ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರವಲಯದ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ ಭವನ ವೀಕ್ಷಿಸಲು ಬಂದಿದ್ದ ನಗರದ ಪೂರ್ಣ ಪ್ರಜ್ಞ ಶಾಲೆಯ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಮಾತನಾಡಿ, 1954 ರಲ್ಲಿ ವಿಶ್ವಸಂಸ್ಥೆಯು ನವೆಂಬರ್ 20 ರಂದು ಸಾರ್ವತ್ರಿಕ ಮಕ್ಕಳ ದಿನಾಚರಣೆಯನ್ನು ಆಚರಿಸಲು ಘೋಷಿಸಿತು ಎಂದರು.
ನೆಹರು ಜನ್ಮದಿನಾಚರಣೆಭಾರತವು ಇದೇ ದಿನ ಈ ದಿನವನ್ನು ಆಚರಿಸುತ್ತಿತ್ತು. ಆದರೆ 1964 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ನಿಧನದ ನಂತರ ಭಾರತೀಯ ಸಂಸತ್ತು ನೆಹರೂರವರ ಮಕ್ಕಳ ಮೇಲಿನ ಪ್ರೀತಿಯನ್ನು ಸ್ಮರಿಸಲು ಅವರ ಜನ್ಮ ಜಯಂತಿಯನ್ನು ಮಕ್ಕಳ ದಿನವಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಮಕ್ಕಳ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ನೆಹರು ಜನ್ಮ ದಿನವನ್ನು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವವನ್ನು ಸಾರುವ ಸಲುವಾಗಿ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಪೂರ್ಣ ಪ್ರಜ್ಞಾ ಶಾಲೆಯ ಕಾರ್ಯದರ್ಶಿ ಶೈಲಜಾ ವೆಂಕಟೇಶ್ ಮಾತನಾಡಿ, ಸದಾ ಪಠ್ಯ ಚಟುವಟಿಗೆಗಳಲ್ಲಿ ಕಾಲ ಕಳೆಯುವ ಮಕ್ಕಳಿಗೆ ಬಾಹ್ಯ ಜ್ಞಾನ ವೃದ್ದಿಗಾಗಿ ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ನಾಟಕ, ಹಾಡುಗಾರಿಕೆ, ಕ್ರೀಡಾ ಸ್ಪರ್ಧೆ, ಭಾಷಣ, ಛದ್ಮವೇಷ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಸಿದ್ದೆವು ಎಂದರು.
ನಮ್ಮಿಂದ ಕಣ್ಮರೆಯಾಗುತ್ತಿರುವ ಆಧುನಿಕ ಮಾನವನ ಪ್ರಥಮ ಸಾರಿಗೆ ವಾಹನ ಎತ್ತಿನ ಬಂಡಿಗಳನ್ನು ತರಿಸಿ ಅದರಲ್ಲಿ ಮಕ್ಕಳು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಸಿ, ಎತ್ತಿನ ಬಂಡಿಯ ಪ್ರಯಾಣದ ಅನುಭವ ಪಡೆದರು. ಈ ದಿನ ನಡೆದ ಚಟುವಟಿಕೆಗಳು ಮಕ್ಕಳಿಗೆ ಮನರಂಜನೆ ನೀಡುವುದಲ್ಲದೆ, ಜವಾಬ್ದಾರಿ ಮತ್ತು ನಾಯಕತ್ವದ ಮಹತ್ವವನ್ನು ಅನುಭವಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.