು ದೈಹಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪೋಷಕರು, ಶಿಕ್ಷಕರು, ವೈದ್ಯರ ಬಳಿ ಮುಚ್ಚುಮರೆ ಇಲ್ಲದೆ ಹೇಳಿಕೊಂಡಲ್ಲಿ ಅವುಗಳಿಗೆ ಪರಿಹಾರ ಸಾಧ್ಯ.

ಸಮಾಜದಲ್ಲಿ ಇಂದು ಹೆಣ್ಣಿಗೆ ಅಗ್ರ ಸ್ಥಾನವಿದ್ದು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟಿದ್ದಾಳೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಮುನ್ನಡೆಯಬೇಕಿದೆ ಎಂದರು.

ಆಯುರ್ವೇದಿಕ್ ವೈದ್ಯೆ ಅನುಷ್ಕಾ ಸುಧಾಕರ್ ಮಾತನಾಡಿ, ಹೆಣ್ಣು ಮಕ್ಕಳು ಬೆಳೆಯುವ ಹಂತದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇವುಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ವೈದ್ಯರು, ತಾಯಂದಿರ ಬಳಿ ಹೇಳಿಕೊಂಡು ಸೂಕ್ತ ಸಲಹೆ ಪಡೆಯಬೇಕು. ಆಗ ಮಾತ್ರ ಅವುಗಳನ್ನು ಮೆಟ್ಟಿನಿಲ್ಲಬಹುದು ಎಂದರು.

ಬಿ.ಕಣಬೂರು ಗ್ರಾಪಂ ಸದಸ್ಯೆ ಶಶಿಕಲಾ, ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ವಿ.ಅಶೋಕ, ಪೂರ್ವಾಧ್ಯಕ್ಷ ಸುಧಾಕರ್, ಚೈತನ್ಯ ವೆಂಕಿ, ದಯಾಕರ್, ರಿಚರ್ಡ್ ಮಥಾಯಿಸ್, ಸದಸ್ಯರಾದ ಚೇತನ್, ಡಿ.ರಾಜೇಂದ್ರ ಮತ್ತಿತರರು ಹಾಜರಿದ್ದರು.

೦೭ಬಿಹೆಚ್‌ಆರ್ ೩: ಬಾಳೆಹೊನ್ನೂರು ಜೇಸಿಐ ಸಂಸ್ಥೆ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಹೆಚ್ಚಿಸುವ ತರಬೇತಿ ಕಾರ್ಯಾಗಾರವನ್ನು ಆಯುರ್ವೇದಿಕ್ ವೈದ್ಯೆ ಅನುಷ್ಕಾ ಸುಧಾಕರ್ ಉದ್ಘಾಟಿಸಿದರು. ಇಬ್ರಾಹಿಂ ಶಾಫಿ, ಹೇಮಲತಾ, ಶಶಿಕಲಾ, ಅಶೋಕ್ ಹಾಜರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್