ಕನ್ನಡಪ್ರಭ ವಾರ್ತೆ ಕೋಲಾರಈಗಾಗಲೇ ಒಂದನೇ ಮತ್ತು ಎರಡನೇ ಹಂತದ ಕೈಗಾರಿಕಾ ಪ್ರದೇಶಗಳಿಗೆ ರೈತರು ತಮ್ಮ ಜಮೀನು ನೀಡಿದ್ದಾರೆ, ಆದರೆ ಭೂಮಿ ಕಳೆದುಕೊಂಡಿರುವವರಿಗೆ ಉದ್ಯೋಗ ನೀಡಿದಾಗ ಮಾತ್ರ ನೆಮ್ಮದಿ ಸಿಗುತ್ತದೆ ಎಂದು ಮಾಜಿ ವಿಧಾನ ಸಭಾಪತಿ ವಿ.ಆರ್ ಸುದರ್ಶನ್ ತಿಳಿಸಿದರು.ತಾಲೂಕಿನ ವೇಮಗಲ್‌ನ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ರೈತರ ಅಹವಾಲು ಕಾರ್ಯಕ್ರಮದಲ್ಲಿ ಮಾತನಾಡಿ, ಕೈಗಾರಿಕೆಗಳು ತಮಗೆ ಬಂದ ಸಿಆರ್‌ಎಫ್ ಲಾಭದ ಹಣದಲ್ಲಿ ಸ್ಥಳೀಯವಾಗಿ ಸಮಾಜ ಸೇವೆಗಳಿಗೆ ಬಳಸಬೇಕೆಂದು ನಿಯಮವಿದ್ದರು ಸಹ ಅದು ಸ್ಥಳೀಯ ಭಾಗದಲ್ಲಿ ಕಾರ್ಯರೂಪಕ್ಕೆ ಬಾರದೇ ಬೇರೆ ರಾಜ್ಯಗಳಲ್ಲಿ ಬಳಸುತ್ತಿದ್ದಾರೆ ಎಂದು ಆರೋಪವಿದೆ ಎಂದರು. ಅಗತ್ಯ ಸೌಲಭ್ಯ ಕಲ್ಪಿಸಿಲ್ಲ
ವೇಮಗಲ್ ಕೈಗಾರಿಕಾ ಪ್ರದೇಶದ ೨ನೇ ಹಂತದಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ರಸ್ತೆ, ಕಾಮಗಾರಿಗಳು, ಮೂಲಭೂತ ಸೌಕರ್ಯಗಳು ಸಹ ಸರಿಯಾದ ರೀತಿಯಲ್ಲಿ ಪ್ರಾರಂಭವಾಗಿರುವುದಿಲ್ಲ, ಇದನ್ನೆಲ್ಲ ಬದಿಗೊತ್ತಿ ೩ನೇ ಹಂತದಲ್ಲಿ, ಸುಮಾರು ೬೫೦ ಎಕರೆಗೂ ಹೆಚ್ಚು ಜಮೀನನ್ನು ಸಹ ೨೮(೧) ರ ಪ್ರಕಾರ ಭೂ ಸ್ವಾಧೀನಪಡಿಸಿಕೊಂಡಿದ್ದಾರೆ, ಮುಖ್ಯವಾಗಿ ೨ನೇ ಹಂತದಲ್ಲಿ ಜಮೀನು ಕಳೆದುಕೊಂಡಿರುವವರಿಗೆ ಇನ್ನು ಬಾಕಿ ಹಣ ನೀಡಬೇಕಾಗಿದೆ ಎಂದರು.ಒಂದೇ ಕುಟುಂಬಸ್ಥರು ರಕ್ತ ಸಂಬಂಧಿಕರು ಕೈಗಾರಿಕಾ ಪ್ರದೇಶಕ್ಕೆ ಹೋಗಿರುವ ಜಮೀನನ್ನು ಹಂಚಿಕೊಳ್ಳಿ ಅದು ಬಿಟ್ಟು ನೀವು ನೀವೆ ಕಿತ್ತಾಡಿಕೊಂಡರೇ ಕೋರ್ಟ್ ಮೆಟ್ಟಿಲು ಏರಿದರೆ ಕಷ್ಟಕರ, ಅದಕ್ಕೆ ಅವಕಾಶ ಕೊಡದೆ ಸಮಸ್ಯೆ ಬಗೆಹರಿಸಿಕೊಂಡರೆ ಇಲಾಖೆಯಿಂದ ನಿಮಗೂ ಬೇಗನೇ ಹಣ ಬರುತ್ತದೆ ಎಂದು ರೈತರಿಗೆ ಸಲಹೆ ಮಾಡಿದರು.ವೇಮಗಲ್-ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನೀರು ಬೀದಿ ದೀಪ, ರಸ್ತೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ, ಇಷ್ಟು ದೊಡ್ಜ ಮಟ್ಟದಲ್ಲಿ ಕೈಗಾರಿಕೆಗಳು ಬರುತ್ತಿದ್ದಾಗ ಅದಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಕೂಡ ಮಾಡಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.ಸಂತ್ರಸ್ತರಿಗೆ ಕೆಲಸ ಕೊಡುತ್ತಿಲ್ಲ
ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡುವಲ್ಲಿ ಕಾರ್ಖಾನೆಗಳು ಬಹಳಷ್ಟು ನಿರಾಕರಣೆ ಮಾಡುತ್ತಿದ್ದಾರೆ, ಅಂತರವನ್ನು ಕೂಡಲೇ ಕೆಲಸ ನೀಡಬೇಕು, ಸ್ಥಳೀಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಗೆ ಆಧ್ಯತೆ ನೀಡಬೇಕು.