ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಛೇಂಬರ್ ಆಫ್ ಕಾಮರ್ಸ್‌ನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಎಸ್‌ವೈ ಅಭಿಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೇರುಮಟ್ಟದಿಂದ ರಾಜಕಾರಣ ಆರಂಭಿಸಿದ ಯಡಿಯೂರಪ್ಪ ಅವರು ಹಂತಹಂತವಾಗಿ ಹೋರಾಟ ಮಾಡುತ್ತ ಇಡೀ ನಾಡು ಮೆಚ್ಚುವಂತಹ ನಾಯಕನಾಗಿದ್ದು ದೊಡ್ಡ ಇತಿಹಾಸ. ಸಮಾಜದ ಎಲ್ಲ ಜನರ ಪರವಾಗಿ ತಮ್ಮ ಜೀವನವಿಡೀ ಹೋರಾಡಿದ ಧೀಮಂತ ನಾಯಕ. ನಾಡಿನ ಜನ ಸಮುದಾಯದ ಸಂಕಷ್ಟ ನಿವಾರಣೆಗೆ ಅನೇಕ ಜನಪರ ಕಾರ್ಯಕ್ರಮಗಳ ಜಾರಿಗೊಳಿಸುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು.
50 ವರ್ಷಗಳ ಕಾಲ ರಾಜಕಾರಣ ಸುಲಭವಾದುದಲ್ಲ. ಅನೇಕ ಕಷ್ಟಗಳನ್ನು ಎದುರಿಸಿ ಯಶಸ್ಸು ಪಡೆದು ಇತರರಿಗೆ ಮಾದರಿ ಆಗಿದ್ದಾರೆ. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಿರುವುದು ನಮ್ಮ ಪಾಲಿಗೆ ಬಂದ ಸುವರ್ಣ ಅವಕಾಶವಾಗಿದೆ. ಅಪರೂದ ಈ ಕಾರ್ಯಕ್ರಮ ಸಾಕ್ಷೀಕರಿಸಲು ಅಪಾರ ಸಂಖ್ಯೆಯಲ್ಲಿ ಧಾವಸಿಬೇಕು. ಕಾರ್ಯಕ್ರಮಕ್ಕೊಂದು ಐತಿಹಾಸಿಕ ಸನ್ನಿವೇಶ ಸೃಷ್ಟಿಸಬೇಕೆಂದು ಶ್ರೀರಾಮುಲು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಸಾಕಷ್ಟು ಜನರು ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿಬೇಕು. ಸುದೀರ್ಘ ಐವತ್ತು ವರ್ಷಗಳ ರಾಜಕೀಯ ಬದುಕು ಯುವಕರಿಗೆ ಪ್ರೇರಣೆಯಾಗಲಿದೆ. ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಲಕ್ಷೋಪಲಕ್ಷ ಜನರು ಆಗಮಿಸುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಈಗಾಗಲೇ ಭೂಮಿ ಪೂಜೆ ಕಾರ್ಯಕ್ರಮ ಇಂತಹ ಒಂದು ಸಂದೇಶವನ್ನು ರವಾನಿಸಿದೆ ಎಂದರು.
ಬಾಳೇಕಾಯಿ ರಾಮ್ ದಾಸ್, ಎ.ಮುರುಳಿ, ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್, ಸೋಮಶೇಖರ್ ಮಂಡೀಮಠ್, ಶಿವಪುತ್ರಪ್ಪ, ತಾಲೂಕು ಅಧ್ಯಕ್ಷ ಬಿ.ಎಂ. ಸುರೇಶ್, ಹನುಮಂತೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ ಮಂಜುನಾಥ್, ವೆಂಕಟೇಶ್ ಯಾದವ್, ಮಾಧುರಿ ಗಿರೀಶ್, ಬಿ.ಎಸ್. ಶಿವಪುತ್ರಪ್ಪ, ಆದಿ ಬಾಸ್ಕರ್ ಶೆಟ್ಟಿ ಇತರರು ಇದ್ದರು. ಡಾ.ಪಿ.ಎಂ.ಮಂಜುನಾಥ್ ಇದ್ದರು.