ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ರಿಪ್ಪನ್‍ಪೇಟೆ ಸಮೀಪದ ಕೋಡೂರು ಗ್ರಾಮದ ವಿದ್ಯಾದಾಯಿನಿ ಎಜುಕೇಷನ್ ಟ್ರಸ್ಟ್ ಬ್ಲಾಸಂ ಅಕಾಡೆಮಿ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ಬ್ಲಾಸಂ ಶಾಲಾ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ದಿವ್ಯಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮತೆ ಬೆಳಸುವುದರೊಂದಿಗೆ ಗುರುಹಿರಿಯನ್ನು ಗೌರವದಿಂದ ಕಾಣುವುದರೊಂದಿಗೆ ಒಳ್ಳೆಯವರ ಜೊತೆ ಸ್ನೇಹ ಬೆಳಸಿಕೊಂಡು ಸಮಾಜದಲ್ಲಿ ಉತ್ತಮರೆನ್ನಿಸಿಕೊಳ್ಳಬೇಕು ಎಂದು ಕರೆ ನೀಡಿ, ಕನ್ನಡ ಮೊದಲ ಭಾಷೆಯಾಗಲಿ ನಂತರ ಬದುಕಿಗೆ ಅಂಗ್ಲಭಾಷೆ ಬೇಕು. ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕದೇ ಅವರ ಬೆಳವಣಿಗೆಗೆ ಅಸಕ್ತಿಗೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.
ವಿದ್ಯಾದಾಯಿನಿ ಎಜುಕೇಷನ್ ಟ್ರಸ್ಟ್ ಆಧ್ಯಕ್ಷ ಬಿ.ಜಿ.ಚಂದ್ರು ಮೌಳಿಗೌಡರು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬೆಂಗಳೂರು ಇಂಡೋಗ್ಲೋಬ್ ಎಜುಕೇಷನ್ ಸೊಸೈಟಿ ಅಂತಾರಾಷ್ಟ್ರೀಯ ತರಬೇತುದಾರ ಸಿ.ಇ.ಓ ಈ ಧನರಾಜ್ ಕೋಡೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ.
ಕೋಡೂರು ಗ್ರಾಪಂ ಉಪಾಧ್ಯಕ್ಷ ಎಂ.ಸುಧಾಕರ್, ಬ್ಲಾಸಂ ಅಕಾಡೆಮಿ ಮುಖ್ಯಸ್ಥ ಸುಧಾಕರ್, ಮಂಜುನಾಥ ಬ್ಯಾಣದ್, ವಿನಯ್ ಕಾಡವಳ್ಳಿ, ಟ್ರಸ್ಟಿಗಳಾದ ದಿವಾಕರ್ ಶೆಟ್ಟಿ, ಗುರುರಾಜ, ಸುನೀಲ್, ಪ್ರದೀಪ್, ಹರೀಶಗೌಡ, ಸಂತೋಷ ಮಳವಳ್ಳಿ, ಪುಷ್ಪಾವತಿ ಮಂಜಪ್ಪ, ಸುರೇಶ ಬಿ.ಎಸ್., ಕೆ.ಜಿ.ವಿಜಯಕುಮಾರ್ ಹಾಜರಿದ್ದರು.ವಿನಯ್‍ಗೌಡ ಸ್ವಾಗತಿಸಿ, ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.