ಬೆಳಗಾವಿ : ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ : ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ

KannadaprabhaNewsNetwork |  
Published : Feb 17, 2025, 01:33 AM ISTUpdated : Feb 17, 2025, 12:27 PM IST
ಬೆಳಗಾವಿಯಲ್ಲಿ ಭಾನುವಾರ ತಾಪಂ ಅಧಿಕಾರಿಗಳೊಂದಿಗೆ ಜಿಪಂ ಸಿಇಒ ರಾಹುಲ್‌ ಶಿಂಧೆ ಸಭೆ ನಡೆಸಿದರು | Kannada Prabha

ಸಾರಾಂಶ

ಮನರೇಗಾ ಯೋಜನೆಯಡಿ 2024-25ನೇ ವರ್ಷಕ್ಕೆ ಜಿಲ್ಲಾ ಆದ್ಯತಾ ಕಾಮಗಾರಿಗಳಾದ ಶಾಲಾ ಶೌಚಾಲಯ, ಆಟದ ಮೈದಾನ, ಅಡುಗೆ ಕೊಣೆ, ಶಾಲಾ ಆವರಣ ಗೋಡೆ, ಎಸ್‌ಡಬ್ಲ್ಯೂಎಂ ಘಟಕ, ಗ್ರಾಮ ಪಂಚಾಯತಿ ಕಟ್ಟಡ ಇನ್ನು ಚಾಲ್ತಿಯಲ್ಲಿರುವುದು ವಿಷಾದನಿಯವಾಗಿದೆ.  

 ಬೆಳಗಾವಿ :  ಮನರೇಗಾ ಯೋಜನೆಯಡಿ 2024-25ನೇ ವರ್ಷಕ್ಕೆ ಜಿಲ್ಲಾ ಆದ್ಯತಾ ಕಾಮಗಾರಿಗಳಾದ ಶಾಲಾ ಶೌಚಾಲಯ, ಆಟದ ಮೈದಾನ, ಅಡುಗೆ ಕೊಣೆ, ಶಾಲಾ ಆವರಣ ಗೋಡೆ, ಎಸ್‌ಡಬ್ಲ್ಯೂಎಂ ಘಟಕ, ಗ್ರಾಮ ಪಂಚಾಯತಿ ಕಟ್ಟಡ ಇನ್ನು ಚಾಲ್ತಿಯಲ್ಲಿರುವುದು ವಿಷಾದನಿಯವಾಗಿದೆ. ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಇದೇ ತಿಂಗಳ ಅಂತ್ಯದಲ್ಲಿ ಪೂರ್ಣಗೊಳಿಸಲು ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಪಂಚಾಯತಿ ಅಧಿಕಾರಿಗಳೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಜರುಗಿದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನವ ದಿನ ಸೃಜನೆಯಲ್ಲಿ 2023-24ನೇ ಸಾಲಿಗೆ ಹೋಲಿಕೆ ಮಾಡಿದರೇ ಪ್ರಸಕ್ತ ಸಾಲಿಗೆ ₹23.26 ಲಕ್ಷ ಮಾನವ ದಿನಗಳು ಕುಂಠಿತವಾಗಿದ್ದು, ಜನರಿಗೆ ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಕೆಲಸ ನೀಡಿ ಮಾರ್ಚ್‌-2025ರ ಅಂತ್ಯದೊಳಗಾಗಿ ನೀಡಿದ ಗುರಿಗನುಗುಣವಾಗಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.

 2022-23ನೇ ಸಾಲಿಗೆ ಶೇ.75.19, 2023-24 ಶೇ.53.20 ಹಾಗೂ 2024-25ನೇ ಸಾಲಿನಡಿ ಕೇವಲ ಶೇ.27.35 ರಷ್ಟು ಮಾತ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಗಳು ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ. ಕಡ್ಡಾಯವಾಗಿ ಮಾರ್ಚ ಅಂತ್ಯದೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಾಂತ್ರಿಕ ಸಂಯೋಜಕರು ಹಾಗೂ ತಾಂತ್ರಿಕ ಸಹಾಯಕರಿಗೆ ನಿರ್ದೇಶನ ನೀಡಿದರು. 204-25ನೇ ಸಾಲಿನಲ್ಲಿ ಚಾಲ್ತಿಯಲ್ಲಿರುವ 13 ಎಸ್.ಎಚ್.ಜಿ ಶೆಡ್‌ಗಳನ್ನು ಕೂಡಲೇ ಪೂರ್ಣಗೊಳಿಸುವುದು. 

2025-26ನೇ ಸಾಲಿಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಪೂರ್ಣಗೊಳಿಸಲು ಸಭೆಗೆ ತಿಳಿಸಿದರು. ಸಾಮಾಜಿಕ ಪರಿಶೋಧನೆಯ 2550 ಪ್ರಕರಣಗಳು ಬಾಕಿ ಇದ್ದು, ನಿನ್ನೆ ನಡೆದ ಅಭಿಯಾನದಡಿ ಒಂದೇ ದಿನದಲ್ಲಿ 473 ಎ.ಟಿ.ಆರ್ ಇತ್ಯರ್ಥಗೊಳಿಸುವುದು ಪ್ರಶಂಸನೀಯ ಅದರಂತೆ ಬಾಕಿ ಇರುವ ಪ್ರಕರಣಗಳನ್ನು ಅಡಾಕ್ ಸಮಿತಿ ಸಭೆಗಳನ್ನು ಮಾಡುವುದರ ಮೂಲಕ ಮುಕ್ತಾಯಗೊಳಿಸಲು ನಿರ್ದೇಶನ ನೀಡಿದರು. 

ಈ ಸಂದರ್ಭದಲ್ಲಿ, ಯೋಜನಾ ನಿರ್ದೇಶಕ (ಡಿ.ಆರ್.ಡಿ.ಎ) ರವಿ ಎನ್ ಬಂಗಾರೆಪ್ಪನವರ, ಜಿಲ್ಲಾ ಪಂಚಾಯತಿ ಎ.ಡಿ.ಪಿ.ಸಿ ಬಸವರಾಜ್ ಎನ್. ಜಿಲ್ಲಾ ಐ.ಇ.ಸಿ ಸಂಯೋಜಕರ ಪ್ರಮೋದ ಗೋಡೆಕರ, ಡಿ.ಎಮ್.ಐ.ಎಸ್ ಮೌನೇಶ ಚೌಡಕಿ ಅಕೌಂಟ್ಸ್ ಮ್ಯಾನೇಜರ್ ಮಂಜುನಾಥ ಮಳಗಲಿ, ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ, ತಾಂತ್ರಿಕ ಸಂಯೋಜಕರು, ಟಿ.ಎಮ್.ಐ.ಎಸ್, ತಾಂತ್ರಿಕ ಸಹಾಯಕರು ಹಾಗೂ ಜಿ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ