ಕನ್ನಡಪ್ರಭ ವಾರ್ತೆ ಕೋಲಾರಹೃದಯವಂತರಿಗೆ ಮಾತ್ರ ಹೆಣ್ಣು ಮಕ್ಕಳ ಸಂಕಷ್ಟ-ಸಂವೇದನೆಗಳು ಅರ್ಥವಾಗುತ್ತದೆ ಎಂದು ಅಬಕಾರಿ ನಿರೀಕ್ಷಕಿ ಸುಮ ತಿಳಿಸಿದರು. ಬೆಂಗಳೂರಿನ ನೀಡುವ ಹೃದಯ ಫೌಡೇಶನ್‌ನಿಂದ ತಾಲೂಕಿನ ಅಮ್ಮನಲ್ಲೂರು ಚೌಡೇಶ್ವರಿ ಪ್ರೌಢಶಾಲೆಯ ನವೀಕೃತ ಕೊಠಡಿಯಲ್ಲಿ ನಿರ್ಮಿಸಿರುವ ಪಿಂಕ್ ರೂಂ ಸಮರ್ಪಣೆ, ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಅದರ ನಿರ್ವಹಣೆ, ವಿಶ್ರಾಂತಿ ಹಾಸಿಗೆಗಳು, ಪ್ಯಾಡ್‌ಬರ್ನಿಂಗ್ ಯಂತ್ರ ಹಾಗೂ ದೇಸಿ ಮತ್ತು ವಿದೇಶಿ ಶೈಲಿಯ ಶೌಚಾಲಯ ಸೌಕರ್ಯ ಸ್ಥಳ ಹಾಗೂ ೬೦೦ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‌ಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವೈಯಕ್ತಿಕ ಸ್ವಚ್ಛತೆ ಮುಖ್ಯ
ಹೆಣ್ಣು ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಬಹು ಮುಖ್ಯ. ಅದರಲ್ಲೂ ಮುಟ್ಟಿನ ಸಂದರ್ಭದಲ್ಲಿ ಅನುಭವಿಸುವ ಯಾತನೆ, ಮುಜುಗರ ಇವುಗಳನ್ನು ಅನುಭವಿಸಿದರಿಗೆ ಗೊತ್ತು. ಗ್ರಾಮೀಣ ಭಾಗದ ಪ್ರೌಢಶಾಲೆಗಳಲ್ಲಿ ನಗರ ಪ್ರದೇಶದ ವಿದ್ಯಾವಂತ ಹಾಗೂ ತಿಳಿವಳಿಕೆ ಇರುವ ಹೆಣ್ಣುಮಕ್ಕಳು ಅನೇಕ ಬಾರಿ ಶಾಲಾ ಕಾಲೇಜು, ಉದ್ಯೋಗ, ಪ್ರಯಾಣ ಹಾಗೂ ಇತರೆ ಕೆಲಸಗಳ ನಿಮಿತ್ತ ಹೊರಗೆ ಹೋದಾಗ ಮುಟ್ಟಿನ ಸಂಕಷ್ಟ ಎದುರಿಸುತ್ತಾರೆ ಎಂದರು.ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಪ್ರೌಢಾವಸ್ಥೆಯ ಹೆಣ್ಣು ಮಕ್ಕಳು ಮುಟ್ಟಿನ ಪ್ಯಾಡ್‌ಗಳನ್ನು ಬಳಸುವುದು ತೀರಾ ವಿರಳ, ಇಂತಹ ಸೌಕರ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ನೀಡುವ ಹೃದಯ ಫೌಡೇಶನ್ ನ ಮುಖ್ಯಸ್ಥ ಆಂಟೋನಿ ಸಜಿತ್ ಕೊಡುಗೆ ಶ್ಲಾಘನೀಯ ಎಂದರು. ಪ್ರಾಣಿ ದಯಾ ಸಂಸ್ಥೆಯ ಸ್ವಯಂ ಸೇವಕಿ ಸ್ವಯಂಬೋಸೋಹಂ, ಹೃದಯ ಪೌಂಡೇಶನ್‌ನ ಮುಖ್ಯಸ್ಥ ಆಂಟೋನಿ ಸಜಿತ್, ಕ್ಯಾಲನೂರು ಪಬ್ಲಿಕ್ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಡಾ.ಜಿ.ಎಂ.ಶ್ರೀನಿವಾಸ್, ಚೌಡೇಶ್ವರಿ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ.ಎಂ.ರಾಜಣ್ಣ, ಶಾಲೆಯ ಆಡಳಿತ ಅಧಿಕಾರಿ ಎಂ.ಸಂಪಗಿ, ಮದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಜಿ.ವಿಜಯಾನಂದ, ನೀಡುವ ಹೃದಯ ಪೌಂಡೇಶನ್‌ನ ರಾಜೇಶ್ ಏಂಜೆಲ್ ಪೆಡ್ರಿಶಿಯಾ ಇದ್ದರು.