ರೈತರಿಗೆ ಹಾಲಿನ ಫ್ಯಾಟ್ ಆಧಾರದಲ್ಲಿ ದರ ನೀಡಿ: ಕಾಡೇನಹಳ್ಳಿ ರಾಮಚಂದ್ರು

KannadaprabhaNewsNetwork |  
Published : Sep 24, 2024, 01:51 AM ISTUpdated : Sep 24, 2024, 01:52 AM IST
23ಕೆಎಂಎನ್ ಡಿ14 | Kannada Prabha

ಸಾರಾಂಶ

ಒಕ್ಕೂಟದಿಂದ ತಾಲೂಕಿನ 3000 ಮ್ಯಾಟ್ ನೀಡಿದ್ದಾರೆ. ಹಲವು ಡೇರಿಗಳಿಗೆ ಮ್ಯಾಟ್ ವಿತರಣೆ ಮಾಡಿದ್ದೇವೆ. ಮ್ಯಾಟ್‌ಗೆ ಸಾಕಷ್ಟು ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಮ್ಯಾಟ್ ಖರೀದಿಸಿ ನೀಡಲಾಗುವುದು, ನುಗ್ಗಹಳ್ಳಿ ವ್ಯಾಪ್ತಿಯ ಡೇರಿಗಳಿಗೆ ಒಕ್ಕೂಟದ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಮ್ಯಾಟ್‌ಗಳನ್ನು ನೀಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹಾಲು ಉತ್ಪಾದಕರ ಸಹಕಾರಗಳಲ್ಲಿ ರೈತರಿಗೆ ಹಾಲಿನ ಫ್ಯಾಟ್ ಆಧಾರದಲ್ಲಿ ದರ ನೀಡಬೇಕು ಎಂದು ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ತಾಲೂಕಿನ ನುಗ್ಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹೈನುಗಾರರಿಗೆ ರಬ್ಬರ್ ಮ್ಯಾಟ್ ವಿತರಿಸಿ ಮಾತನಾಡಿ, ಡೇರಿಗಳಲ್ಲಿ ಗುಣಮಟ್ಟದ ಹಾಲು ಹಾಕುವ ರೈತರಿಗೆ ಹಾಗೂ ನೀರು ಹಾಲು ಹಾಕುವ ರೈತರಿಗೂ ಒಂದೇ ದರ ನೀಡಬಾರದು ಎಂದರು.

ಗುಣಮಟ್ಟ ಹಾಲು ಹಾಕುವವರಿಗೆ ಫ್ಯಾಟ್ ಆಧಾರದ ಮೇಲೆ ದರ ನೀಡಿ, ಕಳಪೆ ಹಾಲು ಹಾಕುವವರನ್ನು ವಾಪಸ್ ಕಳುಹಿಸಿ. ಕಡ್ಡಾಯವಾಗಿ ಆನ್‌ಲೈನ್ ಅಳವಡಿಕೆ ಮಾಡಿ ಹಾಲು ಖರೀದಿಸಿ ಎಂದರು.

ಒಕ್ಕೂಟದಿಂದ ತಾಲೂಕಿನ 3000 ಮ್ಯಾಟ್ ನೀಡಿದ್ದಾರೆ. ಹಲವು ಡೇರಿಗಳಿಗೆ ಮ್ಯಾಟ್ ವಿತರಣೆ ಮಾಡಿದ್ದೇವೆ. ಮ್ಯಾಟ್‌ಗೆ ಸಾಕಷ್ಟು ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಮ್ಯಾಟ್ ಖರೀದಿಸಿ ನೀಡಲಾಗುವುದು, ನುಗ್ಗಹಳ್ಳಿ ವ್ಯಾಪ್ತಿಯ ಡೇರಿಗಳಿಗೆ ಒಕ್ಕೂಟದ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಮ್ಯಾಟ್‌ಗಳನ್ನು ನೀಡುತ್ತಿದ್ದೇವೆ ಎಂದರು.

ಈ ವೇಳೆ ಮಾರ್ಗವಿಸ್ತರ್ಣಾಧಿಕಾರಿ ಜಗದೀಶ್, ಡೇರಿ ಅಧ್ಯಕ್ಷ ಎನ್.ಬಿ.ಸಿದ್ದರಾಮೇಗೌಡ, ಉಪಾಧ್ಯಕ್ಷ ಎನ್.ಪಿ.ಸಿದ್ದೇಗೌಡ, ಕಾರ್‍ಯದರ್ಶಿ ಎಸ್.ಸಿದ್ದರಾಮೇಗೌಡ, ನಿರ್ದೇಶಕರಾದ ಎನ್.ಎಸ್.ಶಂಕರೇಗೌಡ, ಲತಾ, ಪ್ರಮಿಳ, ಕೃಷ್ಣೇಗೌಡ, ಎನ್.ಆರ್. ರಾಜಮುಡಿ, ಶಿವೇಗೌಡ, ಎನ್.ಪಿ.ದಿನೇಶ್, ಚನ್ನೇಗೌಡ ಸೇರಿದಂತೆ ವಿವಿಧ ಡೇರಿಗಳ ಕಾರ್‍ಯದರ್ಶಿಗಳು, ಗ್ರಾಮಸ್ಥರು ಹಾಜರಿದ್ದರು.

ಸೆ.26 ರಂದು ಜಮಾ ಬಂದಿ ಕಾರ್ಯಕ್ರಮಮಂಡ್ಯ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ವತಿಯಿಂದ ತಾಲೂಕಿನ ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ 2023-24 ನೇ ಸಾಲಿನ ಜಮಾ ಬಂದಿ ಕಾರ್ಯಕ್ರಮವನ್ನು ಗ್ರಾಪಂ ಆವರಣದಲ್ಲಿ ಜಮಾಬಂಧಿ ನೋಡೆಲ್ ಅಧಿಕಾರಿಗಳು ಮಂಡ್ಯ ಕ್ಷೇತ್ರ ಸಮನ್ವಯ ಅಧಿಕಾರಿ ದಕ್ಷಿಣ ವಲಯ ಅಧ್ಯಕ್ಷತೆಯಲ್ಲಿ ಸೆ.26 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ