ಎಲ್.ಎಸ್. ಶ್ರೀಕಾಂತ್
ಮಕ್ಕಳ ಕೈಗೆ ಪುಸ್ತಕ ನೀಡಿ ಓದಿಸಿ, ಮೊಬೈಲ್ ನೀಡಬೇಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.
ನಗರದ ಹಳೇ ಡಿಸಿ ಕಚೇರಿ ಹಿಂಭಾಗದ ಭಾರತ್ ಸ್ಕೌಟ್ಸ್ & ಗೈಡ್ಸ್ ಮೈದಾನಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಭಾನುವಾರ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.ಇತ್ತೀಚೆಗೆ ಮಕ್ಕಳು ಪುಸ್ತಕ ಓದುವುದನ್ನು ಬಿಟ್ಟು ಮೊಬೈಲ್ ನಲ್ಲಿ ವಾಟ್ಸ್ ಆ್ಯಪ್ ಹಾಗೂ ಫೇಸ್ ಬುಕ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಅವರ ಜೀವನ ಮೊಬೈಲ್ ಮಯವಾಗುತ್ತಿದೆ. ಪೋಷಕರು ಮಕ್ಕಳಿಗೆ ಕೇವಲ ಮಳಿಗೆಗಳನ್ನು ತೋರಿಸುವುದಷ್ಟೇ ಅಲ್ಲದೆ, ಅವರ ಕೈಗಳಿಗೆ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಈ ಬಾರಿ ಪುಸ್ತಕ ಮೇಳಕ್ಕೆ ಸುಮಾರು 140 ಅರ್ಜಿಗಳು ಬಂದಿದ್ದು, 95 ಮಳಿಗೆಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಕಾಶಕರು ಆಗಮಿಸಿದ್ದಾರೆ, ಪ್ರತಿವರ್ಷ 9 ದಿನಗಳ ಕಾಲ ನಡೆಯುತ್ತಿದ್ದ ಈ ಮೇಳವನ್ನು ಈ ಬಾರಿ ಸಾರ್ವಜನಿಕರ ಅನುಕೂಲಕ್ಕಾಗಿ 11 ದಿನಗಳ ಕಾಲ ಅ. 11 ರಿಂದ 21 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ದಸರಾ ಪ್ರಕಾಶಕರು ಮತ್ತು ಮಳಿಗೆಯವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರತಿದಿನ ಬಿಸಿ ಊಟ ಮತ್ತು ಉಪಹಾರವನ್ನು ಉಚಿತವಾಗಿ ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಕುವೆಂಪು ಕನ್ನಡ ಸಂಸ್ಥೆಯ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಇತರರು ಇದ್ದರು.
ಚಾಮುಂಡೇಶ್ವರಿಗೆ ಸಿಎಂ ವಿಶೇಷ ಪೂಜೆ: ಸಾಷ್ಟಾಂಗ ನಮಸ್ಕಾರಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಇತರೆ ಸಚಿವರು, ಶಾಸಕರು ಇದ್ದರು.ಜಿಲ್ಲಾಡಳಿತದಿಂದ ಸ್ವಾಗತ: